ದೈವತ್ವವನ್ನು ಮೊಳಗಿದ ಪ್ರವಾದಿ ಸ್ವಾಮಿ ವಿವೇಕಾನಂದರು – ಮಾತಾಜೀ ತ್ಯಾಗಮಯೀ ಅಭಿಪ್ರಾಯ.
ಚಳ್ಳಕೆರೆ ಜ.29

ಸ್ವಾಮಿ ವಿವೇಕಾನಂದರು ದೈವತ್ವವನ್ನು ಮೊಳಗಿದ ಪ್ರವಾದಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಸ್ವಾಮಿ ವಿವೇಕಾನಂದರ 164 ನೇ. ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ದೈವತ್ವದ ಪ್ರವಾದಿ ಸ್ವಾಮಿ ವಿವೇಕಾನಂದ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು. ಸ್ವಾಮಿ ವಿವೇಕಾನಂದರು ಹೇಳಿದ ಸುಪ್ತ ದೈವರೇ ಏಳಿರೇಳಿ,ನಿರ್ಭಯತೆ, ತ್ಯಾಗ-ಜೀವಶಿವ ಸೇವೆಗಳು ನಮ್ಮೆಲ್ಲರ ಬದುಕಿಗೆ ಆದರ್ಶವಾಗಬೇಕು ಎಂದು ಹೇಳಿದರು.

ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಸದ್ಭಕ್ತರಾದ ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ ಅವರು ಮಹಾತ್ಮರ ತಾಯಿಯ ಹೆಸರುಗಳನ್ನು ಹೇಳಿದರೆ

ಯತೀಶ್ ಎಂ ಸಿದ್ದಾಪುರ ಹಾಗೂ ಚೇತನ್ ಕುಮಾರ್ ತಾವು ಕೈಗೊಂಡ “ಜೀವ ಶಿವಸೇವೆ” ಯ ಅನುಭವಗಳನ್ನು ಅತ್ಯಂತ ಸೊಗಸಾಗಿ ಹಂಚಿ ಕೊಂಡರು.


ಜಯಂತೋತ್ಸವ ಕಾರ್ಯಕ್ರಮದಲ್ಲಿ ನಾಗಶಯನಾ ಗೌತಮ್, ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ , ಅಂಬುಜಾ, ವಿದ್ಯಾ, ಜಿ ಯಶೋಧಾ ಪ್ರಕಾಶ್, ನಾಗರತ್ನಮ್ಮ, ಮಲ್ಲಮ್ಮ, ಹೃತಿಕ್, ಚೆನ್ನಕೇಶವ, ವಿಜಯಲಕ್ಷ್ಮೀ, ರಶ್ಮಿ ರಮೇಶ್, ನಳಿನಿ, ಕಲ್ಪನಾ, ಕವಿತಾ, ವಾಸವಿ, ಸಂಜನಾ, ಸ್ವಪ್ನ, ಎಂ. ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಗೋವಿಂದಶೆಟ್ಟಿ, ಗೀತಾ ಪ್ರಕಾಶ್, ಗೀತಾ ಭಕ್ತವತ್ಸಲ, ಸಂಧ್ಯಾ, ಡಾ, ಸಿ.ಟಿ ಬಸವರಾಜಪ್ಪ, ಲಾವಣ್ಯ, ಲತಾ, ಜಗದಂಬಾ, ಸಂತೋಷ್, ಪುಷ್ಪಲತಾ, ಡಾ, ಭೂಮಿಕಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

