ಗುಡೇಕೋಟೆ ಒನಕೆ ಓಬವ್ವನ ಉತ್ಸವಕ್ಕೆ – ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಚಾಲನೆ.
ಕೂಡ್ಲಿಗಿ ಫೆ.01

ಜಿಲ್ಲಾಡಳಿತ ವಿಜಯನಗರ ಹಾಗೂ ತಾಲೂಕು ಆಡಳಿತ ಕೂಡ್ಲಿಗಿ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಗುಡೆಕೋಟೆ ಒನಕೆ ಓಬವ್ವ ವೇದಿಕೆಯಲ್ಲಿ ಸರ್ಕಾರದಿಂದ 3 ನೇ. ವರ್ಷದ ಗುಡೆಕೋಟೆ ವೀರ ವನತೆ ಓಬವ್ವಳ ಅದ್ದೂರಿ ಉತ್ಸವವನ್ನು ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಹಾಗೂ ಹಿರಿಯ ಗಣ್ಯ ಮಾನ್ಯರಿಂದ ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿದರು.
ಈ ವೇಳೆ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಅವರ ಮಾತನಾಡಿ ಏಷ್ಯಾದಲ್ಲಿ 2 ನೇ. ಅತಿ ದೊಡ್ಡ ಕರಡಿ ದಾಮ, ಪ್ರಾಗೈತಿಹಾಸಿಕ ಕಾಲದ ನೆಲೆಗಳು, ಜರಿಮಲೆ ನಾಯಕರು, ಗುಡೇಕೋಟೆ ಪಾಳೆಯಗಾರರು, ಪುರಾತನ ದೇವಸ್ಥಾನಗಳು, ಬುರುಜು, ಬತೇರಿಗಳು, ಮ್ಯಾಸಬೇಡರ ನಾಯಕರ ಸಾಂಸ್ಕೃತಿ ಸಾರುವ ಸೇರಿದಂತೆ ಇನ್ನೂಳಿದ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಗೊಳಿಸಲು ವಿಶೇಷ ಅನುದಾನ ಮುಂದಿನ ದಿನಮಾನಗಳಲ್ಲಿ ತರಲಾಗುವುದು, ಗುಡೆಕೋಟೆ ಒನಕೆ ಓಬವ್ವನ ತವರೂರಲ್ಲಿ ಕೋಟೆ ಅಭಿವೃದ್ಧಿಗಾಗಿ ಪಣ ತೋಡುವೆ. ಕುಡಿಯುವ ನೀರು ಇತರೆ ಶಿಕ್ಷಣಕ್ಕೆ ಎಲ್ಲ ರಸ್ತೆಗಳನ್ನು ಅಭಿವೃದ್ದಿ ಗೊಳಿಸಲು ನಾನು ಬದ್ಧನೀದ್ದೇನೆ.
ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಸಮಸ್ಯೆಗಳನ್ನು ಮನವರಿಕೆ ಮಾಡ ಬೇಕಾದ ಅನುದಾನ ಮಂಜೂರು ಮಾಡಿಸಿದ್ದು, ಜನರಿಗೆ ಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಮೂಲಕ ಕ್ಷೇತ್ರವನ್ನು ಮಾದರಿ ಗ್ರಾಮ ಮಾಡುವೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿ.ಕೆ ನೇತ್ರಾವತಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ವೇಳೆ ಬಸವಲಿಂಗ ಮಹಾಸ್ವಾಮಿಗಳು ಸಿದ್ದಯ್ಯನಕೋಟೆ, ಮಾತನಾಡಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ.
ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದ ಯುವ ಸಮೂಹದ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಅನೇಕ ಜಾನಪದ ಕಲೆಗಳು ಯುವ ಪೀಳಿಗೆಯಿಂದ ಪೀಳಿಗೆಗೆ ಕಲೆ ಕರಗತವಾಗಿ ಹರಿದು ಬರುತ್ತಿದ್ದವು. ನಮ್ಮ ಪೂರ್ವಜ ರಿಂದ ಬಂದ ಜಾನಪದ ಕಲೆಗಳನ್ನು ಮುಂದಿನ ಪೀಳಿಗೆ ಪರಿಚಯಿಸುವ ಕೆಲಸವನ್ನು ಇಂದಿನ ಯುವ ಜನಾಂಗ ಮಾಡಬೇಕು ಎಂದರು.

ಗುಡೇಕೋಟೆ ಉತ್ಸವದ ಹಿನ್ನೆಲೆಯಲ್ಲಿ ಗ್ರಾಮ ಪರಿಸರದಲ್ಲಿರುವ ಬೆಟ್ಟಗುಡ್ಡಗಳ ಹಾಗೂ ಐತಿಹಾಸಿಕ ಸ್ಮಾರಕಗಳ ನುಡುವೆ ಇಳಿ ಸಂಜೆ ಸೂರ್ಯ ಮರೆ ಯಾಗುತ್ತಿದ್ದಂತೆ, ಇತ್ತ ಗುಡೇಕೋಟೆಯ ಬೀದಿಗಳಲ್ಲಿ ಜಾನಪದ ಕಲಾಲೋಕ ಮೇಳೈಸಿತು. ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ಕಲಾವಿದರು ಸಾಂಸ್ಕೃತಿಕ ಜಾನಪದ ಲೋಕವನ್ನ ಸೃಷ್ಟಿಸಿದರು. ಶಿವಪಾರ್ವತಿ ದೇವಸ್ಥಾನದಿಂದ ಆರಂಭವಾದ ಜಾನಪದ ವಾಹಿನಿಯ (ಶೋಭಾಯಾತ್ರೆ) ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಕಲಾವಿದರು ಹೆಜ್ಜೆ ಹಾಕಿದರು.
ಈ ಕಾರ್ಯಕ್ರಮದಲ್ಲಿ ಪ್ರಸಂತ ಸಾಗರ ಶಿವಾಚಾರ್ಯ ಸ್ವಾಮಿಗಳು ಕೂಡ್ಲಿಗಿ, ಮ.ನಿ.ಪ್ರ ದಾ.ಮ.ಐಮಡಿ ಶರಣಾರ್ಯರು, ಒನಕೆ ಓಬವ್ವ ವಂಶಸ್ಥರು ರಾಜಣ್ಣ ಕುದುರೆಡವು, ಕೃಷ್ಣವರ್ಮ ರಾಜು ಜರಿಮಲೆ, ಜರ್ಮಲಿ ಪಾಳೆಗಾರರ ವಂಶಸ್ಥರು ಸಿದ್ದಪ್ಪ ನಾಯಕ, ಶಿವರಾಜ ವರ್ಮ, ಕವಿತಾ ಎಸ್ ಮನ್ನಿಕೇರಿ ಜಿಲ್ಲಾ ಅಧಿಕಾರಿ ವಿಜಯನಗರ, ಎಸ್.ಪಿ ಎಸ್.ಜಾಹ್ನವಿ, ಜಿಲ್ಲಾ ಪಂಚಾಯಿತಿ ಸಿ.ಇ.ಓ ಮೊಹಮ್ಮದ್ ಅಲಿ ಅಕ್ರಂ ಪಾಷಾ, ಉಪ ವಿಭಾಗಾಧಿಕಾರಿ ಪಿ ವಿವೇಕಾನಂದ, ಇ.ಓ ನರಸಪ್ಪ, ಕಾಂಗ್ರೆಸ್ ತಾಲೂಕು ಅಧ್ಯಕ್ಷರು ಗುರುಸಿದ್ದನ ಗೌಡ್ರು, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಶೇಖ್ ಮೊಹಮ್ಮದ್ ಜಿಲಾನ್, ಕಾಂಗ್ರೆಸ್ ಮುಖಂಡ ಎನ್.ಟಿ ತಮ್ಮಣ್ಣ, ರಾಘವೇಂದ್ರ ರಾವ್, ಎಪಿಎಂಸಿ ಅಧ್ಯಕ್ಷ ಬೋಸಯ್ಯ ಕುರಿಹಟ್ಟಿ,ದಿನ್ನೇ ಮಲ್ಲಿಕಾರ್ಜುನ, ಶಶಿಧರ ಸ್ವಾಮಿ ಕಾನಾ ಮಡುಗು, ರಾಜಣ್ಣ ಗುಡೆ ಕೋಟೆ,ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣ, ಮಲ್ಲಿಕಾರ್ಜುನ್, ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿಯ ಸರ್ವ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ದಿವ್ಯ ಆಲೂರು ಅವರು ನಿರೂಪಣೆಯನ್ನು ಅಚ್ಚಕಟ್ಟಾಗಿ ನಿರ್ವಹಿಸಿದರು. ಓಬವ್ವನ ಉತ್ಸವಕ್ಕೆ – ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಚಾಲನೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

