“ಬಿಸಿ ಹೋರಾಟ”…..

ಬಿಸಿಯ ಕಣಿವೆಯಲ್ಲಿ ಬೆವರು
ಸುರಿಯುತ್ತಿದ್ದಾನೆ
ಮಣ್ಣಿನ ಮಗು ನಾಡಿನ ಬಗ್ಗೆ ಶ್ರಮಿಸುತ್ತಿದ್ದಾನೆ
ಹಸಿವಿನ ಹೊತ್ತಿನಲ್ಲಿ ಬೆಳೆ ಬೆಳೆಯುತ್ತಾನೆ
ಆದರೆ ಅದರ ಬೆಲೆ ಕೇಳಿದಾಗ
ಮೌನನಾಗುತ್ತಾನೆ
ಮಣ್ಣಿನ ಮಗನ ಹಕ್ಕು ಕಾಗದಲ್ಲಿ ಸಿಕ್ಕಿದೆ
ರಾಜಕಾರಣಿಗಳ ನಗು ನೋಡಿ ಹೃದಯ
ಸುಟ್ಟಿದೆ
ಹೊಲದಲ್ಲಿನ ಹೋರಾಟ ಬಿಸಿಯ ಕತ್ತಲಲ್ಲಿ
ರಾಜಕೀಯದ ವೇದಿಕೆ ನಕಲಿ ಬೆಳಕಿನಲ್ಲಿ
ಮಣ್ಣಿನ ವಾಸನೆ ರೈತನ ಹೃದಯದ ನಡಿಗೆ
ಭ್ರಷ್ಟಾಚಾರದ ವ್ಯವಸ್ಥೆ ಕೇವಲ ನೋಟುಗಳ
ಗಡಿಗೆ
ಬೆಳೆ ಎದ್ದಿದೆ ನಿನ್ನ ಬಲದ ಚಿಹ್ನೆಯಾಗಿ
“ಬಿಸಿ ಹೋರಾಟದ” ಮದ್ಯ ಹುಟ್ಟಿದೆ
ವಿಜಯದ ಮೇರಾಗಿ
ಮಣ್ಣಿನ ದಾರಿಯಲ್ಲಿ ಸತ್ಯ ಮಲಗಿದೆ
ರೈತನ ಕೈಯಲ್ಲಿ ನವ ಭಾರತ ಹುಟ್ಟಿದೆ.
ದೀಪಿಕಾ.ಚಂ.ಹಲಗಿ…✍️

