ಪೌರ ನೌಕರರ ಮುಷ್ಕರ – ಜಯಮ್ಮ.
ಬೀರೂರು ಡಿ.3
ಪೌರ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ನೀಡಬೇಕು ಮತ್ತು ಕೆ.ಜಿ.ಐ.ಡಿ ವ್ಯವಸ್ಥೆ ಮಾಡಬೇಕು ಸರ್ಕಾರಿ ನೌಕರರೆಂದು, ಪರಿಗಣಿಸಬೇಕು ಲೋಡರ್ಸ್ ಮತ್ತು ಕ್ಲೀನರ್ಸ್, ವಾಟರ್ ಸಪ್ಲೈ ಹಾಗೂ ವಾಹನ ಚಾಲಕರು ಡಾಟಾ ಎಂಟ್ರಿ ಆಪರೇಟರ್ ಗಳನ್ನು ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಪರಿವರ್ತಿಸ ಬೇಕು ಎಂದು ಪೌರ ನೌಕರರ ಸಂಘದಿಂದ ಡಿಸೆಂಬರ್ 5 ರಿಂದ ಅನಿಷ್ಟ ಅವಧಿ ಮುಷ್ಕರ ಏರ್ಪಡಿಸಲಾಗಿದೆ ಈ ಒಂದು ಮುಷ್ಕರಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಪೌರ ನೌಕರರ ಸಂಘದ ಅಧ್ಯಕ್ಷರಾದ ಜಯಮ್ಮ ರವರು ತಿಳಿಸಿದ್ದಾರೆ.
ಅವರು ಇಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯ ಅನುದಾನ 7.5 ಲಕ್ಷದಿಂದ 15 ಲಕ್ಷಕ್ಕೆ ಏರಿಸ ಬೇಕು ಎಂದು ಈ ಮುಷ್ಕರ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಈ ಕುರಿತು ತರೀಕೆರೆ ಉಪ ವಿಭಾಗ ಅಧಿಕಾರಿಗಳಿಗೆ ಮನವಿ ನೀಡಿರುತ್ತಾರೆ ಮತ್ತು ಕ್ಷೇತ್ರದ ಶಾಸಕರಾದ ಕೆ.ಎಸ್ ಆನಂದ್ ರವರ ಕಚೇರಿಯ ಆಪ್ತ ಸಹಾಯಕರಿಗೂ ಸಹ ಮನವಿ ಪತ್ರ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಸಿ ಸುಬ್ರಮಣಿ ಉಪಾಧ್ಯಕ್ಷರಾದ ಎಸ್ ಮಲ್ಲೇಶ್, ಕಾರ್ಯದರ್ಶಿ ಎಚ್ ಓ ಲೋಕೇಶಪ್ಪ ಖಜಾಂಚಿ ಡಿ.ಎನ್ ದಿನೇಶ್ ವಾಹನ ಚಾಲಕರಾದ ಧನಂಜಯ ನೀರು ಸರಬರಾಜು ವಿಭಾಗದ ಬಿ.ಎನ್ ರಮೇಶ್ ಮುಂತಾದವರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು

