2012-13ನೇ ಸಾಲಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಸೇರಿ ವಿಶೇಷ ಸನ್ಮಾನ ಹಾಗೂ ಸ್ಮರಣಿಕೆ ನೀಡಿ ಗುರುವಂದನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು……!

ಇಳಕಲ್ (MARCH-27) :-

ಶ್ರೀ ವಿಜಯ ಮಹಾಂತೇಶ್ ವಿದ್ಯಾವರ್ಧಕ ಸಂಘ ಇಳಕಲ್ ಮತ್ತು ಎಸ್ ಆರ್ ಕಂಠಿ ಶಿಕ್ಷಣ ಮಹಾವಿದ್ಯಾಲಯ ಇಳಕಲ್. 2012-13 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ನಿನ್ನೆ ರವಿವಾರ ದಿನ ಎಸ್ ಆರ್ ಕಂಠಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡಿರುವ ಪರಮಪೂಜ್ಯ ಮ.ನಿ.ಪ್ರ ಶ್ರೀ ಗುರು ಮಹಾಂತ ಸ್ವಾಮಿಗಳವರು ಗುರು ಶಿಷ್ಯರ ಪರಂಪರೆ ಸೂರ್ಯ ಚಂದ್ರ ಇರುವರಿಗೂ ಅಜರಾಮರವಾಗಿ ಉಳಿಯುತ್ತದೆ. ಇವತ್ತು ಪ್ರತಿಯೊಬ್ಬ ವಿದ್ಯಾರ್ಥಿಯು ಯಾವುದೇ ನೌಕರಿಯಲ್ಲಿ ಇದ್ದಾನೆ ಎಂದರೆ ಅದಕ್ಕೆ ಗುರುಗಳ ಬೋಧನೆಯ ಅತ್ಯಮೂಲ್ಯವಾಗಿದ್ದು. ಗುರು ಇಲ್ಲದೆ ಯಾವ ವಿದ್ಯಾರ್ಥಿಯ ಭವಿಷ್ಯ ಕೂಡ ರೂಪುಗೊಳ್ಳುವುದು ಕಷ್ಟಕರ. ನಾವೆಲ್ಲರೂ ಗುರುವಿಗೆ ಗುಲಾಮರಾಗಿರೋಣ ಗುರುವಿನ ಮಾರ್ಗದರ್ಶನದಲ್ಲಿ ನಮ್ಮ ಬದುಕನ್ನ ಸಾಗಿಸೋಣ ಎಂದು ದಿವ್ಯ ಸಾನಿಧ್ಯ ವಹಿಸಿಕೊಂಡಿರುವ ಪರಮಪೂಜ್ಯರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳ ಹಾಗೂ ಗುರುಬಳಗವನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅಮರಜ್ಞಾನ ದಿವ್ಯ ಚೇತನಗಳಾದ ಶ್ರೀ ಡಾ.ಜಿ.ಸಿ.ದೊಡ್ಡಮನಿ ಹಾಗೂ ದಿವಂಗತ ಶ್ರೀ ಅಶೋಕ.ಎನ್.ಹಲಗತ್ತಿ ಗುರುಗಳ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. 2012 13 ನೇ ಸಾಲಿನ ಬಿ. ಈಡಿ ವಿದ್ಯಾರ್ಥಿಗಳಿಗೆ ಕಲಿಸಿದ ಡಾ.ವಿ.ಕೆ ವಂಶಾಕೃತಮಠ,ಶ್ರೀ ಎಸ್.ವಿ ಸಮಾಳದ,ಡಾ.ಆರ್. ಕೆ ಕುಲಕರ್ಣಿ,ಡಾ. ಸಿ.ಎಸ್ ಬಂಡರಗಲ್ಲ. ಶ್ರೀ ಬಿ.ಹೆಚ್ ಮನ್ಮಥನಾಳ, ಶ್ರೀಮತಿ ಡಾ. ಅನ್ನಪೂರ್ಣ ಮಠ, ಹಾಗೂ ಪ್ರಸ್ತುತ ಎಸ್ ಆರ್ ಕಂಠಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಡಾ.ಆರ್.ಜಿ ಪೆಡ್ನೇಕರ ಮತ್ತು ಶ್ರೀ ನಾಗರಾಜ ಬೊಮ್ಮನಾಳ ಹಾಗೂ ಪ್ರಸ್ತುತ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗುರುಬಳಗಕ್ಕೂ ಹಾಗೂ ಸಿಬ್ಬಂದಿ ವರ್ಗದವರಿಗೂ 2012-13ನೇ ಸಾಲಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಸೇರಿ ವಿಶೇಷ ಸನ್ಮಾನ ಹಾಗೂ ಸ್ಮರಣಿಕೆ ನೀಡಿ ಗುರುವಂದನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ನಿರೂಪಣೆ, ಪ್ರಾರ್ಥನೆ,ಸ್ವಾಗತ ಹಾಗೂ ವಂದನಾರ್ಪಣೆಯನ್ನು ಹಳೆ ವಿದ್ಯಾರ್ಥಿಗಳೇ ವಹಿಸಿಕೊಂಡಿದ್ದರು.

ವರದಿಗಾರರು : ಮುತ್ತು. ಯ. ವಡ್ಡರ  ಹಿರೇಮಾಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button