ಹುಣಸೆ ನಾಡಿನ ಕೋಟೆ ಕೊತ್ತಲಗಳ ನೆಲೆ ಬೀಡು – ಒನಕೆ ಓಬವ್ವ ಉತ್ಸವ.
ಕೂಡ್ಲಿಗಿ ಜ.30

ಪ್ರಾಗೈತಿಹಾಸಿಕ ಕಾಲದ ನೆಲೆಗಳು, ಜರಿಮಲೆ, ಗುಡೇಕೋಟೆ ಪಾಳೆಯಗಾರರು, ಪುರಾತನ ದೇವಸ್ಥಾನಗಳು, ಬುರುಜು, ಬತೇರಿಗಳು, ರಕ್ಕಸರ ಗಲ್ಲು, ಏಷ್ಯಾದಲ್ಲಿಯೇ 2 ನೇ. ಅತಿ ದೊಡ್ಡ ಕರಡಿ ಧಾಮ ಹಾಗೂ ಗುಡೇಕೋಟೆಯ ಗಟ್ಟಿಗಿತ್ತಿಯ ಉತ್ಸವ ಆಚರಣೆಯ ಹಿರಿಮೆ ಹುಣಸೆ ನಾಡಿನ ಕೋಟೆ ಕೊತ್ತಲಗಳ ನೆಲೆಬೀಡು, ಪಾಳೆಗಾರರ ನಾಡು ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಜ, 31 ರಿಂದ ಫೆ,1 ರ ವರೆಗೆ ಎರಡು ದಿನಗಳ ಕಾಲ 3 ನೇ. ವರ್ಷದ ಗುಡೇಕೋಟೆ ಒನಕೆ ಓಬವ್ವ ಉತ್ಸವಕ್ಕೆ ಸೂರ್ಯ ಹಸ್ತವಾಗುತ್ತಿದ್ದಂತೆ, ಇತ್ತ ಒನಕೆ ಓಬವ್ವ ಬೃಹತ್ ವೇದಿಕೆಯಲ್ಲಿ ಜನೋತ್ಸವಕ್ಕೆ ಅಂತಿಮ ತೆರೆ ಎಳೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾಡಳಿತ ವಿಜಯನಗರ ಮತ್ತು ಕೂಡ್ಲಿಗಿ ತಾಲೂಕು ಆಡಳಿತ ಸಿದ್ದತೆ ಮಾಡಲಾಗಿದೆ. ಜ, 31 ರಂದು ಸಂಜೆ 4 ಗಂಟೆಗೆ ಗುಡೆಕೋಟೆಯ ಶ್ರೀ ಶಿವ ಪಾರ್ವತಿ ದೇವಸ್ಥಾನ ದಿಂದ ವೇದಿಕೆ ವರೆಗೆ ವಿವಿಧ ಕಲಾ ತಂಡಗಳೊಂದಿಗೆ ಶೋಭಾ ಯಾತ್ರೆ, ಸಂಜೆ 6 ಗಂಟೆಗೆ ಕಾರ್ಯಕ್ರಮದಲ್ಲಿ ಬಿ.ಜೆಡ್ ಜಮೀರ್ ಅಹ್ಮದ್ ಖಾನ್, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಮತ್ತು ವಿಜಯನಗರ ಉಸ್ತುವಾರಿ ಸಚಿವರು ಉದ್ಘಾಟಿಸುವವರು, ಘನ ಉಪಸ್ಥಿತಿಯಲ್ಲಿ ಎಚ್.ಕೆ ಪಾಟೀಲ್ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರು, ತಂಗಡಗಿ ಶಿವರಾಜ್ ಸಂಗಪ್ಪ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸುವವರು ಹಾಗೂ ಮುಖ್ಯ ಅತಿಥಿಗಳಾಗಿ ಈ ತುಕಾರಾಮ್ ಸಂಸದರು ಸೇರಿದಂತೆ ಅವಳಿ ಜಿಲ್ಲೆಯ ಶಾಸಕರ, ಸುತ್ತಮುತ್ತಲಿನ ಜಿಲ್ಲೆಯ ಶಾಸಕರು, ಸಂಸದರು, ವಿಶೇಷ ಆಹ್ವಾನಿತರು ಮಾತ ಮಂಜಮ್ಮ ಜೋಗುತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಸ್ಥಳೀಯ ಗ್ರಾ.ಪಂ ಅಧ್ಯಕ್ಷರು, ಸರ್ವ ಸದಸ್ಯರು, ತಾಲೂಕ ಆಡಳಿತ, ತಾಲೂಕಿನ ಮುಖಂಡರು, ಗಣ್ಯ ಮಾನ್ಯರು ಭಾಗವಹಿಸುವರು.

ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ:-
ಸಂಜೆ 3 ಗಂಟೆಗೆ ಗುಡೇಕೋಟೆಯ ಶ್ರೀ ಶಿವ ಪಾರ್ವತಿ ದೇವಸ್ಥಾನ ದಿಂದ ವೇದಿಕೆ ವರೆಗೆ ವಿವಿಧ ಕಲಾ ತಂಡಗಳೊಂದಿಗೆ ಶೋಭಾ ಯಾತ್ರೆ, ಸಂಜೆ 5.45 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ, ರಾತ್ರಿ 6.30 ಗಂಟೆಗೆ 9-30 ರ ವರೆಗೆ ಭರತನಾಟ್ಯ, ಕುಚುಪುಡಿ, ನೃತ್ಯ ರೂಪಕ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಖ್ಯಾತಯ ಸಂಗೀತ ಕಲಾವಿದರಾದ ಮಾಂತ್ರಿಕ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಗುರುಕಿರಣ್, ಹಾಗೂ ಕಾಮಿಡಿ ಕಿಲಾಡಿಗಳ ತಂಡ, ಡಿಕೆಡಿ ನೃತ್ಯ ತಂಡ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 9-30 ರಿಂದ 11-00 ರ ವರೆಗೆ ಕಾರ್ಯಕ್ರಮಗಳು ಜರುಗುತ್ತವೆ ಮತ್ತು ಜ, 31 ರಂದು ವಿವಿಧ ಕಾರ್ಯಕ್ರಮಗಳು ಜರುಗಲಿವೆ, ಜಿಲ್ಲಾ ಮತ್ತು ತಾಲೂಕ ಆಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಒನಕೆ ಓಬವ್ವ ವೇದಿಕೆ:-
ಗುಡೆಕೋಟೆಯ ಒನಕೆ ಓಬವ್ವ ವೇದಿಕೆ ನಿರ್ಮಿಸಲಾಗಿದ್ದು, 2,000 ಜನರಿಗೆ ವಿ.ಐ.ಪಿ ಆಸನ ಮತ್ತು 10 ಸಾವಿರ ಸಾರ್ವಜನಿಕರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಒನಕೆ ಓಬವ್ವನ ತವರು ಮನೆ:-
ಗುಡೇಕೋಟೆ ಪಾಳೆಗಾರರಲ್ಲಿ ಕಹಳೆಯವರಾಗಿ ಸೇವೆ ಸಲ್ಲಿಸುತ್ತಿದ್ದ ಚಿನ್ನಪ್ಪ-ಚಿನ್ನಮ್ಮ ದಂಪತಿಯ ಸುಪುತ್ರಿಯಾಗಿ ಕ್ರಿ.ಶ.1721 ರ ನ. 11 ರಂದು ಬಳ್ಳಾರಿ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆಯಲ್ಲಿ ಜನಿಸಿದಳು. ಓಬವ್ವಳ ಪತಿ ಕಹಳೆ ಮದ್ದಹನುಮಪ್ಪ, ಚಿತ್ರದುರ್ಗದ ರಾಜವೀರ ಮದಕರಿ ನಾಯಕರಲ್ಲಿ ಆಪ್ತ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಮದ್ದಹನುಮಪ್ಪನ ಸಾತ್ವಿಕ ಸತಿಯಾಗಿ ಬಾಳಿ ಬೆಳಗಿದ ಓಬವ್ವ.

ಗುಡೇಕೋಟೆಯನ್ನು ಆಳಿದ ಪಾಳೆಯಗಾರರು:-
ಪ್ರಮುಖರೆಂದರೆ ಗಂಡಳನಾಯಕ, ಬೊಮ್ಮಂತರಾಜ, ಚಿನ್ನಯರಾಜ, ಇಮ್ಮಡಿ ರಾಜಪ್ಪನಾಯಕ, ಜಟಿಂಗರಾಯ, ರಾಮಪ್ಪನಾಯಕ, ಜರ್ಮಲಿ ಪಾಳೆಗಾರರು ಇನ್ನಿತರರು. ಗುಡೇಕೋಟೆ ಪಾಳೆಯಗಾರರೊಂದಿಗೆ ಚಿತ್ರದುರ್ಗದ ಪಾಳೆಯಗಾರರು ಸಂಬಂಧ ಬೆಳೆಸಿದ್ದರು. ಮಹತ್ವದ ಅಂಶವೆಂದರೆ ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಒಬ್ಬಳಾಗಿರುವ ಚಿತ್ರದುರ್ಗದ ಒನಕೆ ಓಬವ್ವನ ತವರೂರು ಗುಡೇಕೋಟೆ.
ಕೋಟ್ ನ್ಯೂಸ್:-1
ಒನಕೆ ಓಬವ್ವಳ ತವರೂರು ಗುಡೇಕೋಟೆ ಜನರ ಭಾವನೆಗೆ ಸ್ಪಂದಿಸಿದ ಸರ್ಕಾರ ಇಂದಿನ 3 ನೇ. ವರ್ಷದ ಉತ್ಸವ ಆಚರಣೆಗೆ ಮುಂದಾಗಿದ್ದು. ಇಂತಹ ಧೀರ ಮಹಿಳೆಯ ಒನಕೆ ಓಬವ್ವನ ಹಿರಿಮೆಯ ನಾಡಿಯ ನಂಟು ನಮ್ಮ ಕೂಡ್ಲಿಗಿ, ಗುಡೇಕೋಟೆ ಗ್ರಾಮಕ್ಕೆ ಸಲ್ಲುತ್ತದೆ. ಕರಡಿ ಧಾಮ, ಪ್ರಾಗೈತಿಹಾಸಿಕ ಕಾಲದ ನೆಲೆಗಳು, ಜರಿಮಲೆ, ಗುಡೆಕೋಟೆ ಪಾಳೆಯಗಾರರು, ಪುರಾತನ ದೇವಸ್ಥಾನಗಳು ಮುಂದಿನ ಪೀಳಿಗೆಗೆ ಪರಿಚಯಿಸಿದಂತಾಗಲಿದೆ. ಈ ಬಾರಿ ಗ್ರಾಮದ ಹೊರ ವಲಯದಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಅರ್ಥ ಪೂರ್ಣವಾಗಿ ಉತ್ಸವ ಆಚರಿಸಲಾಗುವುದು.
ಡಾ.ಎನ್.ಟಿ ಶ್ರೀನಿವಾಸ್ ಶಾಸಕರು, ಕೂಡ್ಲಿಗಿ ಕ್ಷೇತ್ರ.
ಕೋಟ್ ನ್ಯೂಸ್:-2
ಗುಡೇಕೋಟೆ ಒನಕೆ ಓಬವ್ವನ ಉತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಉತ್ಸವದ ವೇದಿಕೆ ಒನಕೆ ಓಬವ್ವ ಹೆಸರನ್ನು ಇಡಲಾಗಿದೆ. ಉತ್ಸವಕ್ಕೆ ಬರುವ ಜನರಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಸಿದ್ಧತೆ ಮಾಡಿದ್ದೇವೆ. 2,000 ವಿ.ಐ.ಪಿ ಆಸನ ಮತ್ತು 10000 ಸಾರ್ವಜನಿಕರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಹಾಗೂ ಕಲಾವಿದರಿಗೆ ಬೇಕಾದ ಸೌಕರ್ಯಗಳು, ಉತ್ಸವದ ಯಶಸ್ವಿಗೆ ಬೇಕಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿ.ಕೆ ನೇತ್ರಾವತಿ ತಹಶೀಲ್ದಾರ್, ಕೂಡ್ಲಿಗಿ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

