ಶ್ರೀ ನಿವಾಸ ಪ್ರೊಡಕ್ಷನ್ಸ್ ನ ಹೆಚ್.ಸಿ ಶ್ರೀ ನಿವಾಸ ರವರು – ಶಿಲ್ಪಾ ಶ್ರೀ ನಿವಾಸ ಚಿತ್ರ ತೆರೆಗೆ ತರಲು ಸಿದ್ಧತೆ.
ಬೆಂಗಳೂರು ಜ.10

ಸ್ನೇಹಾಲಯ ಕ್ರಿಯೇಷನ್ಸ್ ಬ್ಯಾನರ್ ನ ಅಡಿಯಲ್ಲಿ ಶಿಲ್ಪಾ ಶ್ರೀನಿವಾಸ್ ಸಿನಿಮಾ. ಮನೋಹರ್, ಮಂಜುನಾಥ್ ಗೌರಜ್ಜಿ, ನಮ್ರತಾ ಗೌಡ, ಸೀತಾರಾಂ, ಗೋವಿಂದ್, ಲೋಕೇಶ್, ಶಿವಕುಮಾರ್ ಮತ್ತು ಸತೀಶ್ ರವರು ಒಟ್ಟುಗೂಡಿ ಕ್ರೌಡ್ ಫಂಡಿಂಗ್ ನಲ್ಲಿ ನಿರ್ಮಾಣ ಮಾಡಿದ ಸಿನಿಮಾ ಶಿಲ್ಪಾ ಶ್ರೀನಿವಾಸ್ ಈಗ ಡಬ್ಬಿಂಗ್ ಹಂತದಲ್ಲಿದೆ. ನಗರದ ಲಗ್ಗೆರೆಯ ಮ್ಯಾನ್ ಲಿಯೋ ಸ್ಟುಡಿಯೋದಲ್ಲಿ ಮೊದಲದಿನವೇ ಶಂಖನಾದ ಆಂಜಿನಪ್ಪ. ಅನ್ನಪೂರ್ಣ. ನಾಗೇಂದ್ರ ಅರಸ್, ಶಿಲ್ಪಾ ಶ್ರೀನಿವಾಸ್, ಮೊದಲಾದ ಕಲಾವಿದರು ಕಂಠದಾನ ನೀಡುವುದರ ಮೂಲಕ ಡಬ್ಬಿಂಗ್ ಕಾರ್ಯ ಪ್ರಾರಂಭ ಗೊಂಡಿದೆ. ರಾಜೀವ್ ಕೃಷ್ಣ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ, ಸಂಗೀತ ಅನಿರುದ್ಧ ಶಾಸ್ತ್ರಿ, ಸಂಕಲನ ಮಲ್ಲಿ, ಸಾಹಿತ್ಯ ಪ್ರತಾಪ್ ಭಟ್, ಕಲೆ ಮಲ್ಲಿಕಾರ್ಜುನ, ಪ್ರಸಾಧನ ಮೋಹನ ಕುಮಾರ್, ಸ್ಥಿರ ಚಿತ್ರಣ ಇಂದ್ರಕುಮಾರ್, ನೃತ್ಯ ಮತ್ತು ಸಾಹಸ ಆರ್ ಕೆ ಗಾಂಧಿ, ಪತ್ರಿಕಾ ಸಂಪರ್ಕ ಎಂ.ಜಿ ಕಲ್ಲೇಶ್, ವಿ.ಎಂ.ಎಸ್ ಗೋಪಿ.

ಈ ಚಿತ್ರದ ಚಿತ್ರೀಕರಣ ಹೊಸಕೋಟೆ ವೈಟ್ ಪೀಲ್ಡ್ ಬೆಳ್ಳಿಕೆರೆ, ಕೂಗೂರು. ವಾಲೆಪುರದ ಹಲವು ಲೊಕೇಶನ್ ಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣವಾಗಿದೆ. ಶಿಲ್ಪಾ ಶ್ರೀನಿವಾಸ್ ಚಿತ್ರದ ತಾರಾಗಣದಲ್ಲಿ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರು. ಹಿರಿಯ ನಿರ್ಮಾಪಕರೂ ಆದ ಶಿಲ್ಪಾ ಶ್ರೀನಿವಾಸ್ ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದು ಉಳಿದ ತಾರಾಂಗಣದಲ್ಲಿ ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಪ್ರಿಯ,ಧನ್ಯ ಭೂಮಿಕಶ್ರೀ, ಶೋಭರಾಜ್, ನಾಗೇಂದ್ರ ಅರಸ್, ನಂದಿನ ಕಮ್ಮಯ್ಯ, ಶಂಖನಾದ ಆಂಜಿನಪ್ಪ, ಅನ್ನಪೂರ್ಣ, ಗೋವಿಂದ್, ಲೋಕೇಶ್, ಮಾಸ್ಟರ್ ಮನ್ವಿತ್ ಗೌಡ. ಮಾಸ್ಟರ್ ಅಭ್ಯಂತ್,ಶಿವಕುಮಾರ್, ಡಾ, ರಾಜ, ಮೊದಲಾದವರು ನಟಿಸಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಶ್ರೀನಿವಾಸ ಪ್ರೊಡಕ್ಷನ್ಸ್ ನ ಹೆಚ್.ಸಿ ಶ್ರೀನಿವಾಸ್ ರವರು ಶಿಲ್ಪಾ ಶ್ರೀನಿವಾಸ್ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರಲು ಸಿದ್ದತೆ ನಡೆಸುತ್ತಿದ್ದಾರೆ.
– ವಿ.ಎಂ.ಎಸ್ ಗೋಪಿ ✍️
ಬೆಂಗಳೂರು.

