ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕು – ವಸಂತ ಕುಮಾರ್ ಕವಾಲಿ.
ತರೀಕೆರೆ ಜ.8

ಪಟ್ಟಣದ ಅಭಿವೃದ್ಧಿಗೆ 15 ನೇ. ಹಣಕಾಸು ಯೋಜನೆ ಅಡಿ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕು ಎಂದು ಪುರಸಭಾ ಅಧ್ಯಕ್ಷರಾದ ವಸಂತಕುಮಾರ್ ಕವಾಲಿ ರವರು ಹೇಳಿದರು, ಅವರು ಇಂದು ಪಟ್ಟಣದ ಪುರಸಭಾ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದರು.
ಸದಸ್ಯರಾದ ಟಿಎಮ್ ಬೋಜರಾಜು ಮಾತನಾಡಿ ಪ್ರತಿ ವಾರ್ಡಿನಲ್ಲಿಯೂ ಕಸದ ರಾಶಿಗಳು ಬಿದ್ದಿವೆ ಪಟ್ಟಣದ ಸ್ವಚ್ಛತೆಗೆ ಹೆಚ್ಚು ಗಮನ ಕೊಡಬೇಕು, ಮಕರ ಸಂಕ್ರಾಂತಿ ಹಬ್ಬ ಮತ್ತು ಅಂತರಗಟ್ಟೆ ಅಮ್ಮನವರ ಹಬ್ಬ ಇರುವುದರಿಂದ ಸ್ವಚ್ಛತೆಯೊಂದಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ನೀಡಬೇಕು ಎಂದು ಹೇಳಿದರು ಇವರ ಜೊತೆ ಸದಸ್ಯರಾದ ಚೇತನ್, ಟಿ ಜಿ ಲೋಕೇಶ್, ಪರಮೇಶ್ ರವರು ಧ್ವನಿಗೂಡಿಸಿ ಪ್ರಸ್ತಾಪಿಸಿದರು.
ಅಶೋಕ್ ಕುಮಾರ್ ಮಾತನಾಡಿ ಮುಖ್ಯ ಅಧಿಕಾರಿಗಳು ವಾರ್ಡುಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿಲ್ಲ ಎಂದು ದೂರಿದರು,ಟಿ ಜಿ ಲೋಕೇಶ್ ಪರಮೇಶ್, ಚಂದ್ರಶೇಖರ್, ದಾದಾಪೀರ್ ರವರು ಸಹ ಆಕ್ಷೇಪಣೆ ವ್ಯಕ್ತಪಡಿಸಿದರು.
ನಿಧನ ಹೊಂದಿದ ವ್ಯಕ್ತಿಯ ಹೆಸರಲ್ಲಿ ಟೆಂಡರ್ ಹಾಕಿರುವ ಬಗ್ಗೆ ಟಿಎಮ್ ಬೋಜರಾಜ್ ಮತ್ತು ಟಿಜಿ ಮಂಜುನಾಥ್ ರವರು ತೀವ್ರ ವಿರೋಧ ವ್ಯಕ್ತಪಡಿಸಿ ಸದರಿ ಕಾಮಗಾರಿಯ ಟೆಂಡರ್ ಅನ್ನು ರದ್ದುಪಡಿಸಿ ಮರು ಟೆಂಡರ್ ಕರೆಯಬೇಕೆಂದು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸದರಿ ಕಾಮಗಾರಿ ಟೆಂಡರ್ ಅನ್ನು ಮುಂದೂಡಲಾಯಿತು.
ಉಳಿದ ವಾರ್ಡ್ ನಂಬರ್ ಒಂದರ ಕೋಟೆ ಕ್ಯಾಂಪ್, ವಾರ್ಡ್ ನಂಬರ್ 17 ರ ಕುಂಬಾರ ಬೀದಿ, ವಾರ್ಡ್ ನಂಬರ್ 18 ರ ಲಿಂಗದಹಳ್ಳಿ ರಸ್ತೆ ಕಾಮಗಾರಿ ಹಾಗೂ ವಾರ್ಡ್ ನಂಬರ್ 19,20, 21,22, 23 ರಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ವಾರ್ಡ್ ನಂಬರ್ 9,10,12, 13, 14,15,16 ರಲ್ಲಿ ರಸ್ತೆ ಚರಂಡಿ ದುರಸ್ತಿ ಕಾಮಗಾರಿಗಳಿಗೆ ಮತ್ತು ಘನತ್ಯಾಜ್ಯ ವಸ್ತು ವಿಲೇವಾರಿ ವಾಹನ ನಿಲುಗಡೆ ಕಾಮಗಾರಿಗಳನ್ನು ಮಾಡಲು ಸಭೆಯು ಸಮ್ಮತಿ ವ್ಯಕ್ತಪಡಿಸಿತು.
ಮತ್ತು ಪರಿಸರ ಅಭಿಯಂತರರಾದ ಶ್ರೀಮತಿ ತಹೇರ ತಸ್ಮೀನ್ ರವರು ಉಚ್ಚ ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಸಭೆಯಲ್ಲಿ ಸಮ್ಮತಿ ಕೋರಿದರು. ಮುಖ್ಯ ಅಧಿಕಾರಿ ರಂಜನ್ ಮಾತನಾಡಿ ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಷಯಗಳ ಬಗ್ಗೆ ಕ್ರಮ ವಹಿಸುತ್ತೇವೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಗೀತಾ ಸದಸ್ಯರಾದ ರಿಹಾನ ಪರ್ವೀನ್,ಕುಮಾರಪ್ಪ, ರಂಗನಾಥ, ಅಂಜಯ್ಯ ಅನಿಲ್, ಬಸವರಾಜು, ದಿವ್ಯ ರವಿ, ಗಿರಿಜಾ ಪ್ರಕಾಶವರ್ಮ, ಪಾರ್ವತಮ್ಮ, ಶಮ್ಮಿಮ್ ಬಾನು, ಯಶೋದಮ್ಮ, ಆಶಾ ನಾಮಿನಿ ಸದಸ್ಯರಾದ ಆದಿಲ್ ಪಾಶ, ಮಂಜುನಾಥ, ಉಪಸ್ಥಿತರಿದ್ದು ಕಚೇರಿ ವ್ಯವಸ್ಥಾಪಕರಾದ ವಿಜಯ್ ಕುಮಾರ್ ಸ್ವಾಗತಿಸಿ ಹೊಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

