ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ 77 ನೇ. – ಗಣರಾಜ್ಯೋತ್ಸವ ಆಚರಣೆ.
ಕೂಡ್ಲಿಗಿ ಜ.27

ಮಹಿಳೆಯರ ಅಭಿವೃದ್ಧಿ ದೇಶದ ಅಭಿವೃದ್ಧಿ ಸಂವಿಧಾನದ ಮೌಲ್ಯ ಅಳವಡಿಸಿ ಕೊಂಡು ಬಲಿಷ್ಠ ದೇಶ ಕಟ್ಟುವ ಸಂಕಲ್ಪ ಮಾಡೋಣ ಎಂದು ಶಾಸಕ ಡಾ, ಎನ್.ಟಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಶ್ರೀ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಆಡಳಿತದಿಂದ 77 ನೇ. ಗಣರಾಜ್ಯೋತ್ಸವದ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ನ್ಯಾಯ, ಸಮಾನತೆ ಭ್ರಾತೃತ್ವ, ಈಡೇರಿಸಲು ಮುನ್ನಡಿ ಬರೆಯಬೇಕು ನಿಮ್ಮ ಒಂದು ಮತದಾನವು ಉತ್ತಮ ಆಡಳಿತ ನೀಡಲು ಸಾಧ್ಯವಾಯಿತು.
ಭಾರತ ಹಳ್ಳಿಗಳ ದೇಶವಾಗಿದ್ದು ಮಾನವ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಗಳಾದ ವಸತಿ, ಶಿಕ್ಷಣ, ಆರೋಗ್ಯ, ನೈರ್ಮಲೀಕರಣ, ರಸ್ತೆ ಅಭಿವೃದ್ಧಿ ಸೇರಿದಂತೆ ಪ್ರತಿಯೊಬ್ಬ ಬಡವನಿಗೂ ಈ ಮೂಲಭೂತ ಸೌಕರ್ಯಗಳು ತಲುಪುವಂತೆ ಮಾಡುವುದಾಗಿದೆ.

ಶಿಕ್ಷಣ ಮತ್ತು ರಸ್ತೆ ಅಭಿವೃದ್ಧಿಗೆ ಆದ್ಯತೆ:-
ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿಯೂ ಶಿಕ್ಷಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿ ತಾಲೂಕಿನಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಸೇರಿದಂತೆ 48 ದ್ವಿ ಭಾಷಾ ಶಾಲೆಗಳ ತರಗತಿಗಳು ಪ್ರಾರಂಭವಾಗಿದ್ದು. ಇದರ ಜೊತೆಗೆ ಹಂತ ಹಂತವಾಗಿ ಎಂಟು ಕೆಪಿಎಸ್ಸಿ ಶಾಲೆಗಳನ್ನು ತಾಲೂಕಿನಲ್ಲಿ ನಮ್ಮ ರಾಜ್ಯ ಸರಕಾರ ಅನುಮೋದನೆ ನೀಡಲಾಗಿದೆ. ನೂತನ ಸರ್ಕಾರಿ ಶಾಲೆ ಕಟ್ಟಡಗಳು ನಿರ್ಮಾಣ ಸೇರಿದಂತೆ ಕ್ಷೇತ್ರದಲ್ಲಿ ಶಿಕ್ಷಣದ ಕ್ರಾಂತಿಕಾರಿ ಬೆಳವಣಿಗೆ ಸಾಧ್ಯವಾಗಲಿದೆ. ಮುಖ್ಯವಾಗಿ ಗಡಿ ಗ್ರಾಮದ ರಸ್ತೆಗಳು ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು. ಉಜ್ಜಿನಿ, ಅಪ್ಪಯ್ಯನ ಹಳ್ಳಿ, ಕಕ್ಕುಪ್ಪಿ, ನಾಗರ ಹುಣಸೆ ಗ್ರಾಮಗಳ ಸೇತುವೆಗಳ ನಿರ್ಮಾಣ ಈಗಾಗಲೇ ಮುಗಿಯುವ ಹಂತದಲ್ಲಿದೆ ಶೀಘ್ರದಲ್ಲೇ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದರು. ಅಷ್ಟೇ ಅಲ್ಲದೆ ಸಮಗ್ರ ಅಭಿವೃದ್ಧಿ ಪಡಿಸಿ, ತಾಲೂಕಿನ ಸರ್ಕಾರಿ ಆಸ್ಪತ್ರೆಯು 100 ಹಾಸಿಗೆಯಿಂದ 150 ಹಾಸಿಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಕೆರೆ ನೀರು ತುಂಬಿಸುವ ಯೋಜನೆ, ಪರಿಸರ ಸಂರಕ್ಷಣೆ ಸೇರಿದಂತೆ ಬಲಿಷ್ಠ ರಾಷ್ಟ್ರವನ್ನು ಕಟ್ಟುವ ಪ್ರಯತ್ನ ಎಲ್ಲರೂ ಸೇರಿ ಮಾಡೋಣ ಅದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.

ಗುಡೇಕೋಟೆ ಉತ್ಸವಕ್ಕೆ ಹೊಸ ಕಳೆ:-
ಕಳೆದ ಮೂರು ವರ್ಷಗಳಿಂದ ಗುಡೆಕೋಟೆಯ ಪ್ರತಿ ವರ್ಷ ಜರುಗಲಿರುವ ಒನಕೆ ಓಬವ್ವ ಅವರ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಈ ಬಾರಿಯೂ ಸಹ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲರಿಗೂ ಆಹ್ವಾನ ನೀಡಲಾಗುತ್ತಿದ್ದು ಯಾವುದೇ ಎಲ್ಲರ ಸಹಕಾರ ಮುಖ್ಯವಾಗಲಿದೆ ಎಂದರು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ದೇಶಭಕ್ತಿ ಹಾಡಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ತಹಶೀಲ್ದಾರ್ ವಿ.ಕೆ ನೇತ್ರಾವತಿ ಧ್ವಜಾರೋಹಣ ನಿರ್ವಹಿಸಿದರು. ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್, ಬಿಸಿಎಂ ಇಲಾಖೆ ಅಧಿಕಾರಿ ಶ್ಯಾಮಪ್ಪ, ಎಇಇ ನಾಗನಗೌಡ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಜಿಲಾನ್, ಉದಯ್ ಜನ್ನು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್ ವೆಂಕಟೇಶ್, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಡಾ, ಟಿ.ಕೊತ್ಲಮ್ಮ, ಸಾವಜ್ಜಿ ರಾಜೇಂದ್ರ ಪ್ರಸಾದ್ ಸೇರಿದಂತೆ ವಿವಿಧ ಶಾಲಾ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ. ಹೊಸಹಳ್ಳಿ

