ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ – ಅಮರೇಗೌಡ ಮಲ್ಲಾಪುರ.
ಸಿಂಧನೂರು ಡಿ.04

ನಗರದ PWD ಕ್ಯಾಂಪ್ ನ ಹ್ಯಾಪಿ ಕಿಡ್ಸ್ ಇಂಟರ್ನ್ಯಾಷನಲ್ ಶಾಲೆಯ ಹತ್ತಿರ ಜಿಂಕೆ ಮರಿಯೊಂದು ಹಿರೇ ಹಳ್ಳದ ಮೂಲಕ ಬಂದಾಗ ಅದನ್ನು ನೋಡಿದ ವನಸಿರಿ ಪೌಂಡೇಷನ್ ಸಂಚಾಲಕರಾದ ರಂಜಾನ್ ಸಾಬ್ ಅವರು ಅದನ್ನು ಹಿಡಿದು ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳು ಜಿಂಕೆಯನ್ನು ಪಡೆದು ಮಾನವಿ ಅರಣ್ಯ ಇಲಾಖೆ ಕಚೇರಿಗೆ ಕಳುಹಿಸಲಾಯಿತು. ಇದೇ ವೇಳೆ ಹ್ಯಾಪಿ ಕಿಡ್ಸ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಜಿಂಕೆಯನ್ನು ಕಂಡು ಕೈ, ಕಾಲು, ಮೈ, ತಲೆಯ ಮೇಲೆ ಕೈಯಿಂದ ಸವರಿ ಸಂತೋಷ ಪಟ್ಟರು.

ಸಸ್ಯ ಸಂಪತ್ತಿನ ಜೊತೆಗೆ ಪರಿಸರದಲ್ಲಿ ವಾಸವಾಗಿರುವ ಪ್ರಾಣಿ ಪಕ್ಷಿಗಳನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ.ಇತ್ತೀಚಿನ ಆಧುನಿಕತೆಯ ಭರಾಟೆಯಲ್ಲಿ ಕಾಡುಗಳು ನಾಶವಾಗುತ್ತಿವೆ.ಕಾಡುಗಳ ನಾಶದಿಂದಾಗಿ ಕಾಡು ಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ನಾಡಿಗೆ ಬರುತ್ತಿವೆ.ಕಾಡುಗಳು ಇದ್ದರೆ ಮನುಷ್ಯ ಮತ್ತು ಇತರೆ ಪ್ರಾಣಿ ಪಕ್ಷಿಗಳು ಜೀವಿಸಲು ಸಾಧ್ಯ ಕಾಡುಗಳಿಲ್ಲದಿದ್ದರೆ ಜೀವಿಸಲು ಸಾಧ್ಯವಿಲ್ಲ.ಆದ್ದರಿಂದ ಪ್ರತಿಯೊಬ್ಬರೂ ಗಿಡಮರಗಳನ್ನು ಉಳಿಸಿ ಬೆಳೆಸುವ ಜೊತೆಗೆ ಪ್ರಾಣಿ ಪಕ್ಷಿಗಳನ್ನು ರಕ್ಷಣೆ ಮಾಡಲು ಮುಂದಾಗಬೇಕು.ವನಸಿರಿ ತಂಡ ಇಂತಹ ಒಂದು ಕಾರ್ಯದಲ್ಲಿ ಪ್ರತಿ ದಿನ ಪ್ರತಿ ಕ್ಷಣ ಕಾರ್ಯನಿರತವಾಗಿರುತ್ತದೆ.ಇಂದು ವನಸಿರಿ ಪೌಂಡೇಷನ್ ಸಂಚಾಲಕರಾದ ರಂಜಾನ್ ಸಾಬ್ ಅವರು ಆಹಾರವನ್ನು ಹೂಡಿಕೊಂಡು ಬಂದ ಜಿಂಕೆ ಮರಿಯನ್ನು ಕಂಡು ರಕ್ಷಣೆ ಮಾಡಿ ನಮಗೆ ಕರೆ ಮಾಡಿ ತಿಳಿಸಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.ನಂತರ ಅದನ್ನು ಅಧಿಕಾರಿಗಳಿಗೆ ಒಪ್ಪಿಸಿದರು.ರಂಜಾನ್ ಸಾಬ್ ಅವರಿಗೆ ವನಸಿರಿ ಪೌಂಡೇಷನ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಸಾರ್ವಜನಿಕರೂ ಕೂಡಾ ಇಂತಹ ಕಾಡು ಪ್ರಾಣಿಗಳು ನಾಡಿಗೆ ಬಂದಿರುವುದು ಕಂಡು ಬಂದರೆ ತಕ್ಷಣ ವನಸಿರಿ ಪೌಂಡೇಷನ್ ಸದಸ್ಯರಿಗೆ ತಿಳಿಸಬೇಕು.ಮತ್ತು ಸಸ್ಯಗಳು, ಕಾಡುಪ್ರಾಣಿಗಳ ರಕ್ಷಣೆಯ ಕಾರ್ಯದಲ್ಲಿ ವನಸಿರಿ ತಂಡ ಅರಣ್ಯ ಇಲಾಖೆಯ ಜೊತೆಗೆ ಸದಾಕಾಲ ಕೈಜೋಡಿಸುತ್ತೇವೆ ಅರಣ್ಯ ಇಲಾಖೆ ಕೂಡಾ ವನಸಿರಿ ತಂಡಕ್ಕೆ ಸಹಕರಿಸಬೇಕು ಎಂದರು.
ಈ ಸಂಧರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ DRFO ಶ್ರೀಮತಿ ಅರುಣ್, ಗಿಡ ಕಾವಲುಗಾರ ಸುಭಾಸ್,ಶಾಲೆಯ ಮುಖ್ಯಸ್ಥ ಮುರಳಿಕೃಷ್ಣ,ಮುಖ್ಯ ಗುರು ಶ್ರೀಮತಿ ಉನ್ನತಿ,ಶಿಕ್ಷಕರಾದ ರಾಧಾ ಮತ್ತು ವಿದ್ಯಾರ್ಥಿಗಳು ಇದ್ದರು.

