ಜಾನಪದ ಕನ್ನಡ ನಾಡಿನ ಜೀವಾಳ – ಡಾ, ಎಸ್. ಬಾಲಾಜಿ.
ಗದಗ ಡಿ.06

ಜಾನಪದ ಜನ ಪದರ ಬಾಯಿ ಯಿಂದ ಬಾಯಿಗೆ ಬಂದು ಕನ್ನಡ ನಾಡಿನ ಜೀವಾಳವಾಗಿದೆ. ಜನರ ಬದುಕಿನ ರಾಗ. ರೀತಿ, ಪರಂಪರೆ, ನಂಬಿಕೆ ಮತ್ತು ನವಿರಾದ ನೆನಪುಗಳ ಸಂಗ್ರಹ, ಮಣ್ಣಿನ ವಾಸನೆ, ಹೊಲದ ಹರುಷ, ಹಬ್ಬದ ರಂಗು, ಇವೆಲ್ಲವೂ ಜಾನಪದದಲ್ಲಿ ಜೀವಂತ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ, ಜಾನಪದ ಎಸ್. ಬಾಲಾಜಿ ಹೇಳಿದರು.
ಅವರು ನಗರದ ಬಸವೇಶ್ವರ ಮಹಾ ವಿದ್ಯಾಲಯದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ಗದಗ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ಮಾಜಿ ಸಹಕಾರ ಸಚಿವ ಎಸ್.ಎಸ್ ಪಾಟೀಲ ಅಧ್ಯಕ್ಷತೆಯನ್ನು ವಹಿಸಿ ನಂಬಿಕೆಗೆ ಇನ್ನೊಂದು ಹೆಸರು ಜಾನಪದ. ಸೋಬಾನೆ ಪದ ಮದುವೆ ಪದಗಳು, ಹಂತಿಯ ಪದಗಳು ಈಗ ಇಲ್ಲವೇ ಇಲ್ಲ ಎಂದರು. ತೋಂಟದಾರ್ಯ ವಿದ್ಯಾ ಪೀಠದ ಕಾರ್ಯದರ್ಶಿಗಳಾದ ಎಸ್.ಎಸ್ ಪಟ್ಟಣಶೆಟ್ಟಿಯವರು ನೂತನ ಅಧ್ಯಕ್ಷರಾದ ಐ.ಬಿ ಬೆನಕೊಪ್ಪ ಹಾಗೂ ಪದಾಧಿಕಾರಿಗಳಿಗೆ ಪದಪತ್ರ ಸಮರ್ಪಣೆ ಮಾಡಿ ನಮ್ಮ ಹಿಂದಿನ ಪೀಳಿಗೆಯ ಜ್ಞಾನ, ಜೀವನ ಶೈಲಿ, ನೀತಿ, ನೈತಿಕ ಪಾಠವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಾಂಸ್ಕೃತಿಕ ಸೇತುವೆ ಜಾನಪದ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹಕಾರ ರೇಡಿಯೋ ಗದಗದ ನಿರ್ದೇಶಕರಾದ ಜೆ.ಕೆ ಜಮಾದಾರವರು ಜಾನಪದ ಭಾಷೆ ಸುಲಭ ಸರಳ ಹೃದಯಕ್ಕೆ ಹತ್ತಿರ. ಕಲಾತ್ಮಕ ಅಲಂಕಾರಕ್ಕಿಂತ ಜೀವನದ ನೈಜ ಅನುಭವ ಕಾಣಿಸುತ್ತದೆ ಎಂದರು.
ಇನ್ನೊರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರೇಟರ ಬೆಂಗಳೂರು ಪ್ರಾಧಿಕಾರದ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಡಾ.ರಿಯಾಜ್ ಪಾಷಾ ಕೆರೆಗೆ ಹಾರದ ಕಥೆಯನ್ನು ತುಂಬಾ ಪರಿಣಾಮಕಾರಿಯಾಗಿ ಹೇಳಿದರು. ಗದಗ ಜಿಲ್ಲಾ ಗ್ಯಾರಂಟಿಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ ಅಸೂಟಿಯವರು ಜಾನಪದ ಪರಿಷತ್ ರಚನಾತ್ಮಕವಾಗಿ ಕೆಲಸ ಮಾಡಲಿ. ಅದಕ್ಕೆ ನಮ್ಮದು ಸಹಕಾರವಿದೆ ಎಂದರು.
ರಾಜ್ಯ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೊ, ಕೆ.ಎಸ್ ಕೌಜಲಗಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ ಬಳಿಗೇರ, ಕದಳಿ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಸುಧಾ ಹುಚ್ಚಣ್ಣನವರ, ಜಾನಪದ ಜಿಲ್ಲಾ ಸಂಚಾಲಕಾದ ಲಿಂಗರಾಜ ಮತ್ತು ಪ್ರಾಚಾರ್ಯ ಮಾರುತಿ ಬುರಡಿ, ಕನ್ನಡ ಜಾನಪದ ಪರಿಷತ್ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಾನಪದದಲ್ಲಿ ಬದುಕು ಸಾಗಿಸುವ ಮರಿಯಪ್ಪ ವಿಭೂತಿ, ವೈದ್ಯ ನೀಲಪ್ಪ ಬಸವರಾಜ ಕೊಂಚಿಗೇರಿ ಹಾಗೂ ಎಸ್.ಎಸ್.ಎಲ್.ಸಿ ಪಿಯುಸಿ ಯಲ್ಲಿ ಕನ್ನಡ ವಿಷಯದಲ್ಲಿ ಜಿಲ್ಲೆಗೆ ಪ್ರಥಮ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರನ್ನು, ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಶ್ರೀಮತಿ ಸುಧಾ ಹುಚ್ಚಣ್ಣನವರ ಸ್ವಾಗತಿಸಿದರು. ಪ್ರೊ ಹೇಮಂತ ದಳವಾಯಿ ನಿರೂಪಿಸಿದರು ಎಂದು ವರದಿಯಾಗಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

