ಸಾರ್ಥಕ ಬದುಕಿಗೆ ಅಧ್ಯಾತ್ಮ ಅವಶ್ಯಕ – ಶ್ರೀಭವತಾರಿಣಿ ಆಶ್ರಮದ ಮಾತಾಜೀ ವಿವೇಕಮಯೀ ಅಭಿಮತ.
ಚಳ್ಳಕೆರೆ ಫೆ.05

ಮಾನವ ಜನ್ಮದ ಸಾರ್ಥಕ ಬದುಕಿಗೆ ಅಧ್ಯಾತ್ಮ ಅತ್ಯಂತ ಅವಶ್ಯಕ ಎಂದು ಬೆಂಗಳೂರಿನ ಶ್ರೀಭವತಾರಿಣಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ವಿವೇಕಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಸಾರ್ಥಕ ಬದುಕಿಗೆ ಅಧ್ಯಾತ್ಮ” ಎಂಬ ವಿಷಯವಾಗಿ ಆಶೀರ್ವಚನ ನೀಡಿದರು.

“ಜಪ ಸಾಧನೆಯ ಬಗ್ಗೆ ಶ್ರೀಮಾತೆಯವರ ಮಾರ್ಗದರ್ಶನ” ಎಂಬ ವಿಷಯವಾಗಿ ಪ್ರವಚನ ನೀಡಿದ ದಾವಣಗೆರೆಯ ಸಾಧನಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಯೋಗಾನಂದಮಯೀ ಅವರು ಸಮರ್ಥ ಗುರು ಮುಖೇನ ಪಡೆದ ಬೀಜ ರೂಪದ ಮಂತ್ರದ ನಿರಂತರ ಜಪದಿಂದ ಭಗವಂತನ ಒಲುಮೆ, ಅವನ ದರ್ಶನ ಸಾಧ್ಯವಾಗುತ್ತದೆ. ಜಪವನ್ನು ನಾವು ಮಾಡುವ ಕೆಲಸಗಳ ಮಧ್ಯೆಯೇ ಮಾಡಬಹುದು. ಸತತ ನಾಮ ಜಪದಿಂದ ಆನಂದ, ಮನಃ ಶಾಂತಿ ಲಭ್ಯವಾಗುತ್ತದೆ ಎಂದರು.

ಸತ್ಸಂಗದ ಆರಂಭದಲ್ಲಿ ಮೈಸೂರಿನ ಶ್ರೀಶಾರದಾ ವಿಶ್ವಭಾವೈಕ್ಯ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅಮೋಘಮಯೀ ಅವರಿಂದ ವಿಶೇಷ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ, ಅನ್ನಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗ ಸಭೆಯ ದಿವ್ಯ ಸಾನಿಧ್ಯವನ್ನು ಮಾತಾಜೀ ವಂದನಾಮಯೀ, ಚೆನ್ನಪಟ್ಟಣ-ಕನಕಪುರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಜ್ಯೋತ್ಸ್ನಾಮಯೀ, ಮನಗೂಳಿಯ ಮಾತಾಜೀ ಮೋಕ್ಷಪ್ರಾಣಾ, ಮಾತಾಜೀ ತ್ಯಾಗಮಯೀ, ಬ್ರಹ್ಮಚಾರಣಿ ಲಕ್ಷ್ಮೀ ವಹಿಸಿದ್ದರು.
ಕಾರ್ಯಕ್ರಮದ ಸ್ವಾಗತ ಪರಿಚಯವನ್ನು ಸದ್ಭಕ್ತರಾದ ಶ್ರೀಮತಿ ಡಿ.ಕಾವೇರಿ ಸುರೇಶ್ ಮಾಡಿದರು.
ಸತ್ಸಂಗದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ಕವಿತಾ ಗುರುಮೂರ್ತಿ, ಜಿ.ಯಶೋಧಾ ಪ್ರಕಾಶ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಎಂ ಗೀತಾ ನಾಗರಾಜ್, ಹೂವಿನ ಲಕ್ಷ್ಮೀದೇವಿ, ಭಜಂತ್ರಿ, ಸುಮಂಗಳಮ್ಮ, ನಾಗಶಯನ ಗೌತಮ್, ಸುಮನಾ, ಶೋಭಾ ರಮೇಶ್, ಯತೀಶ್ ಎಂ ಸಿದ್ದಾಪುರ, ಸಂತೋಷ್, ಡಾ, ಭೂಮಿಕಾ, ಚೇತನ್, ಮಾನ್ಯ, ದೀಪಾ, ಸುದೀಪ್, ಚೆನ್ನಕೇಶವ, ಲೋಕಮಾನ್ಯ, ಆರ್.ಗೋವಿಂದಶೆಟ್ಟಿ, ಅಂಬುಜಾ, ಕವಿತಾ, ರಶ್ಮಿ, ಯಶಸ್ವಿ, ಸಂಗೀತ, ಸೌಮ್ಯ, ಸುಧಾಮಣಿ, ಲತಾ, ಕಲ್ಪನಾ, ಪಂಕಜಾ, ಪ್ರೇಮಲೀಲಾ, ಸಂಧ್ಯಾ, ಮಂಜುಳಾ, ಲಕ್ಷ್ಮೀ, ಪುಷ್ಪಲತಾ, ದ್ರಾಕ್ಷಾಯಣಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

