ವೈಕುಂಠ ಏಕಾದಶಿ ಪ್ರಯುಕ್ತ – ವಿಶೇಷ ಗೋಪೂಜೆ.
ಚಳ್ಳಕೆರೆ ಡಿ.31


ದೇವರ ಎತ್ತುಗಳ ಮೇಲ್ವಿಚಾರಕರಾದ ಸಿದ್ದೇಶ್ ಅವರಿಗೆ ಶ್ರೀಶಾರದಾ ಸೇವಾಶ್ರಮದ 2026 ರ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಕೊಡುಗೆಯಾಗಿ ನೀಡಿದ ಸುಸಂದರ್ಭ….. 🙏💐
ನಗರದ ಹೊರ ವಲಯದ ಅಜ್ಜನಗುಡಿ ಸಮೀಪದಲ್ಲಿರುವ ನನ್ನಿವಾಳದ ಕಟ್ಟೆ ಮನೆಗೆ ಸೇರಿದ ದೇವರ ಎತ್ತುಗಳಿಗೆ ವೈಕುಂಠ ಏಕಾದಶಿಯನ್ನು ಗಾಂಧಿ ನಗರದ ಶ್ರೀಸಾಯಿಬಾಬಾ ಮಂದಿರದ ಸದ್ಭಕ್ತರು ವಿಶೇಷ ಗೋಪೂಜೆ ನೆರವೇರಿಸಿ ಅವುಗಳಿಗೆ ಅಕ್ಕಿ-ಬೆಲ್ಲ, ಬಾಳೆಹಣ್ಣು, ತರಕಾರಿ ಹಾಗೂ ಸಿಹಿ ವಿತರಿಸುವ ಮೂಲಕ ಆಚರಿಸಿದರು.

ಈ ಸಂದರ್ಭದಲ್ಲಿ ಗೋಪಾಲಕ ಸಿದ್ದೇಶ್ ಅವರು ದೇವರ ಎತ್ತುಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ, ರತ್ನಮ್ಮ, ಮಧುಮತಿ, ಜ್ಯೋತಿ, ಗೀತಾ ಕಿರಣ, ಪುಟ್ಟಣ್ಣ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಕಿಲಾರಿ ಪಾಲಯ್ಯ, ಓಬಣ್ಣ, ಪಾಲೆಪಾಪಯ್ಯ, ಸಾತ್ವಿಕ್, ಪೆದ್ದ ತಮ್ಮಯ್ಯ, ಗಿಡ್ಡ ಓಬಯ್ಯ, ಚಿನ್ನಯ್ಯ, ಚಾಟಿ ಓಬಯ್ಯ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

