ಮಹಿಳೆಯರಿಗೆ ಸಮಾನತೆ ಮತದಾನದ ಹಕ್ಕು ಅಂಬೇಡ್ಕರ್ ನೀಡಿದರು – ತರೀಕೆರೆ.ಎನ್ ವೆಂಕಟೇಶ್.
ತರೀಕೆರೆ ಡಿ.6

ಸ್ವಾತಂತ್ರ ಭಾರತದ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಸರ್ವರಿಗೂ ಸಮಾನತೆ ನೀಡಿದವರು ಡಾ. ಬಿಆರ್ ಅಂಬೇಡ್ಕರ್ ರವರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಹೇಳಿದರು ಅವರು ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69 ನೆ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಪಟ್ಟಣದ ತಾಲೂಕು ಆಡಳಿತ ಸೌದ ಎದುರು ಇರುವ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಈ ದೇಶದ ಮಹಿಳೆಯರಿಗೆ ಸಮಾನತೆ ಮತ್ತು ಶಿಕ್ಷಣ ಮತದಾನದ ಹಕ್ಕು ನೀಡಿದವರು ಡಾ. ಬಿಆರ್ ಅಂಬೇಡ್ಕರ್, ಅವರು ನೀಡಿದ ಸಂವಿಧಾನ ಎಲ್ಲಾ ಧರ್ಮ, ಜಾತಿಯ ಸರ್ವರಿಗೂ ಸಮಾನತೆ ಹಕ್ಕುಗಳನ್ನು ನೀಡಿದ್ದಾರೆ. ಅವರು ಅಸ್ಪೃಶ್ಯತೆಯ ನೋವು ಅನುಭವಿಸಿ ಈ ದೇಶದಲ್ಲಿ ಅಸ್ಪೃಶ್ಯತೆ ಅಸಮಾನತೆ ಹೋಗಲಾಡಿಸಲು ಜೀವನಪೂರ್ತಿ ಹೋರಾಟ ಮಾಡಿದ್ದಾರೆ ಆದರೆ ಇಂದಿಗೂ ಅಸ್ಪೃಶ್ಯತೆ ಜಾತಿ ಪದ್ಧತಿ ನಿರ್ಮೂಲನೆ ಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ದಲಿತ ಮುಖಂಡರಾದ ಹಾದಿಕೆರೆ ರಾಜು ಮಾತನಾಡಿ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನ ಅವರು ನಿಧನರಾದ ಈ ದಿನ 64 ರಾಷ್ಟ್ರಗಳು ತಮ್ಮ ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸಂತಾಪ ಸೂಚಿಸುತ್ತದೆ ಎಂದರು.
ದಲಿತ ಮುಖಂಡರಾದ ಎಸ್ಎನ್ ಸಿದ್ದರಾಮಯ್ಯ ಮಾತನಾಡಿ ಅಂಬೇಡ್ಕರ್ ಅವರು ಶೋಷಿತರ ಧ್ವನಿಯಾಗಿ ಮಹಿಳೆಯರಿಗೆ ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯನ್ನು ನೀಡಿದ್ದಾರೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ, ಉಪ ನಂದಾಣ ಅಧಿಕಾರಿ ವೆಂಕಟೇಶ್ ಪುರಸಭಾ ಮುಖ್ಯ ಅಧಿಕಾರಿ ರಂಜಿತ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕರಾದ ಚಂದ್ರಶೇಖರ್, ಸಿ ಡಿ ಪಿ ಓ ಚರಣ್ ರಾಜ್ ಹಾಗೂ ಇಲಾಖೆ ಸಿಬ್ಬಂದಿಯವರು ಉಪಸ್ಥಿತರಿದ್ದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್ ಮಂಜುನಾಥ್ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

