ಅಸಂಘಟಿತ ವಲಯದ ಹಡಪದ ಅಪ್ಪಣ್ಣ ಕ್ಷೌರಿಕರಿಗೆ – ಲೇಬರ್ ಸ್ಮಾರ್ಟ್ ಕಾರ್ಡ್ ವಿತರಣೆ.
ಶಹಾಬಾದ್ ಡಿ.02

ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕು ಮಟ್ಟದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ ಎಂದು ಶ್ರೀ ಭಾಲ ಬ್ರಹ್ಮಚಾರಿ ರಾಜ ಶಿವಯೋಗಿ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಬಹು ವರ್ಷಗಳ ಒಡನಾಟದ ಬಗ್ಗೆ ತಿಳಿಸಿದರು, ಹಡಪದ ಸಮುದಾಯ ಸರ್ವರಿಗೂ ಶುಭವನ್ನು ಬಯಸುವ ಸಮುದಾಯವಾಗಿದ್ದು. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಗಟ್ಟಿನಿಂದ ಹೋರಾಡಬೇಕು ಎಂದು ಪೂಜ್ಯರು ತಿಳಿಸಿದರು.
ಮಂಗಳವಾರ ನಗರದ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿ ಸಲಾಗಿದ್ದ ಕಲಬುರಗಿ ಜಿಲ್ಲೆಯ ವಿವಿಧ ವರ್ಗದ ಅಸಂಘಟಿತ ಕಾರ್ಮಿಕರ ಜೊತೆಯಲ್ಲಿ ನಮ್ಮ ಕ್ಷೌರಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ದುಡಿಯುವ ಜನರಲ್ಲಿ 85% ಅಸಂಘಟಿತ ವಲಯದ ಕಾರ್ಮಿಕರಾಗಿದ್ದಾರೆ. ವಿವಿಧ ವಲಯದಲ್ಲಿ ಕಾರ್ಯ ನಿರ್ವಹಿಸುವುದರ ಮೂಲಕ ರಾಜ್ಯಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ’ ಯನ್ನು ಅನುಷ್ಠಾನ ಗೊಳಿಸಲಾಗಿದೆ. ಈ ಯೋಜನೆಯಡಿ 101 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದ್ದು, ಸುಮಾರು 35 ಲಕ್ಷ ಕಾರ್ಮಿಕರು ಒಳ ಗೊಂಡಿದ್ದಾರೆ. ಇದರಲ್ಲಿ ಹಡಪದ ಅಪ್ಪಣ್ಣ ಸಮಾಜದ ಕಾಯಕ ಬಂಧುಗಳು ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳು ಅವರಿಗೆ ನೊಂದಾಯಿಸಿ (ಲೇಬರ್ ಸ್ಮಾರ್ಟ್ ಕಾರ್ಡ್ ನೀಡಲಾಗಿದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷರು ಹೇಳಿದರು. ಹಾಗೇ ಕ್ಷೌರಿಕರಿಗೆ ಅಸಂಘಟಿತ ವಲಯದ ಕಾರ್ಮಿಕರಿಗೆ ಲೇಬರ್ (ಸ್ಮಾರ್ಟ್) ಗಳನ್ನು ವಿತರಿಸು ಭಾರತ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಯ ಮೂಲಕ ಕ್ಷೌರಿಕರಿಗೆ ಗುರುತಿಸುವಿಕೆ. ಪ್ರಮುಖ ಯೋಜನೆಗಳು ಇ-ಶ್ರಮ್ ಪೋರ್ಟಲ್, ಅಸಂಘಟಿತ ಕ್ಷೌರಿಕ ಕಾರ್ಮಿಕರಿಗೆ ರಾಷ್ಟ್ರೀಯ ಡೇಟಾಬೇಸ್ ಅನ್ನು ರಚಿಸುವುದು, ಇದರ ಮುಖ್ಯ ಉದ್ದೇಶ. ಈ ಪೋರ್ಟಲನಲ್ಲಿ ನೊಂದಾಯಿಸಿ ಕೊಳ್ಳುವ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಬಂಧುಗಳು ಇತರ ಕಾರ್ಮಿಕರು ವಿಶಿಷ್ಟವಾದ 12 – ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ (UNA) ಇರುವ ಇ-ಶ್ರಮ್ ಕಾರ್ಡ್ (ಸ್ಮಾರ್ಟ್ ಕಾಡ್೯ ರೂಪದಲ್ಲಿ) ನೀಡಲಾಗಿದೆ. ಈ ಕಾರ್ಡ್ ಮೂಲಕ ಕ್ಷೌರಿಕರು (ಕಾರ್ಮಿಕರು) ಪ್ರಧಾನ ಮಂತ್ರಿ . ಸುರಕ್ಷಾ ಬೀಮಾ ಯೋಜನೆ (LMSBY) ಅಡಿಯಲ್ಲಿ ₹2 ಲಕ್ಷದ ಅಪಘಾತ ವಿಮಾ ರಕ್ಷಣೆ ಸೇರಿದಂತೆ ಅಸಂಘಟಿತ (ಹಡಪದ) ಕ್ಷೌರಿಕರಿಗೆ ಸೇರಿದಂತೆ ವಿವಿಧ ವರ್ಗದವರಿಗೆ ಗುರುತಿನ ಚೀಟಿ. ಸ್ಮಾರ್ಟ್ ಕಾರ್ಡ್ ವಿತರಣೆ, ಆರೋಗ್ಯ ವಿಮೆ.ಶಿಕ್ಷಣ, ಸಹಾಯ ಧನ. ಪಿಂಚಣಿ ಯೋಜನೆಗಳು ಮತ್ತು ಇತರ ಕಲ್ಯಾಣ ನಿಧಿಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಮತ್ತು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಅಭಿವೃದ್ಧಿಯಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ ಆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಹಸ್ತ ನೀಡಿದಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸಂಘಟನೆ ಅವಶ್ಯಕ. ಪ್ರಸ್ತುತ ದಿನಗಳಲ್ಲಿ ಹಡಪದ ಅಪ್ಪಣ್ಣ ಸಮಾಜ ಜಾಗೃತಿ ಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಹೇಳಿದರು. ಶಹಾಬಾದ ತಾಲೂಕು ಬಸವೇಶ್ವರ ನಗರದ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಅಸಂಘಟಿತ ವಲಯದ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಮೂಲಕ ಮುಖಂಡರೊಂದಿಗೆ ಸೇರಿ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿ ಸೂರ್ಯಕಾಂತ ಸರ್ ಅವರ ಅನುಪಸ್ಥಿತಿಯಲ್ಲಿ ಹಾಗೂ ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ ಮಾತನಾಡಿದ ಅವರು ಸರ್ವೇ ಜನಃ ಸುಖಿನೋ ಭವಂತು ಎಂಬ ವಾಣಿಯಂತೆ ಹಡಪದ ಅಪ್ಪಣ್ಣನ ಸಮಸ್ತ ಜನರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಂಘಟನೆಯಿಂದ ಯಾವುದೇ ಸಮಾಜದ ಅಭಿವೃದ್ಧಿ ಸಾಧ್ಯ, ಪ್ರಾಮಾಣಿಕವಾಗಿ ಸಂಘಟನೆಯಲ್ಲಿ ಕೆಲಸ ಮಾಡಿದರೆ ಜನ ಎತ್ತರದ ಸ್ಥಾನದಲ್ಲಿ ಕೂರಿಸುತ್ತಾರೆ ಎಂಬುದಕ್ಕೆ ನಾನು ಮತ್ತು ಈರಣ್ಣ ಅವರೇ ಉದಾಹರಣೆ. ಕಾರ್ಯಾಧ್ಯಕ್ಷರ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ್ದೆವು ಎಂದರು.
ಇದೇ ಸಂಧರ್ಭದಲ್ಲಿ ಸಮಾಜದ ಹಿರಿಯ ಮುಖಂಡರು ನಾಗಣ್ಣ ಮುತ್ತಕೋಡ, ಭಾಗಣ್ಣ ಹಡಪದ ದಂಡಗುಂಡ, ನೀಲಕಂಠ ಹಳೇ ಶಹಾಬಾದ, ಹಾಗೂ ಶಹಾಬಾದ ತಾಲೂಕು ಅಧ್ಯಕ್ಷ ಸಿದ್ರಾಮ ಯಾಗಾಪೂರ. ಶಿವಲಿಂಗಪ್ಪ ಶಹಾಬಾದ.ಶಿವಾಜಿ ಶಹಾಬಾದ. ತೋಟೇಂದ್ರ ಶಹಾಬಾದ, ಶರಣಪ್ಪ ಹಡಪದ ಕೊಲ್ಲೂರು, ಅನೀಲಕುಮಾರ ಮಾರಡಗಿ, ಗುರು ಕುಕ್ಕುಂದಾ. ಸಂಗಮೇಶ ಮಾರಡಗಿ. ವಿಶ್ವನಾಥ ಅಲ್ಲೂರ ಬಿ. ಪ್ರಕಾಶ ಹಡಪದ ಹಳ್ಳಿ. ವಿಶ್ವನಾಥ ಹಡಪದ ಮಾರಡಗಿ ಅವರು ಸೇರಿದಂತೆ ಅನೇಕ ಸಮಾಜದ ಮುಖಂಡರು ಭಾಗವಹಿಸಿದ್ದರು ಎಂದು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಗಳು ತಿಳಿಸಿದ್ದರು.

