ಅಘೋರಮಣಿಯ ವಾತ್ಸಲ್ಯ ಭಾವದ ಸಾಧನಾ ಜೀವನ ರೋಮಾಂಚನಕಾರಿ – ಶ್ರೀಮತಿ ಅಂಬುಜಾ ಶಾಂತಕುಮಾರ್.
ಚಳ್ಳಕೆರೆ ನ.04

ಅಘೋರಮಣಿಯ ವಾತ್ಸಲ್ಯಭಾವದ ಸಾಧನಾ ಜೀವನ ಅತ್ಯಂತ ರೋಮಾಂಚನಕಾರಿ ಮತ್ತು ನಮ್ಮೆಲ್ಲರಿಗೂ ಮಾರ್ಗದರ್ಶಿಯದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಅಂಬುಜಾ ಶಾಂತಕುಮಾರ್ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-2″ರ ಗ್ರಂಥ ಪಾರಾಯಣವನ್ನು ಮಾಡುತ್ತ “ವರವಾದ ವೈಧವ್ಯ” ಅಧ್ಯಾಯವನ್ನು ವಾಚಿಸಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ, ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.
ಸತ್ಸಂಗದಲ್ಲಿ ಸದ್ಭಕ್ತರಾದ ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಮಂಜುಳಾ ಉಮೇಶ್, ಸುಧಾಮಣಿ, ಜಿ.ಯಶೋಧಾ ಪ್ರಕಾಶ್, ವೆಂಕಟಲಕ್ಷ್ಮೀ, ಯತೀಶ್.ಎಂ ಸಿದ್ದಾಪುರ, ಪುಷ್ಪಲತಾ, ಸಂತೋಷ್ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

