ಕ.ಕಾ.ನಿ.ಪ ಧ್ವನಿ ಸಂಘಟನೆ ಯಿಂದ ರಾಷ್ಟ್ರೀಯ – ಪತ್ರಿಕಾ ದಿನಾಚರಣೆ.
ಕೊಟ್ಟೂರು ಡಿ.06

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಟನೆ 5, ಡಿಸೆಂಬರ್ 2025 ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಎಂ.ಎಂ.ಜೆ ಹರ್ಷವರ್ಧನ್ ಹಾಗೂ ವೇದಿಕೆ ಮೇಲಿರುವ ಗಣ್ಯ ಮಾನ್ಯರಿಂದ ಉದ್ಘಾಟನೆ ಮಾಡಲಾಯಿತು.
ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಸದಾ ಸಮಾಜ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಅಗಲಿರುಳು ಸೇವೆಯಲ್ಲಿ ತೊಡಗಿರುವ ಪತ್ರಕರ್ತರಿಗೆ ಅವರ ಕುಟುಂಬಕ್ಕೆ ಸರ್ಕಾರದ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಪತ್ರಕರ್ತರಿಗೆ ಸರ್ಕಾರದ ಸವಲತ್ತುಗಳನ್ನು ಕೊಡಿಸುತ್ತೇನೆ ಎಂದು ತಿಳಿಸಿದರು.
ಡಾ, ಸಿದ್ದಲಿಂಗಸ್ವಾಮಿ ಮಹಾಸ್ವಾಮಿಗಳು ಚಾನು ಕೋಟಿ ಮಠ ಆಶೀರ್ವಚನ ಮತ್ತು ಎಂ.ಎಂ.ಜೆ ಹರ್ಷವರ್ಧನ್, ತೆಗ್ಗಿನಕೇರಿ ಕೊಟ್ರೇಶ್, ಬದ್ದಿ ಮರಿಸ್ವಾಮಿ ವರದಿಗಳು ವಸ್ತು ನಿಷ್ಠವಾಗಿರಬೇಕು ಕೇವಲ ಜನರಿಗೆ ರೋಮಾಂಚನ ತರುವಂತೆ ಆಗಬಾರದು ಕೆಲ ಪತ್ರಕರ್ತರು ದ್ವೇಷದ ಬರವಣಿಗೆ ಬರೆಯುತ್ತಾರೆ ಅಂತಹ ಬರವಣಿಗೆಗಳನ್ನು ಕಡಿಮೆ ಮಾಡಿ ಸಮಾಜಕ್ಕೆ ಒಳ್ಳೆದನ್ನು ತರುವ ಕೆಲಸ ಪತ್ರಕರ್ತರು ಮಾಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಸಮಾಜ ಸೇವಕರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆಶಾ ಕಾರ್ಯಕರ್ತರಿಗೆ ಪೌರ ಕಾರ್ಮಿಕರಿಗೆ ಆಟೋ ಚಾಲಕರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕ.ಕಾ.ನಿ.ಪ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಎಸ್.ಎಸ್ ಪಾಟೀಲ್ ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರು ಜಿ ಸೋಮನಾಥ್ ಉಪಾಧ್ಯಕ್ಷರು ಮಡಿವಾಳ ಮಂಜುನಾಥ ತೆಗ್ಗಿನಕೇರಿ ಹನುಮಂತಪ್ಪ ವಕೀಲರು ರೈತ ಸಂಘದ ಮುಖಂಡರು ಹಲವು ಪತ್ರಕರ್ತರು ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು

