ಅಂತರಗಟ್ಟೆ ಶ್ರೀ ದುರ್ಗಾಂಬಾ ದೇವಿಯ – ಜಾತ್ರಾ ಮಹೋತ್ಸವ.
ತರೀಕೆರೆ ಫೆ.03

ಕರ್ನಾಟಕದ ಚಿತ್ರದುರ್ಗ ಚಿಕ್ಕಮಂಗಳೂರು ಶಿವಮೊಗ್ಗ ಜಿಲ್ಲೆಗಳಿಂದ ಪ್ರಸಿದ್ಧ ಪಡೆದಿದ್ದ ಕಡೂರು ತಾಲೂಕಿನ ಅಂತರಗಟ್ಟೆ ಜಾತ್ರೆ ಎಂದು ಪ್ರಸಿದ್ಧ ಪಡೆದ ದುರ್ಗಂಬ ಜಾತ್ರೆಯ ಕಡೆ ದಿನವಾದ ಇಂದು ಲಕ್ಷಾಂತರ ಭಕ್ತಾದಿಗಳು ದೇವಿಯ ದರ್ಶನ ಪಡೆದು ಭಕ್ತಿ ನಮನ ಸಲ್ಲಿಸಿದರು. ಸಿದ್ದಪ್ಪ ಅವರ ಕುಟುಂಬದವರು ಕುರಿ ಹರಕೆ ತೀರಿಸಿದರು.
ಇಂದು ಲಕ್ಷಾಂತರ ಕುರಿಗಳ ಹರಕೆ ಸಲ್ಲಿಕೆಯಾಗಿದೆ, ಮತ್ತು ದುರ್ಗಂಬ ದೇವಿಯ ರಥೋತ್ಸವ ವಿಜೃಂಭಣೆ ಯಿಂದ ಆಚರಿಸಲಾಗಿದೆ.
ಆದರೆ ದುರದೃಷ್ಟಕರ ಸಂಗತಿ ಎಂದರೆ ಅಜ್ಜಂಪುರ ಪೊಲೀಸು ನಿರೀಕ್ಷಕರಾದ ವೀರೇಂದ್ರ ರವರ ಮೇಲೆ ಜಾತ್ರೆಯ ಗಾಡಿಗಳು ಅರಿದು ತೀವ್ರ ಗಾಯಕ್ಕೆ ಒಳಗಾಗಿದ್ದು ಶಿವಮೊಗ್ಗದ ಗಗನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

