ಫೆಬ್ರವರಿ 2 ರಂದು ವಿಶೇಷ – ಸತ್ಸಂಗ ಕಾರ್ಯಕ್ರಮ.
ಚಳ್ಳಕೆರೆ ಜ.27

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಫೆಬ್ರವರಿ 2 ರ ಸೋಮವಾರ ಸಂಜೆ 5.30 ರಿಂದ 7.45 ರ ವರೆಗೆ ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿಶೇಷ ಭಜನೆಯನ್ನು ಮೈಸೂರಿನ ಶ್ರೀಶಾರದಾ ವಿಶ್ವಭಾವೈಕ್ಯ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅಮೋಘಮಯೀ ನಡೆಸಿಕೊಡಲಿದ್ದು “ಜಪ ಸಾಧನೆಯನ್ನು ಕುರಿತು ಶ್ರೀಮಾತೆಯವರ ಮಾರ್ಗದರ್ಶನ” ಎಂಬ ವಿಷಯವಾಗಿ ದಾವಣಗೆರೆಯ ಸಾಧನಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಯೋಗಾನಂದಮಯೀ ಹಾಗೂ ಬೆಂಗಳೂರಿನ ಶ್ರೀಭವತಾರಿಣಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ವಿವೇಕಮಯೀ ಅವರು “ಸಾರ್ಥಕ ಬದುಕಿಗೆ ಅಧ್ಯಾತ್ಮ” ಎಂಬ ವಿಷಯವಾಗಿ ವಿಶೇಷ ಪ್ರವಚನವನ್ನು ಮಾಡಲಿದ್ದಾರೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

