ದಾಸರ ಕೀರ್ತನೆಗಳು ಭಕ್ತಿಪ್ರಧಾನವಾದವು – ಶ್ರೀಮತಿ ಡಿ.ಕಾವೇರಿ ಸುರೇಶ್ ಅಭಿಮತ.
ಚಳ್ಳಕೆರೆ ನ.03

ದಾಸರ ಕೀರ್ತನೆಗಳು ಭಕ್ತಿ ಪ್ರಧಾನ ಸಂದೇಶಗಳನ್ನು ಕೊಡುತ್ತೇವೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಡಿ.ಕಾವೇರಿ ಸುರೇಶ್ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ದಾಸಸಾಹಿತ್ಯ ಪರಿಚಯ ಒಂದು ಅವಲೋಕನ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸವನ್ನು ನೀಡುತ್ತ ಹೇಳಿದರು.

ದಾಸ ಸಾಹಿತ್ಯದಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರುಗಳೆಂದರೆ ಪುರಂದರದಾಸರು ಮತ್ತು ಕನಕದಾಸರು,ಅವರು ಸೇರಿದಂತೆ ಇತರ ಅನೇಕ ದಾಸರು ರಚಿಸಿರುವ ಕೀರ್ತನೆಗಳನ್ನು ನಮ್ಮ ಬದುಕಿನಲ್ಲಿ ಅನುಸಂಧಾನ ಮಾಡುವುದರಿಂದ ಭಗವಂತನ ದಿವ್ಯ ದರುಶನ ಭಾಗ್ಯವನ್ನು ಪಡೆದು ಮುಕ್ತಿ ಪದವಿಯನ್ನು ಪಡೆಯಬಹುದು.

ಆದ್ದರಿಂದ ದಿನನಿತ್ಯ ಕೀರ್ತನೆಗಳ ಗಾಯನ ಮತ್ತು ಶ್ರವಣ ಮಾಡುವ ಅಭ್ಯಾಸವನ್ನು ಬೆಳೆಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀಮತಿ ಎಂ ಗೀತಾ ನಾಗರಾಜ್, ಸಿ.ಎಸ್.ಭಾರತಿ,ಸುಮನಾ, ವೀರಮ್ಮ, ರಶ್ಮಿ ವಸಂತ, ದ್ರಾಕ್ಷಾಯಣಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಅಂಬುಜಾ ಶಾಂತಕುಮಾರ್, ಜಿ.ಯಶೋಧಾ ಪ್ರಕಾಶ್, ಯಶಸ್ವಿ,ಸುಧಾಮಣಿ, ಪಂಕಜ, ಯತೀಶ್ ಎಂ ಸಿದ್ದಾಪುರ,ಚೇತನ್,ಉಷಾ ಶ್ರೀನಿವಾಸ್, ವೆಂಕಟಲಕ್ಷ್ಮೀ, ಮಂಜುಳಾ ಉಮೇಶ್, ಸರಸ್ವತಿ, ಪುಷ್ಪಲತಾ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

