ಅಕ್ರಮ ಪಡಿತರ ಅಕ್ಕಿ ಖಚಿತ ಮಾಹಿತಿ ಮೇರೆಗೆ ಕೊಟ್ಟೂರು ಪೊಲೀಸರ ತೀವ್ರ ಕಾರ್ಯಾಚರಣೆ ಮಾಡಿ – ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿದ್ದಾರೆ.
ನಾಗೇನಹಳ್ಳಿ ಡಿ.13

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಪಿ.ಎಸ್.ಐ ಗೀತಾಂಜಲಿ ಸಿಂಧೆ ಮತ್ತು ಸಿಬ್ಬಂದಿಗಳು ಮಿಂಚಿನ ಕಾರ್ಯಚರಣೆ ನಡೆಸಿ ಅಕ್ರಮ ಪಡಿತರ ಅಕ್ಕಿಯ ಜೊತೆ ಟಾಟಾ ಎಸ್ ಡ್ರೈವರ್ ನನ್ನು ಬಂಧಿಸಲಾಯಿತು. ಕೆ.ಎ.16/ಡಿ.9788 ನೇದ್ದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಖರೀದಿಸಿ ಕೊಂಡು ಹೆಚ್ಚಿನ ಬೆಲೆ ಮಾರಾಟ ಮಾಡಿ ಲಾಭ ಮಾಡಿ ಕೊಂಡು ಸರ್ಕಾಕ್ಕೆ ಮೋಸ ಮಾಡುವ ಉದ್ದೇಶ ದಿಂದ ಆಟೋದಲ್ಲಿ ಅಕ್ಕಿ ಮೂಟೆಗಳನ್ನು ಲೋಡ್ ಮಾಡಿಕೊಂಡು ಚಳ್ಳಕೆರೆಗೆ ಪಟ್ಟಣದ ಮಲ್ಲಿಕಾರ್ಜುನ ರವರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ.

ಖಚಿತ ಮಾಹಿತಿ ಮೇರೆಗೆ ಶ್ರೀ ಬಿ.ಮಂಜುನಾಥ ಆಹಾರ ನಿರೀಕ್ಷಕರು ತಾಲೂಕು ಕಛೇರಿ ಕೊಟ್ಟೂರು ರವರು ಕೊಟ್ಟೂರು ಪೊಲೀಸ್ ಠಾಣೆಯ ಪಿ.ಎಸ್.ಐ ಹಾಗೂ ಸಿಬ್ಬಂದಿ ಯವರೊಂದಿಗೆ ಪಂಚರು ಸಮಕ್ಷಮ ದಾಳಿ ನಡೆಸಿ 760 ಕೆ.ಜಿ. ಪಡಿತರ ಅಕ್ಕಿಯ 21 ಮೂಟೆಗಳು ಲೋಡ್ ಇದ್ದ ಮೇಲ್ಕಂಡ ಆಟೋವನ್ನು ಪಂಚರ ಸಮಕ್ಷಮದಲ್ಲಿ ಪಂಚನಾಮೆಯ ಮೂಲಕ ಜಪ್ತಿಪಡಿಸಿ ಕೊಂಡು ಅಕ್ಕಿ ಮೂಟೆಗಳನ್ನು ಸರ್ಕಾರಿ ಗೋದಾಮಿಗೆ ರವಾನಿಸಿ ರಸೀದಿ ಪಡೆದು ಕೊಂಡು ಪೊಲೀಸ್ ರಾಣೆಗೆ ಬಂದು ಆಟೋ ಚಾಲಕ ಡಿ.ಶ್ರೀನಿವಾಸ ಮತ್ತು ಪಡಿತರ ಅಕ್ಕಿ ಖರೀದಿಸುವ ಚಳ್ಳಕೆರೆ ಪಟ್ಟಣದ ಮಲ್ಲಿಕಾರ್ಜುನ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿ ತನಿಖೆಗೆ ಒಳ ಪಡಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು

