🪔ನಿಧನ ವಾರ್ತೆ – ಜೆ. ಜಗದೀಶ್ ನಿಧನ.🪔

ಕೂಡ್ಲಿಗಿ ಫೆ.01

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ 14 ನೇ. ವಾರ್ಡಿನ ಡಾ, ಬಿ.ಆರ್ ಅಂಬೇಡ್ಕರ್ ನಿವಾಸಿಗಳಾದ ಜಗದೀಶ್ (41) ಜ.31 ರ ಶನಿವಾರ ರಾತ್ರಿ 10:45 ಗಂಟೆಗೆ ಬಳ್ಳಾರಿಯ ಸರ್ಕಾರಿ ಆಸ್ಪತ್ರೆ ವೀಮ್ಸ್ ನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರಿಗೆ ಒಬ್ಬ ಗಂಡು ಮಗನಿದ್ದು ಜೆ. ಜಗದೀಶ್ ಅವರು ಬಹು ದಿನಗಳಿಂದ ಹೊಟ್ಟೆ ನೋವಿನಿಂದ ಅನಾರೋಗ್ಯದಿಂದ ಬಳಲುತಿದ್ದರು. ಎರಡು ದಿನಗಳ ಹಿಂದೆ ಅಷ್ಟೇ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ನಿನ್ನೆ ದಿನ ತಡ ರಾತ್ರಿ ಸಮಯದಲ್ಲಿ ಮೃತ ಹೊಂದಿರುತ್ತಾನೆ, ಈತನ ತಾಯಿ ಹಾಗೂ ಸಹೋದರ ಸಹೋದರಿಯರು ಹಾಗೂ ಕುಟುಂಬವನ್ನು ಅಪಾರ ಬಂಧು ಬಳಗವನ್ನು ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ* – ಫೆಬ್ರವರಿ 1 ರ ಭಾನುವಾರ ರಂದು ಬೆಳ್ಳಿಗೆ 12:30 ಕ್ಕೆ ಕೂಡ್ಲಿಗಿ ಪಟ್ಟಣದ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ* – ಕೂಡ್ಲಿಗಿ ತಾಲೂಕಿನ ದಲಿತ ಸಮುದಾಯದವರು ಸ್ಥಳೀಯ ಡಾ, ಬಿ.ಆರ್ ಅಂಬೇಡ್ಕರ್ ನಗರದ ಮುಖಂಡರು ಸಂಬಂಧಿಕರು ಹಾಗೂ ವಿವಿಧ ಸಮುದಾಯದವರು ಸಮಸ್ತ ದಲಿತ ಸಮುದಾಯದವರು ಸೇರಿದಂತೆ, ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ, ರೈತರು ಕಾರ್ಮಿಕರು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿಧ ಜನ ಪ್ರತಿನಿಧಿಗಳು ಹಾಗೂ ಹೋರಾಟಗಾರರು ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರೀಕರು ಕೂಡ್ಲಿಗಿ ಪಟ್ಟಣದ ನೆರೆ ಹೊರೆ ಗ್ರಾಮಸ್ಥರು. ಮೃತ ಜೆ. ಜಗದೀಶ್ ರವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ. ಸಾಲುಮನಿ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button