ವೈದ್ಯನಾಗಿ ಬಂದು ಶಿಷ್ಯನಾಗಿ ಪರಿವರ್ತನೆ ಯಾದವನು ಮಹೇಂದ್ರಲಾಲ್ ಸರ್ಕಾರ್ – ಶ್ರೀಮತಿ ಸುಧಾಮಣಿ.
ಚಳ್ಳಕೆರೆ ಡಿ.11

ಶ್ರೀರಾಮಕೃಷ್ಣರ ಗಂಟಲು ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ವೈದ್ಯನಾಗಿ ಬಂದ ಮಹೇಂದ್ರಲಾಲ್ ಸರ್ಕಾರ್ ಅವರ ಶಿಷ್ಯನಾಗಿ ಪರಿವರ್ತನೆಯಾಗುತ್ತಾನೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಸುಧಾಮಣಿ ಅಮರನಾಥ ಗುಪ್ತ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-೨” ರ ಗ್ರಂಥ ಪಾರಾಯಣ ಮಾಡುತ್ತ “ವೈದ್ಯನಾಗಿ ಬಂದ, ಶಿಷ್ಯನಾಗಿ ನಿಂದ” ಎಂಬ ಅಧ್ಯಾಯವನ್ನು ಓದಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.
ಸತ್ಸಂಗದಲ್ಲಿ ಶ್ರೀಮತಿ ಕವಿತಾ ಗುರುಮೂರ್ತಿ, ಅಂಬುಜಾ ಶಾಂತಕುಮಾರ್, ವೆಂಕಟಲಕ್ಷ್ಮೀ, ಪುಷ್ಪಲತಾ, ಡಾ, ಭೂಮಿಕಾ, ಚೆನ್ನಕೇಶವ, ಯತೀಶ್ ಎಂ ಸಿದ್ದಾಪುರ, ಜಿ.ಯಶೋಧಾ ಪ್ರಕಾಶ್, ಚೇತನ್ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

