“ಸ(ಕಿ)ವಿ ಮಾತು”…..

ಮಾತು ಯಾವ(ರ)ದಾದರೇನು ಹೃದಯ
ಒಪ್ಪಲಿ
ಕಾಯಕ ಯಾರು ಮಾಡಿದರೇನು ನಿಷ್ಠೆ
ಪ್ರಾಮಾಣಿಕತೆ ಮುಖ್ಯವು
ಸ್ನೇಹಿತರು ಯಾರಾದರೇನು ನಿಷ್ಕಲ್ಮಶ
ಸಹಾಯ ಸಹಕಾರ ಅವಶ್ಯಕವು
ಜ್ಞಾನವಿದ್ದಾಗ ಸಂದೇಶಗಳು ಸಮಾಜ ಮುಖಿ
ಪ್ರಸಾರತೆ ಇರಲಿ
ಪದವಿ ಶ್ರೀಮಂತಿಕೆ ಜೋತೆ ವಿನಯ ಸಹನೆಯ
ಸಂಯೋಜತೆವಿರಲಿ
ಬಂದ ಲಾಭಾಂಶದಲಿ ಸ್ವಲ್ಪ ಅಲ್ಪವಾದರೂ
ದೀನ ದುರ್ಬಲರಿಗೆ ಹಂಚಿಕೆ ಮಾಡಿ
ನೀನು ಮಾಡುವ ಕಾಯಕ ಯಾರು
ನೋಡದಿದ್ದರೂ ಭಗವಂತ ಖಂಡಿತ ವಿಕ್ಷಿಪನು
ನೀ ಮಾಡುವ ಒಳ್ಳೆಯ ವಿಚಾರಗಳು ಉತ್ತಮ
ಫಲವೇ ಲಭ್ಯತೆಯು
ಸ(ಕಿ)ವಿ ಮಾತು ಕೇಳುಗರ ಜನಮನ ಅರಳಿ
ಜಗದೆಲ್ಲೆಡೆ ಬೆಳಗಲಿ
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

