ಮಾನವನಲ್ಲಿರುವ ಪರಿ ಪೂರ್ಣತೆಯನ್ನು ಜಾಗೃತ ಗೊಳಿಸುವುದೇ ನಿಜವಾದ ಶಿಕ್ಷಣ – ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ ಫೆ.03

ನಿಜವಾದ ಶಿಕ್ಷಣವೆಂದರೆ ಅದು ಮಾನವನಲ್ಲಿರುವ ಪರಿ ಪೂರ್ಣತೆಯನ್ನು ಜಾಗೃತ ಗೊಳಿಸ ಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ನರಹರಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದ ಘಟನೆಗಳ” ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಸ್ವಾಮಿ ವಿವೇಕಾನಂದರ ಭಾವ ಚಿತ್ರವು ಶಕ್ತಿ, ಆನಂದ, ಆತ್ಮ ವಿಶ್ವಾಸವನ್ನು ಸೂಚಿಸುತ್ತದೆ.

ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದಲ್ಲಿ ಕಂಡು ಬರುವ ದಾನ-ಧ್ಯಾನಸಿದ್ಧಿ ಮತ್ತು ಏಕಾಗ್ರತೆಗಳು ಇಂದಿನ ಮಕ್ಕಳಿಗೆ ಪಾಠವಾಗಬೇಕು.

ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ, ಯಶಸ್ಸಿನ ರಹಸ್ಯವಿರುವುದು ಆತ್ಮ ವಿಶ್ವಾಸದಲ್ಲಿ ಎಂದು ಮಕ್ಕಳಿಂದ ಹೇಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ಅವರು ಪ್ರಾರ್ಥನೆ ,ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ ಮತ್ತು ಸ್ವಾಮಿ ವಿವೇಕಾನಂದರ ಶಕ್ತಿ ಮಂತ್ರವನ್ನು ಹೇಳಿ ಕೊಟ್ಟರು.
ತರಗತಿಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಜೆ.ಟಿ ಶಾಂತಕುಮಾರಿ, ಸಹ ಶಿಕ್ಷಕರಾದ ಪಿ.ಎಸ್ ತಿಪ್ಪೇಸ್ವಾಮಿ, ದೀಪಾ ರಾಘವೇಂದ್ರ, ಸುದೀಪ್, ವಿದ್ಯಾರ್ಥಿಗಳಾದ ಮನೋ ಉಲ್ಲಾಸ್, ನವೀನ್, ನಿಖಿಲ್ ಗೌಡ, ಅಮೃತಾ ವರ್ಷಿಣಿ,ಕಾವೇರಿ, ಯಶಿಕಾ, ಅಂಜಲಿ, ತನು, ಕೀರ್ತನಾ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

