“ನೋವು ನುಂಗಿ ನಗು ನಗುತಾ ಬಾಳುವ ಕ್ಷಣ ಕ್ಷಣ ಪಾವನವು”…..

ಜನರಾಡುವ ನುಡಿ ನುಡಿಯಲಿ ಸ್ವಾರ್ಥತೆ
ಇರಲು
ಆಸ್ತಿಗಾಗಿ ಹೆತ್ತವರ ಒಡಲು ನೋವಿಸುವ
ಮಕ್ಕಳ ನೊಡಲು
ಅಕ್ಕ ತಂಗಿ ಪಕ್ಕದವರ ಸಿರೆ ಸಿರಿಯ ನೋಡುವ
ರೀತಿಯು
ಅಣ್ಣ ತಮ್ಮರ ಪ್ರೀತಿ ವಾತ್ಸಲ್ಯ ಅರಿಯದವರ
ಕಂಡು
ನೆರೆ ಹೊರೆಯವರ ಅವರವರ ಗಳಿಕೆ ಉಳಿಕೆ
ಅವರದು
ಸುಮ್ಮನೆ ಗೊಡವೆ ನಮಗ್ಯಾಕೆ ಅವರವರ
ಕರ್ಮ ಧರ್ಮದ ಫಲವು
ಬಡವರ ನೋಡು ನಗುವ ಧನಕರ ಕಂಡು
ಅಳು ಬೇಕೋ ನಗಬೇಕೋ ಜಗದಲಿ
ತಿಳಿಯದು
ಊರ ಅವರಿವರ ಗೊಡವೆ ನಮಗೇಕೆ
ಬಾಳ್ವೆಯಲಿ ನೆಮ್ಮದಿ ಇರಲಿ
ಜೀವನ ಪಯಣದಲಿ ಸದಾ ಕಾಯಕದಲಿ
ಇರಲು
ಹರುಷವೊಂದೆ ಅಳುವಿಗೆ ಮುಲಾಮು
ಲಗಾಮು
ನೋವು ನುಂಗಿ ನಗು ನಗುತಾ ಬಾಳುವ ಕ್ಷಣ
ಕ್ಷಣ ಪಾವನವು
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ/ಅಮೀನಗಡ

