ಮಾಲೂರು ಶಾಸಕರ ಪುತ್ರ ಸುನೀಲ್ ನಂಜೆಗೌಡ ಅವರ ಮೇಲೆ ಹಲ್ಲೆ ಘಟನೆ – ಕುರಿತು ಸ್ಪಷ್ಟೀಕರಣ.
ಕೋಲಾರ ಸ.09

ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮಾಲೂರು ಶಾಸಕರ ಪುತ್ರ ಸುನೀಲ್ ನಂಜೆಗೌಡ ಅವರ ಮೇಲೆ ಹಲ್ಲೆಯಾಗಿದೆ ಎಂಬ ವರದಿಯ ಕುರಿತು ಈ ಕೆಳಗಿನಂತೆ ಸ್ಪಷ್ಟನೆ ನೀಡಲು ಬಯಸುತ್ತೇವೆ.
ಇತ್ತೀಚಿಗೆ ನಡೆದ ಪಂಜಿನ ಮೆರವಣಿಗೆಯ ಸಂದರ್ಭದಲ್ಲಿ ಜನ ಸಂದಣಿಯ ಒತ್ತಡದಿಂದ ಉಂಟಾದ ನೂಕು ನುಗ್ಗಲು ಮತ್ತು ಗದ್ದಲದ ವಾತಾವರಣದಲ್ಲಿ ಈ ಘಟನೆ ನಡೆದಿದೆ. ಕೆಲವೇ ಕೆಲವು ಕ್ಷಣಗಳ ಕಾಲ ನಡೆದ ಈ ಗೊಂದಲದ ಸನ್ನಿವೇಶದಲ್ಲಿ ಸುನೀಲ್ ನಂಜೆಗೌಡ ಅವರು ಸಾರ್ವಜನಿಕರ ಗುಂಪಿನಲ್ಲಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಕೂಡಲೇ ಮಧ್ಯ ಪ್ರವೇಶಿಸಿ, ಗದ್ದಲವನ್ನು ಶಮನ ಗೊಳಿಸಿದರು.
ಈ ಘಟನೆಯ ಕುರಿತು ಸುನೀಲ್ ನಂಜೆಗೌಡ ಅವರ ವೈಯಕ್ತಿಕ ಘನತೆ ಅಥವಾ ಗೌರವಕ್ಕೆ ಯಾವುದೇ ಧಕ್ಕೆ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ಇದು ರಾಜಕೀಯ ದ್ವೇಷ ಅಥವಾ ವೈಯಕ್ತಿಕ ಹಗೆತನ ದಿಂದ ನಡೆದ ಘಟನೆಯಲ್ಲ. ಬದಲಾಗಿ, ಜನ ಸಮೂಹದ ನೂಕು ನುಗ್ಗಲಿನಿಂದ ಉಂಟಾದ ಅನಿರೀಕ್ಷಿತ ಸನ್ನಿವೇಶವಷ್ಟೇ.
ದಯವಿಟ್ಟು ಯಾವುದೇ ಸುಳ್ಳು ಅಥವಾ ದೃಢೀಕರಿಸದ ಮಾಹಿತಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮ ಮಿತ್ರರಲ್ಲಿ ಮತ್ತು ಸಾರ್ವಜನಿಕರಲ್ಲಿ ನಾವು ಮನವಿ ಮಾಡುತ್ತೇವೆ.
ಸಾರ್ವಜನಿಕರು ಈ ವಿಷಯದ ಕುರಿತು ಯಾವುದೇ ತಪ್ಪು ಕಲ್ಪನೆಗಳನ್ನು ಮಾಡಿ ಕೊಳ್ಳಬಾರದು. ಪರಿಸ್ಥಿತಿಯನ್ನು ತಿಳಿ ಗೊಳಿಸಲು ತ್ವರಿತವಾಗಿ ಕಾರ್ಯ ನಿರ್ವಹಿಸಿದ ಪೊಲೀಸ್ ಇಲಾಖೆಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.
ವರದಿ:ಆರತಿ.ಗಿಳಿಯಾರು.ಉಡುಪಿ

