ವನಸಿರಿ ಪೌಂಡೇಷನ್ ಸಸಿ ನೆಡುವ ಕಾರ್ಯ ಶ್ಲಾಘನೀಯವಾದುದು – ಪಿ.ಎಸ್.ಐ ಎರಿಯಪ್ಪ.
ಬಳಗಾನೂರ ಡಿ.05

ಮಸ್ಕಿ ತಾಲೂಕಿನ ಬಳಗಾನೂರ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ಶಾಲೆಯಲ್ಲಿ ವನಸಿರಿ ಪೌಂಡೇಷನ್.(ರಿ) ರಾಯಚೂರು ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಬಳಗಾನೂರ ಪಿ.ಎಸ್.ಐ ಎರಿಯಪ್ಪ ಅವರು ಸಸಿ ನೆಟ್ಟು ನೀರುಣಿಸಿ ಚಾಲನೆ ನೀಡಿದರು. ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರ. ಪರಿಸರವನ್ನು ಸ್ವಚ್ಛವಾಗಿ ಸುಂದರವಾಗಿ ಶುದ್ಧವಾಗಿ ಇಟ್ಟುಕೊಂಡರೆ ಅದುವೇ ನಮ್ಮ ಜೀವನ. ಪರಿಶುದ್ಧ ಗಾಳಿ, ನೀರು, ಆಹಾರ ಸೇವನೆ ಯಿಂದ ನಾವು ಆರೋಗ್ಯವಾಗಿ ಸದೃಢರಾಗಿ ಇರುತ್ತೇವೆ. ಆಗ ದೇಶ ಕೂಡಾ ಸದೃಢವಾಗಿ ಇರುತ್ತೆ, ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳಸಿದಾಗ ಶುದ್ಧವಾದ ಗಾಳಿ ಸಿಗುತ್ತದೆ. ಇದೇ ವೇಳೆ ವನಸಿರಿ ಪೌಂಡೇಷನ್ ಸಸಿ ನೆಡುವ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ.ಪರಿಸರ ಜಾಗೃತಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ವನಸಿರಿ ಪೌಂಡೇಷನ್ ಮಾರ್ಗದರ್ಶನದಲ್ಲಿ ಎಲ್ಲಾ ವಿದ್ಯಾರ್ಥಿಗಳು ಕೆಟ್ಟ ವಿಚಾರಗಳನ್ನು ಕೈಬಿಟ್ಟು ಪರಿಸರದಲ್ಲಿ ಹೆಚ್ಚು ಗಿಡ ಮರಗಳನ್ನು ನೆಡಲು ಮುಂದಾಗಬೇಕು ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು ಎಂದು ತಿಳಿಸಿದರು.

ನಂತರ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ. ಪರಿಸರವನ್ನು ಸ್ವಚ್ಛ ಸುಂದರವಾಗಿ ಇಟ್ಟುಕೊಂಡರೆ ನಾವುಗಳೆಲ್ಲರೂ ಅರೋಗ್ಯವಂತ ರಾಗಿರುತ್ತೇವೆ. ನಾವು ಅರೋಗ್ಯದಿಂದ ಇದ್ದರೆ ನಮ್ಮ ತಂದೆ ತಾಯಿಗಳನ್ನು ಚನ್ನಾಗಿ ನೋಡಿ ಕೊಳ್ಳಲು ಸಾಧ್ಯ. ತಂದೆ ತಾಯಿ ಚೆನ್ನಾಗಿದ್ದರೆ ನಾವು ಹೆಚ್ಚು ವಿದ್ಯಾಭ್ಯಾಸ ಮಾಡಲು ಅನುಕೂಲ ಆಗುತ್ತದೆ ಎಂದರು.
ಈ ಸಂಧರ್ಭದಲ್ಲಿ ವನಸಿರಿ ಪೌಂಡೇಷನ್ ರಾಜ್ಯ ಸಾಮಾಜಿಕ ಜಾಲತಾಣ ಅಧ್ಯಕ್ಷ ಚನ್ನಪ್ಪ ಕೆ ಹೊಸಹಳ್ಳಿ, ತಾಲೂಕ ಅಧ್ಯಕ್ಷ ರಾಜು ಪತ್ತಾರ ಬಳಗಾನೂರ, ವೆಂಕಟೇಶ, ರಮೇಶ ಕುನ್ನಟಗಿ, ಚಂದ್ರುಗೌಡ ಗದ್ದಿ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು ಎಂದು ವರದಿಯಾಗಿದೆ.

