ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ – ಡಾ, ಎಸ್.ಎಸ್ ಹಿರೇಮಠ್.
ಮಾನ್ವಿ ನ.10

ಮೌನ ಮಿತ್ರ ಯೋಗ ಸಮಿತಿ ಮಾನ್ವಿ ಗ್ಲೋಬಲ್ ಯೋಗ ಸಮಿತಿ ವತಿಯಿಂದ ಮಾನ್ವಿಯಲ್ಲಿ ಪೂರ್ವಸಿದ್ಧತ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಯೋಗಾಚಾರ್ಯ ಡಾ!! ಎಸ್ ಎಸ್ ಹಿರೇಮಠ ಪ್ರಾಂಶುಪಾಲರು ಶಿವಾನಂದ ಯೋಗ ಕಾಲೇಜ್ ಗದಗ ಮಾತನಾಡಿ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರ ಬೇಕಾದರೆ ನಾವು ದಿನನಿತ್ಯ ಯೋಗ ಮಾಡಬೇಕೆಂದು ತಮ್ಮ ಮುಖ್ಯ ಅತಿಥಿ ಭಾಷಣದಲ್ಲಿ ಹೇಳಿ ಕೊಟ್ಟರು. ಹಾಗೂ ಇನ್ನೂರು ಅತಿಥಿ ಮುಖ್ಯ ಅತಿಥಿ ದೇವಯ್ಯ ಮುಖ್ಯೋಪಾಧ್ಯಾಯರು ಮಾತನಾಡಿ ಪ್ರತಿಯೊಬ್ಬರು ಸ್ವಚ್ಛಂದವಾಗಿರ ಬೇಕಾದಾಗ ದಿನಾಲು ತಪ್ಪದೇ ಯೋಗ ಮಾಡಿ ಅಂತ ಹೇಳಿದರು. ಈ ಕಾರ್ಯಕ್ರಮದ ಉದ್ಘಟಕರಾದ ಶಂಕರಾನಂದ ಸಿಇಒ ಶ್ರೀ ವಿರೂಪಾಕ್ಷೇಶ್ವರ ಪತ್ತಿನ ಸಹಕಾರಿ ನಿಗಮ ನಿಯಮಿತ. ಪ್ರತಿಯೊಬ್ಬ ವ್ಯಕ್ತಿಗಳು ಆರೋಗ್ಯವಾಗಿರಬೇಕಾದರೆ ದಿನಾಲು ಯೋಗ ಮಾಡಿ ಎಂದು ತಮ್ಮ ಉದ್ಘಾಟನೆ ಭಾಷಣದಲ್ಲಿ ತಿಳಿಸಿದರು.ಹಾಗೂ ಈ ಕಾರ್ಯಕ್ರಮದ ಅತಿಥಿ ಅನ್ನದಾನಯ್ಯ ಯೋಗ ಗುರುಗಳು ಮಾನ್ವಿ ಪ್ರತಿಯೊಬ್ಬರು ಯೋಗ ಕಲಿಯಲು ಗುರುದಕ್ಷಿಣೆ ನೀಡಿದಾಗ ಮಾತ್ರ ವಿದ್ಯಾರ್ಥಿಗೆ ಮೋಕ್ಷ ಸಿಗುತ್ತದೆ ಎಂದು ತಮ್ಮ ಮಾತಿನಲ್ಲಿ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಮೌನೇಶ್ ಪೋತ್ನಾಳ್ ಮಾತನಾಡಿ ಮುಚ್ಚಿಟ್ಟಿದ್ದು ಕೊಳೆಯುತ್ತದೆ ಬಿಚ್ಚಿಟ್ಟಿದ್ದು ಹೊಳೆಯುತ್ತದೆ ಎಂಬ ಮಾತಿನಂತೆ ತಾವು ಕಲಿತ ಯೋಗ ಜ್ಞಾನವನ್ನು ಮಾನ್ವಿಯ ಜನತೆಗೂ ಸಹ ಕಲಿಸಬೇಕೆಂದು ಪಣತೊಟ್ಟು ಎಲ್ಲರಿಗೂ ಕಲಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಜಯ್ ಕುಮಾರ್ ನಿರೂಪಿಸಿದವರು ಸಿಡಿ ಶಿಕ್ಷಕರು ಮಾನ್ವಿ ಹಾಗೂ ಪ್ರಾರ್ಥನ ಗೀತೆಯನ್ನು ಕುಮಾರಿ ಶಾಂತ ಬಲ್ಲಟಗಿ ಹಾಡಿದರು. ಸ್ವಾಗತವನ್ನು ನೀಲಕಂಠಪ್ಪ ಮಾನ್ವಿ ಸ್ವಾಗತಿಸಿದರು. ಸಿದ್ದ ಮಲ್ಲಯ್ಯ ಹಿರೇಮಠ ವಂದಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

