ಜೆ.ಕೆ ಲಾಡ್ಜ್ ಗೆ ಪಕ್ಕದಲ್ಲಿರುವ ಹಣಮಂತ ಶೆಟ್ಟಿ ಟೀ ಪಾಯಿಂಟ್ ಹತ್ತಿರ – ಗಟಾರ್ ಬ್ಲಾಕೇಜ್ ಗೆ ಭರವಸೆ ನೀಡಿದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶಿವಕುಮಾರ್ ಕಟ್ಟಿಮನಿ.

ಅಮೀನಗಡ ಫೆ.04

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ವ್ಯಾಪ್ತಿಯಲ್ಲಿ ಬರುವ 15 ನೇ. ವಾರ್ಡಿಗೆ ಸಂಬಂಧಿಸಿದಂತೆ ಜೆ.ಕೆ ಲಾಡ್ಜ್ ಗೆ ಪಕ್ಕದಲ್ಲಿರುವ ಹಣಮಂತ ಶೆಟ್ಟಿ ಟೀ ಪಾಯಿಂಟ್ ಹತ್ತಿರದಲ್ಲೇ ಸಾಕಷ್ಟು ಜನಪ್ರಿಯತೆ ಪಡೆದು ಕೊಂಡಿದ್ದು ಇಲ್ಲಿ ನೂರಾರು ಜನ ಟೀ ಪಾಯಿಂಟ್ ಗೆ ಚಾಹ ಕುಡಿಯಲಿಕ್ಕೆ ಬಂದು ಸಮಯ ಕಳೆದು ಹೋಗುವವರು ಸಾಕಷ್ಟು ಬೇಡಿಕೆ ಇದೆ.

ಕರೆಯ ಮೇರೆಗೆ ಸ್ಪಂದಿಸಿದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶಿವಕುಮಾರ್ ಕಟ್ಟಿಮನಿಯವರು ಅತ್ಯಂತ ಕ್ರೀಯಾಶೀಲರು ಸ್ಥಾನೀಕವಾಗಿ ಭೇಟಿ ನೀಡಿದ ಅವರು ಜನ ಒಡನಾಟ ಇದೆ ಸಾರ್ವಜನಿಕ ಹಿತದೃಷ್ಟಿಯಿಂದ ಆದಷ್ಟು ಬೇಗ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿ ಕೊಡುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ 15 ನೇ. ಸದಸ್ಯರಾದ ತುಕಾರಾಮ ಲಮಾಣಿಯವರು ಉಪಸ್ಥಿತರಿದ್ದರು ಹಾಗೂ ರಮೇಶ್ ರಾಮಚಂದ್ರ ರಾಠೋಡ. ನಾಗರಾಜ್ ತಳೇವಾಡ ಪೌರ ಕಾರ್ಮಿಕರು ಇದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button