2 ನೇ. ವರ್ಷದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಗೆ ಸರ್ವರಿಗೂ ಸುಸ್ವಾಗತ – ತಾಲೂಕು ಅಧ್ಯಕ್ಷರು ಕನ್ನಕಟ್ಟಿ ಶಿವರಾಜ್.
ಕೊಟ್ಟೂರು ಡಿ.04

ಪಟ್ಟಣದ ಶ್ರೀ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ದಿ 5. ಡಿಸೆಂಬರ್ 2025 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಎರಡನೇ ವರ್ಷದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಗೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ಲೋಕಾಯುಕ್ತರಾದ ಮಾನ್ಯ ಶ್ರೀ ಸಂತೋಷ್ ಹೆಗಡೆ ರವರು ಆಗಮಿಸಲಿದ್ದಾರೆ ಇವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಇರುತ್ತದೆ.


ರಾಜ್ಯಾಧ್ಯಕ್ಷರಾದ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬಂಗ್ಲೆ ಮಲ್ಲಿಕಾರ್ಜುನ್ ಸ್ಥಾಪಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕೊಟ್ಟೂರು ತಾಲೂಕಿನ ಅಧ್ಯಕ್ಷರಾದ ಕನ್ನಾಕಟ್ಟಿ ಶಿವರಾಜ್ ರವರು ತಾಲೂಕು ಮಟ್ಟದ ಅಧಿಕಾರಿಗಳಿಗೂ ರಾಜಕಾರಣಿಗಳಿಗೂ ಊರಿನ ಗಣ್ಯ ಮಾನ್ಯರು ಪ್ರಮುಖ ಮುಖಂಡರು ಸಂಘ ಸಂಸ್ಥೆಯವರು ಹೋರಾಟಗಾರರು ಪ್ರಜ್ಞಾವಂತ ನಾಗರೀಕರು ವಿದ್ಯಾರ್ಥಿಗಳು ಹಾಗೂ ಕೊಟ್ಟೂರು ತಾಲೂಕು ಎಲ್ಲಾ ಪ್ರಜೆಗಳಿಗೂ ನಮ್ಮ ಸಂಘದ ಪದಾಧಿಕಾರಿಗಳಾದ ಗೌರವಾಧ್ಯಕ್ಷರಾದ ಹೆಚ್ ಮಾರೇಶ್, ರಮೇಶ್ ಉಪಾಧ್ಯಕ್ಷರಾದ ಬಿ.ಮಾರುತಿ ಪ್ರಧಾನ ಕಾರ್ಯದರ್ಶಿಯಾದ ಮಣಿಕಂಠ ಕಾರ್ಯದರ್ಶಿ, ಪ್ರದೀಪ್ ಕುಮಾರ್ ಸಿ ಖಜಾಂಚಿ ಮೋರಗೇರಿ ಮಂಜುನಾಥ್ ಕಾರ್ಯಧ್ಯಕ್ಷರಾದ ಜಯಪ್ಪರವರು ಸರ್ವರಿಗೂ ಸ್ವಾಗತ ಸುಸ್ವಾಗತವನ್ನು ಬಯಸುತ್ತೇವೆ ಎಲ್ಲರೂ ಬಂದು ಈ ಕಾರ್ಯಕ್ರಮವನ್ನು ಯಶಸ್ಸಿ ಗೊಳಿಸಿ ಸಹಕರಿಸ ಬೇಕಾಗಿ ತಮ್ಮಲ್ಲಿ ವಿನಂತಿ ಇರುತ್ತದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು

