🚨 ಬ್ರೇಕಿಂಗ್ ನ್ಯೂಸ್! 🚨ಮಾನವೀಯ ಮೌಲ್ಯಗಳ ಸಮ್ಮಿಲನ, ಮಣಿಪಾಲದಲ್ಲಿ ಡಾ, ಶೇಖ್ ವಹೀದ್ ದಾವೂದ್ – ಟ್ರಸ್ಟ್‌ನಿಂದ ವಿಶಿಷ್ಟ ಸ್ನೇಹ ಕೂಟ..!
ಉಡುಪಿ ಡಿ.03

ಮಾನವೀಯತೆ ಮತ್ತು ಸೌಹಾರ್ದದ ಸಂದೇಶ ಸಾರಿದ ವಿಶಿಷ್ಟ ಕಾರ್ಯಕ್ರಮಕ್ಕೆ ಮಣಿಪಾಲದ ಜೈನಬ್ ವೆಲ್ಕಮ್ ಹಾಲ್ ಸಾಕ್ಷಿ ಯಾಯಿತು. ಸಮಾಜ ಸೇವಕ ಹಾಗೂ ಟ್ರಸ್ಟ್‌ನ ಅಧ್ಯಕ್ಷರಾದ ಡಾ, ಶೇಖ್ ವಹೀದ್ ದಾವೂದ್ ಅವರ ನೇತೃತ್ವದಲ್ಲಿ, ಡಾ, ಶೇಖ್ ವಹೀದ್ ದಾವೂದ್ ಫ್ಯಾಮಿಲಿ ಟ್ರಸ್ಟ್ (ರಿ). ವತಿಯಿಂದ ನವೆಂಬರ್ 30, 2025 ರಂದು (ರವಿವಾರ) ಅದ್ದೂರಿಯಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಸಾಧಕರನ್ನು ಗೌರವಿಸುವುದು ಮತ್ತು ಡಾ, ದಾವೂದ್ ಅವರ ಸಾಮಾಜಿಕ ಸೇವೆಯನ್ನು ಶ್ಲಾಘಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಗಣ್ಯರ ಉಪಸ್ಥಿತಿ:-

ಸೇವೆಗೆ ಅಭಿನಂದನೆ ಈ ಸ್ನೇಹ ಸಮ್ಮಿಲನದಲ್ಲಿ ರಾಜ್ಯದ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ನಾಯಕರು ಪಾಲ್ಗೊಂಡಿದ್ದರು. ಮಾಜಿ ಸಚಿವರು ಹಾಗೂ ಮಾಜಿ ಸಂಸದರಾದ ವಿನಯ್ ಕುಮಾರ್ ಸೊರಕೆ ಮತ್ತು ಕರಾವಳಿ ಪ್ರಾಧಿಕಾರ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್ ಅವರು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಟ್ರಸ್ಟ್ ಅಧ್ಯಕ್ಷರಾದ ಡಾ, ಶೇಖ್ ವಹೀದ್ ದಾವೂದ್ ಅವರು ಅಶಕ್ತರಿಗೆ ತೋರಿಸುತ್ತಿರುವ ಕಾಳಜಿ, ಅವರ ನಿರಂತರ ಚಾರಿಟಿ ಕಾರ್ಯಕ್ರಮಗಳು ಮತ್ತು ಮಾನವೀಯ ಸೇವಾ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ, ಸಮಾಜಕ್ಕೆ ಅವರ ಕೊಡುಗೆ ಅನುಕರಣೀಯ ಎಂದು ಬಣ್ಣಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್ ಸೇರಿದಂತೆ ವಿವಿಧ ಮಸೀದಿಗಳ ಮೌಲಾನಾಗಳು, ಡಾ. ಫೈಸಲ್, ಸಂಪತ್ ರಾವ್ ಮತ್ತು ಹಲವು ಸಮಾಜಮುಖಿ ಮುಖಂಡರು ಉಪಸ್ಥಿತರಿದ್ದರು.

ಸಾಧಕರಿಗೆ ಗೌರವ ಸಲ್ಲಿಕೆ ಸಮಾರಂಭದ ಪ್ರಮುಖ ಭಾಗವಾಗಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.

ಎಂ.ಎ ಗಫೂರ್, ನಿತ್ಯಾನಂದ ಒಳಕಾಡು, ಮೌಲಾನಾ ಅಬ್ದುಲ್ ಹಫೀಝ್, ಶಾಂತಾರಾಮ್ ಶೆಟ್ಟಿ, ಅನ್ವರ್ ಶೇಖ್, ಅಜ್ಮಲ್ ಅಸಾದ್ ಸೇರಿದಂತೆ ಹಲವು ಸಾಧಕರು ಟ್ರಸ್ಟ್‌ನಿಂದ ಗೌರವ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ, ಡಾ, ಶೇಖ್ ವಹೀದ್ ದಾವೂದ್ ಅವರ ಅಭಿಮಾನಿ ಬಳಗದ ವತಿಯಿಂದ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ, ಅವರ ಸಮಾಜ ಸೇವೆಯನ್ನು ಗುರುತಿಸಲಾಯಿತು.

ಒಟ್ಟಾರೆಯಾಗಿ, ಡಾ, ಶೇಖ್ ವಹೀದ್ ದಾವೂದ್ ಫ್ಯಾಮಿಲಿ ಟ್ರಸ್ಟ್ ಆಯೋಜಿಸಿದ್ದ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸೌಹಾರ್ದ, ಮಾನವೀಯತೆ ಮತ್ತು ಸೇವಾ ಮನೋಭಾವಕ್ಕೆ ಮತ್ತೊಂದು ವೇದಿಕೆಯಾಗಿ ಯಶಸ್ವಿಯಾಗಿ ಮುಕ್ತಾಯ ಗೊಂಡಿತು.
ವರದಿ:ಆರತಿ.ಗಿಳಿಯಾರು.ಉಡುಪಿ

