“2025 ಕ್ಕೆ ವಿದಾಯ 2026 ರ ಸುಸ್ವಾಗತಂ”…..

ಹೊಸ ವರುಷ ಸಕಲರು ಹರುಷವು
ದಿನ ದಿನವು ನಲಿವಿನ ಗೆಲುವಿರಲಿ
ನೋವು ಮರೆತು ಹೊಸ ಹೊಳಪಿರಲಿ
ಕೆರಳಿಸುವವರ ಗುಣ ಅಳಿಯಲಿ
ಮಧುರ ಭಾವ ಸುಗಂಧ ಸುಸಲಿ ಸರ್ವರಲಿ
ನೋವುಂಡ ಮನವು ಮರೆಯಲಿ
ಶುಭ ಘಳಿಗೆ ಸವಿ ನೆನಪಿರಲಿ
ಕಹಿ ಘಟನೆ ಮರೆತು ಸಿಹಿ ಸವಿ ಸಂಭ್ರಮವು
ವರುಷವು ಅರಳಿ ಮರಳಿ ಬರುತಿರಲಿ
ಹರುಷವು ನಿತ್ಯ ಜೀವನದಲಿ ಶುಭ ಹರುಷದ ಹೊಳೆ
ಹರಿಯುತ್ತಿರಲಿ
2025 ಕ್ಕೆ ವಿದಾಯ 2026 ರ ಆರಂಭ…..
ಸುಸ್ವಾಗತಂ ಸರ್ವರಿಗೂ ಸಿಹಿ ಶುಭ ತರಲಿ…..

ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

