🚨 ಬ್ರೇಕಿಂಗ್ ನ್ಯೂಸ್: ಕುಂದಾಪುರ ವಿದ್ಯಾರ್ಥಿಗಳ ಪರ ಅಜಿತ್ ಶೆಟ್ಟಿ ಹೋರಾಟಕ್ಕೆ ಜಯ! 🚨 ಕುಂದಾಪುರ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆ ನೀಗಿಸಿದ ಅಜಿತ್ ಶೆಟ್ಟಿ – ಸಚಿವ ರಾಮಲಿಂಗ ರೆಡ್ಡಿ ಅವರಿಂದ ಬಸ್ ಸೇವೆ ಮತ್ತು ದೇವಸ್ಥಾನಕ್ಕೆ ಅನುದಾನ ಮಂಜೂರು.
ಉಡುಪಿ ಡಿ.31

ಕುಂದಾಪುರ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಅವರು ನಡೆಸಿದ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಕೋಟ ವಿವೇಕ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಹಾಗೂ ದೇವಸ್ಥಾನ ಅಭಿವೃದ್ಧಿಗೆ ಸಚಿವ ರಿಂದ ಮಂಜೂರಾತಿ ಕೊಡಿಸುವಲ್ಲಿ ಅವರು ಯಶಸ್ವಿ ಯಾಗಿದ್ದಾರೆ.
ಸಚಿವರ ಭೇಟಿ ಮತ್ತು ಧನ್ಯವಾದ ಸಲ್ಲಿಕೆ:-
ರಾಜ್ಯದ ಹೆಮ್ಮೆಯ ಸಾರಿಗೆ ಹಾಗೂ ಮುಜುರಾಯಿ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರನ್ನು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಚೈತ್ರಾ ವಿ ಗೌಡ ಅವರೊಂದಿಗೆ ಬೆಂಗಳೂರಿನ ಕಚೇರಿಯಲ್ಲಿ ಭೇಟಿಯಾದ ಅಜಿತ್ ಶೆಟ್ಟಿ ಅವರು, ಗೋಳಿಯಂಗಡಿ – ಮಧುವನ – ವಡ್ಡರ್ಸೆ – ಕೋಟ – ಕುಂದಾಪುರ ಮಾರ್ಗಕ್ಕೆ ಬಸ್ ಸೇವೆ ಮಂಜೂರು ಮಾಡಿದ್ದಕ್ಕಾಗಿ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ದೇವಸ್ಥಾನ ಅಭಿವೃದ್ಧಿಗೆ ತಕ್ಷಣದ ಸ್ಪಂದನೆ:-
ಇದೇ ಸಂದರ್ಭದಲ್ಲಿ ಅಜಿತ್ ಶೆಟ್ಟಿ ಅವರು ಐತಿಹಾಸಿಕ ವಡ್ಡರ್ಸೆ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವಂತೆ ಸಚಿವರಿಗೆ ವಿಶೇಷ ವಿನಂತಿ ಮಾಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ತಕ್ಷಣವೇ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡುವ ಮೂಲಕ ಭಕ್ತರ ಆಶೋತ್ತರಗಳನ್ನು ಈಡೇರಿಸಿದ್ದಾರೆ.
ಮುಂದಿನ ಯೋಜನೆಗಳು:-
ಪ್ರಸ್ತುತ ಮಂಜೂರಾದ ಬಸ್ ಸೇವೆಯ ಜೊತೆಗೆ, ಕಾವಡಿ – ಸೈಬರ್ಕಟ್ಟೆ – ಕಾರ್ಕಡ ಮಾರ್ಗಕ್ಕೂ ಹೊಸ ಬಸ್ ಸೇವೆಯ ಅಗತ್ಯವಿದ್ದು, ಈ ಕುರಿತು ಅಜಿತ್ ಶೆಟ್ಟಿ ಅವರು ಈಗಾಗಲೇ ಸರ್ಕಾರಕ್ಕೆ ಅಧಿಕೃತ ಅರ್ಜಿ ಸಲ್ಲಿಸಿದ್ದಾರೆ. ಈ ಬೇಡಿಕೆಗೂ ಸರ್ಕಾರ ಶೀಘ್ರದಲ್ಲೇ ಸ್ಪಂದಿಸಿ, ಗ್ರಾಮೀಣ ಭಾಗದ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
“ನಮ್ಮ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಮನವಿ ಸಲ್ಲಿಸಲಾಗಿತ್ತು. ಸಚಿವರು ಅತ್ಯಂತ ಕಾಳಜಿಯಿಂದ ಬಸ್ ಸೇವೆ ಮತ್ತು ದೇವಸ್ಥಾನಕ್ಕೆ ಅನುದಾನ ಮಂಜೂರು ಮಾಡಿದ್ದಾರೆ. ಇದು ಕುಂದಾಪುರದ ಜನತೆಗೆ ಸಿಕ್ಕ ಜಯ.”
ವರದಿ:ಆರತಿ.ಗಿಳಿಯಾರು.ಉಡುಪಿ

