ವಿಶ್ವನಾಥ ಬೈರಿ ಜಗನ್ನಾಥ ಪೈರಿ ಅವರ ಸ್ಮರಣಾರ್ಥವಾಗಿ – ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಂಡರು.

ಕಲಕೇರಿ ಜ.07

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ 2025/26 ನೇ. ಸಾಲಿನ ಪ್ರಭು.ಜೆ ಭೈರಿ ಸಮಾಜ ಸೇವಕರು ಹಾಗೂ ಉದ್ಯಮಿಗಳು ಅವರಿಂದ ಮಹಾತ್ಮ ಗಾಂಧೀಜಿ ವಾಣಿಜ್ಯ ಮಳಿಗೆಯ ಮುಂದುಗಡೆ ಸಿ.ಸಿ ರಸ್ತೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಲಕೇರಿ ಗ್ರಾಮದ ಜನರ ಸೇವೆ ಜನಾರ್ಧನ ಸೇವೆ ಎಂದು ಬಂಗಾರದ ಮನುಷ್ಯ ಎಂದ ಹೆಸರನ್ನು ಪಡೆದ ಪ್ರಭು ಜಯಪ್ಪ ಭೈರಿ ಇವರ ಸ್ವಂತ ತಮ್ಮ ಹಣದಿಂದ 25 ಲಕ್ಷ ರೂಪಾಯಿಗಳನ್ನು ತಮ್ಮ ದುಡ್ಡಿನಿಂದ ನಾನು ಹುಟ್ಟಿ ಬೆಳೆದ ಊರು ಅಭಿವೃದ್ಧಿ ಆಗಲಿ ಎಂದು ತಮ್ಮ ಸ್ವಂತ ದುಡ್ಡಿನಿಂದ ಈ ಕೆಲಸವನ್ನು ಮಾಡಿದರು ಇನ್ನೂ ಇವರಿಂದ ಕಲಕೇರಿ ಗ್ರಾಮದಲ್ಲಿ ಯಾವ ಸರಕಾರಗಳಿಂದ ಆಗದ ಕೆಲಸ ನಮ್ಮೂರಿನ ಹೆಮ್ಮೆಯ ಬಂಗಾರದ ಮನುಷ್ಯ ಎಂದು ಸಾರ್ವಜನಿಕರು ಹೇಳಿದಂತ ಪ್ರಭು ಜಯಪ್ಪ ಭೈರಿ ಇವರು ಕೋಟಿ ಗೊಬ್ಬರು ಎಂದು ಜನರು ಹೇಳಿದರು.

ಕಲಕೇರಿ ಗ್ರಾಮದಲ್ಲಿ ಅನೇಕ ವಾರ್ಡಿನಲ್ಲಿ ಸಿ.ಸಿ ರಸ್ತೆ ನಿರ್ಮಾಣ ಇವರೇ ಸ್ವಂತ ತಮ್ಮ ದುಡ್ಡಿನಿಂದ ಆ ಕೆಲಸಗಳನ್ನು ಮಾಡುತ್ತಿದ್ದಾರೆ ಇವರನ್ನು ಎಷ್ಟು ಗುಣಗಾನ ಮಾಡಿದರು ಸಾಲದು ಎಂದು ಜನರು ತಿಳಿಸಿದರು. ಇವತ್ತು ಕಲಕೇರಿ ಗ್ರಾಮದಲ್ಲಿ ವಾಣಿಜ್ಯ ಮಳಿಗೆಯ ಎದುರು ಸಿ.ಸಿ ರಸ್ತೆ ಹಾಗೂ ಸಾರ್ವಜನಿಕರ ಕುಡಿಯುವ ನೀರಿನ ಟ್ಯಾಂಕ ಉದ್ಘಾಟನೆ ಮಾಡಿದ ರಾಘು ದೇಸಾಯಿ. ಶಾಂತು ಹೊಸ ಗೌಡ್ರು ಇವರ ನೇತೃತ್ವದಲ್ಲಿ ಉದ್ಘಾಟನೆ ಕಾರ್ಯಕ್ರಮ ಜರುಗಿತು.ಅಶೋಕ್ ಭವಿ ಇವರು ಈ ಸಂದರ್ಭದಲ್ಲಿ ಪ್ರಭು ಭೈರಿ ಇವರ ಮಾಡಿದಂತ ಕೆಲಸಗಳನ್ನು 25 ಲಕ್ಷ ರೂಪಾಯಿ ಸ್ವಂತ ತಮ್ಮ ದುಡ್ಡಿನಿಂದ ಈ ಕೆಲಸಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಹಣಮಂತ ವಡ್ಡರ್ ಇವರು ಪ್ರಭು ಭೈರಿ ಇವರ ನಮ್ಮ ಕಲಕೇರಿ ಗ್ರಾಮದಲ್ಲಿ ಅನೇಕ ವಾರ್ಡಿನಲ್ಲಿ ಸಿ.ಸಿ ರಸ್ತೆಗಳನ್ನು ನಿರ್ಮಾಣ ಮಾಡಿದ್ದಾರೆ ಹಾಗೂ ವಾಣಿಜ್ಯ ಮಳಿಗೆ ಎದುರುಗಡೆ ಸಿ.ಸಿ ರಸ್ತೆ ಹಾಗೂ ಕುಡಿಯುವ ನೀರಿನ ಟ್ಯಾಂಕಿನ ನಿರ್ಮಾಣ ಮಾಡಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ರಾಜು ಜಂಬಗಿ. ವಿನೋದ್ ವಡಿಗೇರಿ. ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಾಜ್ ಅಹ್ಮದ್ ಸಿರಸಗಿ. ಎಲ್ಲಾ ಗ್ರಾಮ ಪಂಚಾಯಿತಿಯ ಸದಸ್ಯರು ಸೇರಿದಂತೆ ಪೂಜೆಯನ್ನು ಸಲ್ಲಿಸಿ ಉದ್ಘಾಟನೆ ಮಾಡಿದರು. ಕೆ.ಡಿ. ದೇಸಾಯಿ. ರಾಮರಾವ್ ದೇಶಮುಖ್. ಭೀಮಣ್ಣ ವಡ್ಡರ್. ಮತ್ತು ಬೆಂಡೆಗುಂಬಳ. ಸುನಿಲ್ ಜಂಗಣಿ . ದೇವಿಂದ್ರ ಬಡಿಗೇರ್. ಪರಶುರಾಮ್ ವಡ್ಡರ್. ವಿಶ್ವ ಮೋಪಗಾರ. ಉಮೇಶ್ ಹೆಗ್ಗಣದೊಡ್ಡಿ. ಫಾರೂಕ್ ವಲ್ಲಿಭಾವಿ. ಸಂಗಪ್ಪ ಗೌಂಡಿ.

ತಾಲೂಕ ವರದಿಗಾರರು , ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮೈಬೂಬಬಾಶಾ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button