ವಾರ್ಷಿಕ ಸ್ನೇಹ ಸಮ್ಮೇಳನ ಪಿ.ಯು.ಸಿ ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗೆ ಶುಭ ಕೋರುವ – ಹಾಗೂ ನಿವೃತ್ತಿ ಹೊಂದಿರುವ ಉಪನ್ಯಾಸಕರ ಸನ್ಮಾನ ಸಮಾರಂಭ ಕಾರ್ಯಕ್ರಮ.

ಕಲಕೇರಿ ಫೆ.01

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜ್ ಕಲಕೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಕಲ್ಫಾಣ ಮಂಟಪದಲ್ಲಿ ಶನಿವಾರ ದಿನಾಂಕ 31.01.2026 ರಂದು ವಾರ್ಷಿಕ ಸ್ನೇಹ ಸಮ್ಮೇಳನ ಪಿ.ಯು.ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶುಭ ಕೋರುವ ಹಾಗೂ ನಿವೃತ್ತಿ ಹೊಂದಿರುವ ಉಪನ್ಯಾಸಕರ ಸನ್ಮಾನ ಸಮಾರಂಭದಲ್ಲಿ ವೇದಿಕೆ ಮೇಲೆ ಇದ್ದಂತ ಪರಮ ಪೂಜ್ಯರು ಎಲ್ಲಾ ಗಣ್ಯ ಮಾನ್ಯರು ವ್ಯಕ್ತಿಗಳಿಂದ ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ ಎಂದು ಜ್ಯೋತಿ ಬೆಳಗಿಸಿದರು.

ಈ ಸಮಾರಂಭದಲ್ಲಿ ಸಾನಿಧ್ಯ ಪರಮ ಪೂಜ್ಯ ಸಿದ್ದರಾಮ ಶಿವಾಚಾರ್ಯರು ಹಿರೇಮಠ ಈ ಪೂಜ್ಯರು ಆಶೀರ್ವಚನ ರೂಪದಲ್ಲಿ ನಿವೃತ್ತಿ ಹೊಂದಿದವರಿಗೆ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಎಲ್ಲಾ ಪಿಯುಸಿ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು.

ಅಧ್ಯಕ್ಷರು ಬಿ.ಜಿ ಚನ್ನಗುಂಡ ಈ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಗೌರವ ಅಧ್ಯಕ್ಷರು.ಎಮ್.ಎಸ್ ಜೋಗೂರ್ ಈ ಸಂಸ್ಥೆಯ ಕಾರ್ಯದರ್ಶಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ನುಡಿ ಮುತ್ತುಗಳನ್ನು ಪ್ರತಿಯೊಂದು ವಿದ್ಯಾರ್ಥಿಯಲ್ಲಿ ನಾನು ಕಲಿಯಬೇಕು ಕಲಿತು ನಮ್ಮ ತಂದೆಯ ತಾಯಿಯ ಹೆಸರನ್ನು ಉಳಿಸಬೇಕು ಎಂದು ಚಲೋ ತೊಟ್ಟು ನಿಂದರಬೇಕು ನಮ್ಮ ತಂದೆ ತಾಯಿಗೆ ಗೌರವ ಸಿಗುತ್ತೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಎಸ್.ಬಿ ಪಾಟೀಲ್ ಈ ಸಂಸ್ಥೆಯ ಅಧ್ಯಕ್ಷರು. ವ್ಹಿ.ಆರ್ ಝಳಕಿ ಸಂಸ್ಥೆಯ ನಿರ್ದೇಶಕರು. ಅರವಿಂದ್ ಮನಗೂಳಿ ಈ ಸಂದರ್ಭದಲ್ಲಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು.

ಆರ್.ಸಿ ಹಿರೇಮಠ್. ಜಹಾಂಗೀರಬಾಷಾ ಸಿರಸಗಿ ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಇವರು ಕೂಡ ಈ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು.

ಕುಮಾರ್ ದೇಸಾಯಿ. ಜಿ.ಜಿ ಮೇಡಿದಾರ. ಹಾಗೂ ಎಸ್.ಎಸ್ ದೊರ್ಗಿ. ಆರ್.ಎಂ ಗೊಣ್ ಶೆಟ್ಟಿ. ಬಿ.ಎಂ ಕುಂಬಾರ್. ಯು.ಎನ್ ಮನಗೂಂಡ. ಜಿ.ಎಮ್ ಹದರಿ. ಆಯ್.ಎಮ್ ಝಳಕಿ. ಇನ್ನೂ ಅನೇಕ ಗಣ್ಯ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ನಿವೃತ್ತಿ ಹೊಂದಿರುವ ಉಪನ್ಯಾಸಕರಿಗೆ ಜಿ.ಜಿ. ಮೇಡಿದಾರ ಹಾಗೂ ಎಸ್.ಎಸ್ ದುರ್ಗಿ ಇವರಿಗೆ ಪೂಜ್ಯರಿಂದ ಗೌರವ ಸನ್ಮಾನ ನೆರವೇರಿತು.ಕಾಲೇಜಿನ ಗಣ್ಯರಿಂದ ಎಲ್ಲಾ ವಿದ್ಯಾರ್ಥಿಗಳಿಂದ ಅದ್ದೂರಿ ಯಾಗಿ ಈ ಸಮಾರಂಭ ಜರುಗಿತು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್:ಮೈಬೂಬಬಾಶಾ. ಮನಗೂಳಿ. ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button