ಭಾರತ ದೇಶವು ಅನೇಕ ಧರ್ಮ, ಭಾಷೆ – ಸಂಸ್ಕೃತಿಗಳ ಸಂಗಮ.
ಆಲಮೇಲ ಜ.27

ಭಾರತ ದೇಶವು ಅನೇಕ ಧರ್ಮ ಭಾಷೆ ಸಂಸ್ಕೃತಿಗಳ ಸಂಗಮವಾಗಿದೆ ಎಂದು ಯುವ ನಾಯಕ ಮಹೇಂದ್ರ ಗುಗ್ಗರಿ ಹೇಳಿದರು.
ಅವರು ತಾಲೂಕಿನ ದೇವರ ನಾವದಗಿ ಗ್ರಾಮದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 77 ನೇ. ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಒಂದು ದೇಶ ಒಂದು ಸಂವಿಧಾನ ನಾವೆಲ್ಲರೂ ಒಂದೇ ಎಂಬ ಭಾವ ಮೂಡಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ, ಸಂವಿಧಾನ ಜನರ ಆಶಯಗಳನ್ನು, ಮೌಲ್ಯಗಳನ್ನು, ಕರ್ತವ್ಯಗಳನ್ನು ಜನರಲ್ಲಿ ಅರಿವು ಮೂಡಿಸಿ ಎಲ್ಲ ನಾಗರಿಕರಿಗೆ ಸಮಾನವಾದ ಅವಕಾಶವನ್ನು ಒದಗಿಸುತ್ತದೆ ಎಂದರು.
ಸಂಸ್ಥೆಯ ಆಡಳಿತ ಅಧಿಕಾರಿ ಪ್ರಕಾಶ್ ಗುಗ್ಗರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಸವರಾಜ ಬೊಮ್ಮನಜೋಗಿ, ಎಪಿಎಂಸಿ ಉಪಾಧ್ಯಕ್ಷ ಶಿವಶರಣ ಗುಂದಗಿ, ಪಿಕೆಪಿಎಸ್ ಅಧ್ಯಕ್ಷ ಶ್ರೀಮಂತ ಕುಮಸಿ, ಕುಮಾರಿ ಅಭಿಲಾಷ ಗುಗ್ಗರಿ, ಪ್ರಾಚಾರ್ಯ ಎಮ್ ಜಿ ಉಪ್ಪಾರ, ಮುಖ್ಯ ಗುರುಗಳಾದ ಆರ್ ಬಿ ಹಿರೇಮಠ ಉಪನ್ಯಾಸಕರಾದ ಬಿ ವೈ ಬಿರಾದಾರ್ ನಿವೃತ್ತ ಶಿಕ್ಷಕ ಸಿ ಎಸ್ ವಾಲಿಕಾರ ಎ ವೈ ತೇಲಿ, ಎಸ್ ಜಿ ಗುಗರಿ, ಆರ್.ಎಂ ಹೊಸಮನಿ, ಎಸ್.ಕೆ ಮೂರುಚಾವರ ಉಪಸ್ಥಿತರಿದ್ದರು.
ಪಿಕೆಪಿಎಸ್ ಅಧ್ಯಕ್ಷ ಶ್ರೀಮಂತ ಕುಮಶಿ, ಪತ್ರಕರ್ತ ಗುರು ಆರ್ ಹಿರೇಮಠ, ವೈದ್ಯಕೀಯ ಸೀಟು ಪಡೆದಿರುವ ವಿದ್ಯಾರ್ಥಿನಿ ಅಭಿಲಾಷ ಗುಗ್ಗರಿ, ಅವರುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಚಾರ್ಯ ಎಂ.ಜಿ ಉಪ್ಪಾರ ಸ್ವಾಗತಿಸಿದರು. ಶಿಕ್ಷಕ ಎ.ವೈ ಬಡಿಗೇರ ನಿರೂಪಿಸಿದರು, ಉಪನ್ಯಾಸಕರಾದ ಬಿ.ವೈ ಬಿರಾದಾರ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹಿರೇಮಠ ಆಲಮೇಲ
