ಭಕ್ತ ಶ್ರೇಷ್ಟ ಶ್ರೀ ಕನಕದಾಸರ – 538 ನೇ. ಜಯಂತಿ ಆಚರಣೆ.
ಮಾನ್ವಿ ನ.09

ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಭಕ್ತ ಶ್ರೇಷ್ಟ ಶ್ರೀ ಕನಕದಾಸರ 538 ನೇ. ಜಯಂತಿ ಅಂಗವಾಗಿ ಭಕ್ತ ಶ್ರೇಷ್ಟ ಶ್ರೀ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಿಸಿ ಶಾಸಕ ಹಂಪಯ್ಯ ನಾಯಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ಶ್ರೀ ಕನಕದಾಸರು ದಾಸ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಟರಾದ ಕಿರ್ತನಕಾರರಾಗಿದ್ದು ಅವರು ತಮ್ಮ ಕಿರ್ತನೆಗಳ ಮೂಲಕ ಸಮಾಜದಲ್ಲಿ ಮೌಡ್ಯಚಾರಣೆಗಳನ್ನು ಕಂದಾಚರಗಳನ್ನು ಹೊಗಲಾಡಿಸುವುದಕ್ಕೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು.

ಇವರು ಕನ್ನಡದಲ್ಲಿ ಹಲವು ಶ್ರೇಷ್ಟವಾದ ಕೃತಿಗಳನ್ನು ,ಕಿರ್ತನೆಗಳನ್ನು ರಚಿಸಿದ್ದಾರೆ. ಅವರ ಜೀವನ ಹಾಗೂ ಸಂದೇಶಗಳನ್ನು ನಾವೇಲ್ಲರು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾಗಿದೆ ಎಂದು ತಿಳಿಸಿದರು.ತಹಶೀಲ್ದಾರ್ ಕಚೇರಿಯ ಆವರಣದಲ್ಲಿನ ವೇದಿಕೆಯ ಕಾರ್ಯಕ್ರಮಗಳನ್ನು ಪುರಸಭೆ ಅಧ್ಯಕ್ಷರಾದ ಲಕ್ಷೀ ಡಿ.ವೀರೇಶ ರವರು ಉದ್ಘಾಟಿಸಿದರು.

ಡಾ, ಹನುಮೇಶ ನಸ್ಲಪೂರ್ ಕನಕದಾಸರ ಜೀವನ ಹಾಗೂ ಸಂದೇಶಗಳ ಕುರಿತು ವಿಶೇಷವಾದ ಉಪನ್ಯಾಸವನ್ನು ನೀಡಿದರು.ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ನಿವೃತ್ತ ಉಪನ್ಯಾಸಕ ರಾಮಣ್ಣ, ವೆಂಕನಗೌಡ ಮಾಲಿಪಾಟೀಲ್ ಬೊಮ್ಮನಾಳ್, ವೆಂಕಣ್ಣ ಮಾಸ್ತರ , ಬಾಬು ಬೆಟ್ಟದೂರು, ವಣಕೇರಪ್ಪ ರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪಟ್ಟಣದ ಡಾ, ಬಿ.ಆರ್. ಅಂಬೇಡ್ಕರ್ ವೃತ್ತ ದಿಂದ ಬಸವ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಯ ವರೆಗೆ ಭಕ್ತ ಶ್ರೇಷ್ಟ ಶ್ರೀ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಿತು.ಕಾರ್ಯಕ್ರಮದಲ್ಲಿ ರಾಜಾ ವೆಂಕಟಪ್ಪನಾಯಕ, ಅಬ್ದುಲ್ ಗಾಫೂರ್ ಸಾಬ್, ಗ್ರೇಡ್ -2 ತಹಸೀಲ್ದಾರ್ ಅಬ್ದುಲ್ ವಾಹಿದ್.

ಕುರುಬರ ಸಂಘದ ತಾ.ಅಧ್ಯಕ್ಷರಾದ ಸತ್ಯನಾರಾಯಣ ಮುಸ್ಟೂರು, ಪಿ.ಐ ಸೋಮಶೇಖರ ಎಸ್, ಕೆಂಚರೆಡ್ಡಿ, ಭಾಗಯ್ಯನಾಯಕ, ಬಿ.ಕೆ ಅಂಬರೇಶಪ್ಪ, ಶಿವರಾಜ ನಾಯಕ, ಈರಣ್ಣ,ಸುರೇಶಕುರ್ಡಿ, ರಂಗಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.ಬಾಕ್ಸ್ ನ್ಯೂಸ್:-ಪಟ್ಟಣದ ಪ್ರಮುಖ ವೃತ್ತದಲ್ಲಿ ಭಕ್ತ ಶ್ರೇಷ್ಟ ಶ್ರೀ ಕನಕದಾಸರ ಭಾವಚಿತ್ರ ಮೆರವಣಿಗೆ ಜರುಗಿತು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

