ಸವಿತಾ ಮಹರ್ಷಿ ಬ್ರಹ್ಮ ಜ್ಞಾನ ಹೊಂದಿದ್ದರು – ವಿಶ್ವಜಿತ್ ಮಹತ.
ತರೀಕೆರೆ ಜ.31

ಕ್ಷೌರಿಕ ಜನಾಂಗದ ಮೂಲ ಪುರುಷ ಶಿವನ ಕಣ್ಣಿನಿಂದ ಜನಿಸಿದವರು ಸವಿತಾ ಮಹರ್ಷಿಗಳು ಎಂದು ನಾಡ ಹಬ್ಬಗಳ ಸಮಿತಿ ಅಧ್ಯಕ್ಷರು ತಹಶೀಲ್ದಾರ್ ವಿಶ್ವಜಿತ್ ಮೆಹತಾ ಹೇಳಿದರು.
ಅವರು ಗುರುವಾರ ಪಟ್ಟಣದ ಆಡಳಿತ ಸೌಧ ದಲ್ಲಿ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶಿವನ ನಯನದಿಂದ ಜನಿಸಿದ್ದರಿಂದ ಈ ಸಮಾಜದ ಜನಾಂಗವನ್ನು ನಾಯಿಂದ ಎಂದು ಸಹ ಕರೆಯುತ್ತಾರೆ ಶಿವನ ಕೃಪೆಯಿಂದ ಸಂಗೀತ ವಾದ್ಯಗಳನ್ನು ನುಡಿಸಿದರೂ ಈ ಸಮಾಜ ಆರ್ಯವೇಧವು ಈ ಜನಾಂಗದ ಉಪ ಕಸಬಾಗಿದೆ ಎಂದು ಹೇಳಿದರು. ವಾದ್ಯ ನುಡಿಸುವುದು ಕ್ಷೌರಿಕ ಕಾಯಕ ಈ ಜನಾಂಗದ ಉಪ ಕಸಬಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಜ್ಜಂಪುರ ತಹಶೀಲ್ದಾರ್ ವಿನಾಯಕ ಸಾಗರ್ ರವರು ಉಪಸ್ಥಿತರಿದ್ದು ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸವಿತಾ ಮಹರ್ಷಿಗಳು ಅಪಾರಜ್ಞಾನ ಬಂಡಾರ ಹೊಂದಿದ್ದು ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದವನ್ನು ರಚಿಸಿರುತ್ತಾರೆ ಎಂದು ಹೇಳಿದರು. ಶಿರಸ್ತೆದಾರ್ ನಟರಾಜರವರು ಸ್ವಾಗತಿಸಿ ಮಂಜುನಾಥ್ ನಿರೂಪಿಸಿ ಹೊಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
