ಪರಿಶಿಷ್ಟ ಸಮಾಜದ ಅಭಿವೃದ್ಧಿಗೆ ಪಂಪ್ಸೆಟ್ – ವಿತರಿಸಿದ ಶಾಸಕ ಜಿ.ಎಚ್ ಶ್ರೀನಿವಾಸ್.
ತರೀಕೆರೆ ಡಿ.13

ಬಡವರು ಅಭಿವೃದ್ಧಿ ಯಾಗಲಿ ಎಂದು ಸರ್ಕಾರದಿಂದ ಕೊರೆದಿರುವ ಕೊಳವೆ ಬಾವಿಗೆ 20 ಲಕ್ಷ ರೂಗಳ ಪಂಪ್ ಸೆಟ್, ಮೋಟರ್ ಗಳನ್ನು ವಿತರಿಸುತಿದ್ದೇವೆ ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು.
ಅವರು ಇಂದು ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಡಾ, ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ದಿಂದ 19 ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಕಳೆದ ವರ್ಷ ಸರ್ಕಾರದಿಂದ ಕೊರೆದಿರುವ ಬೋರ್ವೆಲ್ ಫಲಾನುಭವಿಗಳಿಗೆ ಮೋಟರ್ ಮತ್ತು ಪಂಪ್ಸೆಟ್ಟುಗಳನ್ನು ವಿತರಿಸಿ ಮಾತನಾಡಿದರು ಪ್ರಸಕ್ತ ಸಾಲಿಗೆ 80 ಜನ ಫಲಾನುಭವಗಳಿಗೆ ಕೊಳವೆ ಬಾವಿಗಳನ್ನು ಕೊರೆಸಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ಸಮಾಜದ ಅಭಿವೃದ್ಧಿಗೆ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಇದರ ಸದುಪಯೋಗ ಪಡೆದುಕೊಂಡು ರೈತರು ತೋಟ ಜಮೀನು ಅಭಿವೃದ್ಧಿ ಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಸುನಿಲ್ ರವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

