🚨 ಬ್ರೇಕಿಂಗ್ ನ್ಯೂಸ್, ನೌಕರರ ಸಂಘದ ನೆರಳಿನಡಿ ಅಧಿಕಾರಿಗಳ ರಾಕ್ಷಸ ಕೃತ್ಯ..! 🚨ಹೆಲ್ತ್ ಇನ್ಸ್‌ಪೆಕ್ಟರ್ ಕಿರುಕುಳಕ್ಕೆ ಬೇಸತ್ತು ಏಕೈಕ ಮಹಿಳಾ ಚಾಲಕಿ ಆತ್ಮ ಹತ್ಯೆಗೆ ಯತ್ನ – ಸಂಘದ ಪದಾಧಿಕಾರಿಗಳ ಸ್ಪಷ್ಟ ‘ಸಾಥ್’ ಬಹಿರಂಗ..!

ಉಡುಪಿ ಡಿ.06

ನಗರ ಸಭೆಯ ಏಕೈಕ ಮಹಿಳಾ ಗುತ್ತಿಗೆ ಆಧಾರಿತ ಚಾಲಕಿ, ಇಬ್ಬರು ಚಿಕ್ಕ ಮಕ್ಕಳ ತಾಯಿ ಸ್ಮಿತಾ ಅವರು ಅಧಿಕಾರಿಗಳ ಭೀಕರ ಮಾನಸಿಕ ಕಿರುಕುಳಕ್ಕೆ ಬೇಸತ್ತು ನಿದ್ರೆ ಮಾತ್ರೆ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ರಾಜ್ಯದ ನಾಗರಿಕ ಪ್ರಜ್ಞೆಯನ್ನು ತೀವ್ರವಾಗಿ ಕೆಣಕಿದೆ. ಸಂತ್ರಸ್ತ ಮಹಿಳೆ ಆತ್ಮ ಹತ್ಯೆಗೆ ಪ್ರಯತ್ನಿಸಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಸ್ಮಿತಾ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಈ ರಾಕ್ಷಸ ಕೃತ್ಯದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಖಜಾಂಚಿಗಳು ಸ್ಪಷ್ಟವಾಗಿ ಬೆಂಬಲ ನೀಡಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ.

🗡️ ಘೋರ ಕಿರುಕುಳ:-

“ಅಲ್ಲೇ ಸಾಯಿ” ಎಂದ ರಾಕ್ಷಸರು!ಕೋಡಂಕೂರು ವಾರ್ಡ್‌ನ ನಿವಾಸಿ ಹಾಗೂ ಮನೆ ಮನೆ ಕಸ ವಿಲೇವಾರಿ ವಾಹನ ಚಾಲಕಿ ಸ್ಮಿತಾ ಅವರಿಗೆ ಕಳೆದ ಎರಡು ತಿಂಗಳಿಂದ ನಡೆಯುತ್ತಿದ್ದ ಕಿರುಕುಳವು ಅತಿರೇಕಕ್ಕೆ ತಲುಪಿತ್ತು.

ಕಿರುಕುಳ ನೀಡಿದ ಪಟ್ಟಭದ್ರ ಹಿತಾಸಕ್ತಿಗಳು:-

ಸುರೇಂದ್ರ ಹೋಬಳಿದಾರ, ಉಡುಪಿ ನಗರ ಸಭೆಯ ಪ್ರಭಾರ ಆರೋಗ್ಯ ನಿರೀಕ್ಷಕ (ಮೂಲತಃ ವಾಹನ ಚಾಲಕ, ಪ್ರಭಾವ ಬಳಸಿ ಅನಧಿಕೃತವಾಗಿ ಹುದ್ದೆ ನಿರ್ವಹಿಸುತ್ತಿದ್ದ ಆರೋಪವಿದೆ).

ಸೂಪರ್‌ವೈಸರ್ ಯೋಗೀಶ್ ಮತ್ತು ಸಿಬ್ಬಂದಿ ಅನಿತಾ.ಹಿಂಸೆಯ ಸ್ವರೂಪ:-

ಸ್ಮಿತಾ ಅವರಿಗೆ ಪ್ರತಿದಿನ ಅನಗತ್ಯ ಕಿರುಕುಳ, ಅವಧಿ ಮೀರಿ ದುಡಿಯಲು ಒತ್ತಾಯ, ಮತ್ತು ಅತ್ಯಂತ ಕೀಳು ಮಟ್ಟದ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. “ಕೆಲಸಕ್ಕೆ ಬರುವುದಾದರೆ ಬಾ, ಇಲ್ಲದಿದ್ದರೆ ಅಲ್ಲೇ ಸಾಯಿ” ಎಂದು ನೇರವಾಗಿ ಮಾನಸಿಕ ಹಿಂಸೆ ನೀಡಿದ ಮಾತುಗಳಿಂದ ಮನಸ್ಸಿಗೆ ಘಾಸಿಗೊಂಡ ಸ್ಮಿತಾ ಅವರು ಮಾತ್ರೆಗಳನ್ನು ಸೇವಿಸಿ ಆತ್ಮ ಹತ್ಯೆಗೆ ಪ್ರಯತ್ನಿಸಿದ್ದಾರೆ.

🛑 ಪೌರಾಯುಕ್ತರ ಅಸಹಾಯಕತೆ ಅಥವಾ ಪರೋಕ್ಷ ಸಹಕಾರ..?

ಘೋರ ಕಿರುಕುಳದ ವಿಚಾರವು ಕಳೆದ ಎರಡು ತಿಂಗಳಿಂದಲೂ ಪೌರಾಯುಕ್ತ ಮಹಾಂತೇಶ್/ಮಹೇಶ್ ಅಂಬರಗಿ ಮತ್ತು ಪರಿಸರ ಅಭಿಯಂತರರ ಗಮನಕ್ಕೆ ಇದ್ದರೂ, ಸಂತ್ರಸ್ತ ಮಹಿಳೆಗೆ ಯಾರೂ ಸಹಾಯ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಎಲ್ಲವೂ ತಿಳಿದಿದ್ದರೂ ಅಧಿಕಾರಿಗಳಿಗೆ ಪರೋಕ್ಷವಾಗಿ ಸಾಥ್ ನೀಡಿದ ನಡೆಯೋ ಅಥವಾ ಪೌರಾಯುಕ್ತರ ‘ಅಸಹಾಯಕತೆ’ಯೋ ಎಂಬ ಪ್ರಶ್ನೆ ಎದ್ದಿದೆ. ಭಾರತದಲ್ಲಿಯೇ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಿದ ಉಡುಪಿ ನಗರಸಭೆಯಲ್ಲಿ ಮಹಿಳೆಗೆ ಇಂತಹ ದೌರ್ಜನ್ಯವೇ? ಜಿಲ್ಲಾಧಿಕಾರಿ ಮತ್ತು ಆಡಳಿತ ಅಧಿಕಾರಿ ಮಹಿಳೆಯಾಗಿದ್ದರೂ ದೌರ್ಜನ್ಯಕ್ಕೆ ಕಣ್ಣಿದ್ದು ಕುರುಡರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂಗ್ ತಿಂದ ಮಂಗ 420

🍾 ಸರ್ಕಾರಿ ನೌಕರರ ಸಂಘದ ಐಷಾರಾಮಿ ‘ಮೋಜು ಮಸ್ತಿ’ ಮತ್ತು ಕಿರುಕುಳಕ್ಕೆ ಸಹಕಾರ..!

ಉಡುಪಿ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ್ ಶೆಟ್ಟಿ ಮತ್ತು ಜಿಲ್ಲಾ ಖಜಾಂಚಿ ದಯಾನಂದ ಬೆನ್ನೂರು ಅವರ ಕಾರ್ಯವೈಖರಿ ವಿರುದ್ಧದ ಆರೋಪಗಳು ಜಿಲ್ಲಾಡಳಿತದ ಮಾನವನ್ನು ಹರಾಜು ಹಾಕಿವೆ.

ಕುಂಭಕರ್ಣ ನಿದ್ದೆ ಮತ್ತು ಸಾಥ್:-

ಜಿಲ್ಲೆಯಲ್ಲಿ ಯಾವುದೇ ನೌಕರರ ಮೇಲೆ ದೌರ್ಜನ್ಯವಾದಾಗ ತಲೆಯೂ ಹಾಕದೆ ಸಂಘ ಕುಂಭಕರ್ಣ ನಿದ್ದೆಗೆ ಜಾರಿದೆ. ಆದರೆ, ಈ ಪದಾಧಿಕಾರಿಗಳು ಅನ್ಯಾಯ ಮಾಡಿದ ಸರ್ಕಾರಿ ಅಧಿಕಾರಿಗಳಿಗೆ ಬಕೆಟ್ ಹಿಡಿದು ಸಾಥ್ ನೀಡುತ್ತಿದ್ದಾರೆ. ಇವರ ಬೆಂಬಲದಿಂದಲೇ ಸರಕಾರಿ ನೌಕರರು ಭಯವಿಲ್ಲದೆ ದಿನಗೂಲಿ/ಗುತ್ತಿಗೆ ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ.

ಧನದಾಯಿ ರಕ್ಷರೂ

ವೈಯಕ್ತಿಕ ದುರಾಡಳಿತ:-

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ್ ಶೆಟ್ಟಿ ಅವರು ಬಿಜಾಪುರ ಮೂಲದ ಶ್ರುತಿ ಎಂಬಾಕೆಗೆ ನೌಕರಿ ಕೊಡಿಸುವುದಾಗಿ ₹10 ಲಕ್ಷ ವಸೂಲಿ ಮಾಡಿ, ಕಿರುಕುಳ ನೀಡಿ, ಪೊಲೀಸ್ ದೂರಿನ ಬೆದರಿಕೆಯ ನಂತರವೇ ಹಣವನ್ನು ಹಿಂತಿರುಗಿಸಿದ ನಿದರ್ಶನವೂ ವರದಿಯಾಗಿದೆ. ಇದು ಅಧಿಕಾರ ದುರುಪಯೋಗದ ಸ್ಪಷ್ಟ ಉದಾಹರಣೆ.

ಚಂದಾ ಹಣದ ದುರ್ಬಳಕೆ ಮತ್ತು ಮೋಜು:-

ನೌಕರರ ವಾರ್ಷಿಕ ₹200 ವಂತಿಗೆ ಚಂದಾ ಹಣದಿಂದ ನೆಪ ಮಾತ್ರಕ್ಕೆ ಸಭೆ ನಡೆಸಿ, ರಾತ್ರಿ ಹೆಂಡ-ಕೊಂಡ ಕುಡಿದು ಮೋಜು ಮಸ್ತಿಗಳಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪವಿದೆ.

ಕಚೇರಿಯಲ್ಲಿ ಐಷಾರಾಮಿ ವ್ಯವಸ್ಥೆ:-

ಉಡುಪಿ ಮತ್ತು ಕುಂದಾಪುರದ ಕಚೇರಿಗಳಲ್ಲಿ ಐಷಾರಾಮಿ ಹಾಸಿಗೆ, ಬೆಡ್ಡು ಮತ್ತು ಮದ್ಯ ಇಡಲು ಫ್ರಿಡ್ಜ್ ವ್ಯವಸ್ಥೆ ಇದ್ದು, ಹಿಂಬದಿಯಿಂದ ನಿರ್ಗಮಿಸಲು ಮತ್ತೊಂದು ಬಾಗಿಲಿರುವ ವ್ಯವಸ್ಥೆಯು ಅನುಮಾನಕ್ಕೆ ಎಡೆಮಾಡಿದೆ.

⚖️ ಕೂಡಲೇ ಕಠಿಣ ಕ್ರಮದ ಆಗ್ರಹ ಮತ್ತು ಕಾನೂನಾತ್ಮಕ ಬೇಡಿಕೆಗಳು:-

ಡಾ, ಬಿ.ಆರ್ ಅಂಬೇಡ್ಕರ್ ಅವರ ಮಹಿಳಾ ಸಬಲೀಕರಣದ ಆಶಯಕ್ಕೆ ಧಕ್ಕೆ ತಂದಿರುವ ಈ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ತಕ್ಷಣ ಕಠಿಣ ಕ್ರಮ ಕೈಗೊಳ್ಳದಿದ್ದರೆ ಜನಾದೇಶವನ್ನು ಧಿಕ್ಕರಿಸಿದಂತಾಗುತ್ತದೆ. ಜನತೆಯ ಪ್ರಮುಖ ಬೇಡಿಕೆಗಳು ಮತ್ತು ಕಾನೂನಾತ್ಮಕ ಕ್ರಮಗಳು ಹೀಗಿವೆ, ಕ್ರಮ ವಿವರಣೆ ಅನ್ವಯವಾಗುವ ಕಾನೂನು ವಿಭಾಗ

ಧನದಾಯಿ ರಕ್ಷರೂ

ತಕ್ಷಣದ ಅಮಾನತು, ಕಿರುಕುಳ ನೀಡಿದ ಸುರೇಂದ್ರ ಹೋಬಳಿದಾರ, ಸೂಪರ್‌ವೈಸರ್ ಯೋಗೀಶ್, ಮತ್ತು ಸಿಬ್ಬಂದಿ ಅನಿತಾ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಇಲಾಖಾ ನಿಯಮಗಳು, ಕ್ರಿಮಿನಲ್ ಮೊಕದ್ದಮೆ, ಕಿರುಕುಳ ನೀಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. IPC ಸೆಕ್ಷನ್ 306 (ಆತ್ಮ ಹತ್ಯೆಗೆ ಪ್ರಚೋದನೆ) ಪೋಶ್ ಕಾಯಿದೆ ಅಡಿಯಲ್ಲಿ ಕೇಸ್,ಕೆಲಸದ ಸ್ಥಳದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆಗೆ ಇರುವ ‘ಪೋಶ್’ ಕಾಯಿದೆ (POSH Act) ಅಡಿಯಲ್ಲಿ ಕ್ರಮ ಜರುಗಿಸಬೇಕು. ಲೈಂಗಿಕj ಕಿರುಕುಳದಿಂದ ಮಹಿಳೆಯರ ರಕ್ಷಣೆ ಕಾಯಿದೆ, 2013,ಪೌರಾಯುಕ್ತರ ವಿರುದ್ಧ ವಿಚಾರಣೆ, ಘಟನೆ ತಿಳಿದಿದ್ದರೂ ನಿರ್ಲಕ್ಷ್ಯ ತೋರಿದ ಪೌರಾಯುಕ್ತ ಮತ್ತು ಪರಿಸರ ಅಭಿಯಂತರರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಸೂಕ್ತ ಕ್ರಮ ಜರುಗಿಸಬೇಕು. ಅಧಿಕಾರ ದುರ್ಬಳಕೆ ನಿಯಮಗಳು,ನೌಕರರ ಸಂಘದ ವಿರುದ್ಧ ತನಿಖೆ, ಚಂದಾ ಹಣ ದುರ್ಬಳಕೆ, ಅಧಿಕಾರ ದುರುಪಯೋಗ ಮತ್ತು ಕಿರುಕುಳಕ್ಕೆ ಸಹಕಾರ ನೀಡಿದ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಹಣಕಾಸು ಮತ್ತು ಇಲಾಖಾ ನಿಯಮಗಳು,

🗣️ ಜನ ಪ್ರತಿನಿಧಿಗಳ ತಟಸ್ಥ ನಡೆ ಏಕೆ..?

ಈಗಾಗಲೇ ದೌರ್ಜನ್ಯ ನಡೆದಿದ್ದರೂ, ಸಂಬಂಧಪಟ್ಟ ಸಚಿವರು ಮತ್ತು ಸ್ಥಳೀಯ ಶಾಸಕರು ತಟಸ್ಥರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜನಪ್ರತಿನಿಧಿಗಳ ಈ ಮೌನದ ಹಿಂದಿನ ಗುಟ್ಟಾದರೂ ಏನು? ಜಿಲ್ಲೆಯಲ್ಲಿನ ರಾಜಕೀಯ ನಡೆ ಎತ್ತ ಕಡೆಗೆ ಸಾಗುತ್ತಿದೆ ಎಂದು ಸಾರ್ವಜನಿಕರು ಸವಾಲು ಹಾಕುತ್ತಿದ್ದಾರೆ.

ಉಡುಪಿ ಜಿಲ್ಲೆಯತ್ತ ಇಡೀ ರಾಜ್ಯದ ಕಣ್ಣು ನೆಟ್ಟಿದೆ. ಸಂತ್ರಸ್ತ ಮಹಿಳೆಗೆ ನ್ಯಾಯ ದೊರಕಿಸುವುದೇ ಅಥವಾ ಈ ರಾಕ್ಷಸ ಕೃತ್ಯಕ್ಕೆ ಅಧಿಕಾರಿಗಳು ಮತ್ತು ನೌಕರರ ಸಂಘದ ಬೆಂಬಲ ಮುಂದುವರಿಯುವುದೇ ಎಂಬುದನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಈ ಕೂಡಲೇ ಸ್ಪಷ್ಟಪಡಿಸ ಬೇಕಿದೆ!

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button