ಸಿಂಡಿಕೇಟನ ನಾಮನಿರ್ದೇಶಿತ ಸದಸ್ಯ ಜಗದೀಶ ಭೈರಮಟ್ಟಿಯವರಿಗೆ – ಸನ್ಮಾನ ಕಾರ್ಯಕ್ರಮ ಜರಗಿತು.
ಬೇವೂರ ಜ.28

ಆದರ್ಶ ವಿದ್ಯಾ ವರ್ಧಕ ಸಂಘ ವಜ್ರ ಮಹೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಇರಲಾಗಿದ್ದು ಸಂಸ್ಥೆಗೆ ಹಿರಿಮೆಯ ಗರಿ ಹೆಮ್ಮೆ ಎಂಬಂತೆ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಾಲೇಜಿನ ಪ್ರಾಚಾರ್ಯರಾದ ಡಾ, ಜಗದೀಶ.ಗು ಭೈರಮಟ್ಟಿಯವರು ಬಾಗಲಕೋಟೆ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ್ ಪರಿಷತ್ತು ಹಾಗೂ ಸಿಂಡಿಕೇಟನ ನಾಮನಿರ್ದೇಶಿತ ಸದಸ್ಯರಾಗಿ ಮಾನ್ಯ ಕುಲಪತಿಗಳಿಂದ ನಾಮಕರಣ ಗೊಂಡಿರುವುದು ಸಂಸ್ಥೆಗೆ ಅಭಿಮಾನ ಹಾಗೂ ಗೌರವದ ಸಂಗತಿಯಾಗಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಜಿ.ಜಿ. ಮಾಗನೂರ ವಕೀಲರು ಹೇಳಿದರು. ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ 77 ನೇ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ನೂತನ ಸಿಂಡಿಕೇಟ್ ಸದಸ್ಯರಾದ ಜಗದೀಶ ಗು. ಭೈರಮಟ್ಟಿಯವರಿಗೆ ಸಂಸ್ಥೆಯ ವತಿಯಿಂದ ಅಭಿನಂಧನಾ ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸತ್ಕಾರ ಸಮಾರಂಭದಲ್ಲಿ ಸಂಸ್ಥೆಯ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪಿ.ಎಸ್ ಸಜ್ಜನ ಕಾಲೇಜಿನ ಸಿಬ್ಬಂದಿ ವರ್ಗ ಸೇರಿದಂತೆ ಬೇವೂರಿನ ಗ್ರಾಮ ಪಂಚಾಯತಿ, ಅಂಗನವಾಡಿ ಸಿಬ್ಬಂದಿ, ಕನಕ ಯುವ ಶಕ್ತಿ ಸಂಘಟನೆ ಮುಂತಾದವರು ಪ್ರಾಚಾರ್ಯ ಜಗದೀಶ ಭೈರಮಟ್ಟಿಯವರಿಗೆ ಗೌರವ ಸತ್ಕಾರ ಸಲ್ಲಿಸಿ ಅಭಿನಂದಿಸಿ ಶುಭ ಹಾರೈಸಿದರು. ಆ.ವಿ.ವ ಸಂಘದ ಉಪಾಧ್ಯಕ್ಷರಾದ ರತನ್ ಕುಮಾರ ವೈಜಾಪೂರ, ಸಂಸ್ಥೆಯ ಗೌರಾವಾನ್ವಿತ ಸದಸ್ಯರು, ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಯೋಗೇಶ ಲಮಾಣಿ, ಆದರ್ಶ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಜೆ.ಕೆ ಮಲ್ಲಾಪೂರ, ನಿವೃತ್ತ ಮುಖ್ಯ ಗುರುಗಳಾದ ಜಿ.ಎಸ್ ಹಚ್ಚೊಳ್ಳಿ, ವಿಶ್ರಾಂತ ಪ್ರಾಚಾರ್ಯ ಬಿ.ಬಿ. ಬೇವೂರ. ಹಿರಿಯ ಉಪನ್ಯಾಸಕರಾದ ಎಸ್.ಎಸ್ ಆದಾಪೂರ ಸೇರಿದಂತೆ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

