ಗುಡೇಕೋಟೆ ಒನಕೆ ಓಬವ್ವಳ ಉತ್ಸವದಲ್ಲಿ – ರಂಜಿಸಿದ ಜಾನಪದ ಕಲಾ ಯಾತ್ರೆ.
ಕೂಡ್ಲಿಗಿ ಫೆ.01

3 ನೇ. ವರ್ಷದ ಗುಡೇಕೋಟೆಯ ಗಟ್ಟಿಗಿತ್ತಿ ಒನಕೆ ಓಬವ್ವಳ ಉತ್ಸವದಲ್ಲಿ ವರ್ಣರಂಜಿತ ಜಾನಪದ ವಾಹಿನಿಯ ಆಕರ್ಷಕ ಕಲಾಯಾತ್ರೆಗೆ ಗುಡೆಕೋಟೆಯ ಶ್ರೀ ಶಿವ ಪಾರ್ವತಿ ದೇವಸ್ಥಾನದಿಂದ ವೇದಿಕೆ ವರೆಗೆ ವಿವಿಧ ಕಲಾತಂಡಗಳೊಂದಿಗೆ ಶನಿವಾರ ಸಂಜೆ ಕೂಡ್ಲಿಗಿ ಶಾಸಕ ಡಾ, ಶ್ರೀನಿವಾಸ್ ಎನ್.ಟಿ ಅವರು ಒನಕೆ ಓಬವ್ವನ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ಯಾತ್ರೆಯಲ್ಲಿ ಸ್ಥಳೀಯ ನೂರಾರು ಮಹಿಳೆಯರಿಂದ ಕುಂಭ, ಕಳಸ, ಶೃಂಗಾರ ಗೊಂಡ ನೂರಾರು ಎತ್ತಿನ ಗಾಡಿಗಳು, ನಂದಿ ಧ್ವಜ, ಮೆಹಿಳ ಉರುಮೆವಾದ್ಯ, ಹಲಗೆವಾದನ, ಚೌಡಿಕೆ, ಕಹಳೆ ವಾದನ, ಸಿಂದೋಳ ಕುಣಿತ, ಸುಡುಗಾಡು ಸಿದ್ಧರ ಕೈಚಳಕ, ಡೊಳ್ಳು ಕುಣಿತ, ಉಮ್ಮತಾಟ, ಗೊರವರ ಕುಣಿತ, ತಾಷ ರಾಂ ಡೊಳ್ಳು, ಮುಖವಾಡ, ಕಳೆ, ಕೀಲು ಕುದುರೆ, ಮಲಿಕಿನ ಕೋಲಾಟ, ನಂದಿ ಧ್ವಜ, ಗೊಂಬೆ ಕುಣಿತ, ಮಹಿಳಾ ಡೊಳ್ಳು ಕುಣಿತ, ಮರಗಾಲು ಕುಣಿತ, ಪುರುಷ ವೀರ ಗಾಸೆ, ತಮಟೆ ಸೇರಿದಂತೆ 58 ಕ್ಕೂ ಹೆಚ್ಚು ಕಲಾ ತಂಡಗಳು ಕಲಾ ಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಯಾತ್ರೆಯಲ್ಲಿ ಅನಾವರಣ ಗೊಳಿಸಿದವು. ಯಾತ್ರೆಯನ್ನು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದರು. ಮುಖ್ಯ ರಸ್ತೆಯಲ್ಲಿ ಯಾತ್ರೆ ಗಾಂಭೀರ್ಯ ದಿಂದ ಸಾಗಿದಿದ್ದು ಕಂಡು ಬಂದಿತು.

ಈ ವೇಳೆ ಮುಖಂಡರು, ತಾಲೂಕು ಆಡಳಿತ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು, ಸರ್ವ ಸದಸ್ಯರು, ಸಿಬ್ಬಂದಿ ವಿವಿಧ ಜಿಲ್ಲೆಗಳಿಂದ ಬಂದ ಕಲಿ ತಂಡಗಳು ಭಾಗಿ ಯಾಗಿದ್ದರು.
ಕೂಡ್ಲಿಗಿ ಪಟ್ಟಣದ ನಾಗರೀಕರು ಸೇರಿದಂತೆ, ಗುಡೇಕೋಟೆ ಗ್ರಾಮಸ್ಥರು. ನೆರೆ ಹೊರೆಯ ಗ್ರಾಮಗಳ ಗ್ರಾಮಸ್ಥರು, ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಸಾರ್ವಜನಿಕರು. ಗಣ್ಯರು, ವಿವಿಧ ವಾದ್ಯ ವೃಂಧಗಳು, ವಿವಿಧ ಕಲಾವಿದರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಒನಕೆ ಓಬವ್ವ ಉತ್ಸವಕ್ಕೆ ಸಾಕ್ಷಿಯಾದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

