ಯೋಗ ಸಾಧನೆಗೆ ಕೀರ್ತನಾ ಆರ್ ಅವರಿಗೆ – ತಾಲೂಕು ಆಡಳಿತದಿಂದ ಸನ್ಮಾನ.
ಚಳ್ಳಕೆರೆ ಜ.27

ಯೋಗಾಸನದ ವಿವಿಧ ಭಂಗಿಗಳನ್ನು ಅತ್ಯಂತ ಕ್ಲಿಷ್ಟಕರ ಆಸನಗಳನ್ನು ಅನಾಯಾಸವಾಗಿ ಮಾಡುವ ಪ್ರಗತಿ ವಿದ್ಯಾಲಯದ ಆರನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕೀರ್ತನಾ ಆರ್ ಅವರ ಯೋಗಕ್ಷೇತ್ರದ ಸಾಧನೆಗಾಗಿ ನಗರದ ಬಿಸಿ ನೀರು ಮುದ್ದಪ್ಪ ಪ್ರೌಢ ಶಾಲಾ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ 77 ನೇ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಳ್ಳಕೆರೆಯ ಜನಪ್ರಿಯ ಶಾಸಕರಾದ ಟಿ.ರಘುಮೂರ್ತಿ ಅವರು ಸನ್ಮಾನಿಸಿ ಗೌರವಿಸಿದರು.


ಈ ಸಂದರ್ಭದಲ್ಲಿ ಕೀರ್ತನಾ ಅವರು ದೇಶಭಕ್ತಿ ಗೀತೆಗೆ ಯೋಗ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು. ಸನ್ಮಾನ ಸಮಾರಂಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರೆಹಾನ್ ಪಾಷಾ, ಇ.ಓ ಶಶಿಧರ್, ಪೌರಾಯುಕ್ತ ಜಗರೆಡ್ಡಿ, ಡಿವೈಎಸ್ಪಿ ಸತ್ಯನಾರಾಯಣರಾವ್, ಕೆ.ಎಸ್ ಸುರೇಶ್, ಕೀರ್ತನಾ ತಾಯಿ ಶೋಭಾ ರಮೇಶ್, ಶ್ರೀನಿವಾಸ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಕಮಲಾಕ್ಷಿ, ಕಾರ್ತಿಕ್, ಯಶಸ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

