ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ – ಶ್ರೀಶೈಲ ಮಠಪತಿ.
ಆಲಮೇಲ ಜ.27

ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ಧ್ವಜಾರೋಹಣ ನೆರವೇರಿಸಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಆಲಮೇಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶ್ರೀಶೈಲ ಮಠಪತಿ ಇಂದು ಇಡೀ ದೇಶವು ಸಂಭ್ರಮದಿಂದ ಗಣರಾಜ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿಶ್ವದಲ್ಲೇ ಅತಿ ದೊಡ್ಡ ಗಣತಂತ್ರ ಹೊಂದಿರುವ ನಮ್ಮ ಸಂವಿಧಾನವು ವಿಶ್ವಕ್ಕೆ ಮಾದರಿ ಯಾಗಿದೆ.

ಸಾನ್ವಿ ಮಾದರ ಒಂದನೆಯ ತರಗತಿ ಮಗು ಸಂವಿಧಾನ ಪೀಠಿಕೆಯನ್ನು ಸುಸ್ಪಷ್ಟವಾಗಿ ಬೋಧಿಸುವುದನ್ನು ಗಮನಿಸಿದರೆ ಶಾಲೆಯ ಬೋಧನೆ ಬಹಳ ವೈಶಿಷ್ಟ್ಯವನ್ನು ಹೊಂದಿದೆ. ಜೊತೆಗೆ ಹಲವಾರು ಮಕ್ಕಳು ಸ್ಪಟಿಕದಂತೆ ಭಾಷಣಗಳನ್ನು ಮಾಡಿರುವುದು ದೇಶ ಭಕ್ತಿ ಗೀತೆ, ನೃತ್ಯ, ಸಾಮೂಹಿಕ ಕವಾಯಿತು, ಡಂಬೇಲ್ಸ, ಹುಪ್ಸ, ಲೇಝೀಮ ಮುಂತಾದ ಚಟುವಟಿಕೆಗಳು ಪ್ರಶಂಸನೀಯ.
ಈ ವೇಳೆ ತಾರಾ ಮಂಡಲ ಚಿತ್ರ ಕಲೆಯ ಪರೀಕ್ಷೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಆಯ್ ಜೋಗೂರ, ಸದಸ್ಯ ಶಿವಾನಂದ ಮಾರ್ಸನಳ್ಳಿ ಮಾತನಾಡಿದರು.

ಈ ವೇಳೆ ಮುಖ್ಯ ಅತಿಥಿಗಳಾದ ಮಾಜಿ.ಎ.ಪಿ.ಎಮ್.ಸಿ ಅಧ್ಯಕ್ಷ ಪ್ರಭು ವಾಲಿಕಾರ, ಪಾಲಕ ಪ್ರತಿನಿಧಿಗಳು ಶಿವಲಿಂಗಪ್ಪ ಕಲಶೆಟ್ಟಿ, ಪಾರ್ಶ್ವನಾಥ ಶೆಟ್ಟಿ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕಿ ಸುವರ್ಣ ಸಾರಂಗಮಠ ಸ್ವಾಗತಿಸಿದರು, ಪ್ರಶಾಂತ ಗಡದೆ ನಿರೂಪಿಸಿದರು, ಚಂದ್ರಕಾಂತ ದೇವರಮನಿ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹಿರೇಮಠ ಆಲಮೇಲ
