ರಾಜ್ಯದಾದ್ಯಂತ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ – ಪ್ರತಿಭಟನೆ ಮೆರವಣಿಗೆ ಧರಣಿ.
ಬೆಂಗಳೂರು ಫೆ.07

ರಾಜ್ಯದಾದ್ಯಂತ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ಮೆರವಣಿಗೆ ಧರಣಿ ಕಾರ್ಯಕ್ರಮ ದಿನಾಂಕ:- 09/02/2026 ರ ಸೋಮವಾರ ಬೆಳಿಗ್ಗೆ 11:30 ಜರುಗುವುದು.ರಾಜ್ಯ ಪದಾಧಿಕಾರಿಗಳು:-ಕಾರ್ಯಕ್ರಮದಲ್ಲಿ ಭಾಗವಹಿಸುವರು ಡಾ, ಡಿ.ಜಿ ಸಾಗರ. ರಾಜ್ಯ ಸಂಚಾಲಕರು ಬೆಂಗಳೂರು, ಶ್ರೀ ಮಾರುತಿ ಬೌದ್ಧೆ ರಾಜ್ಯ ಸಂಘಟನಾ ಸಂಚಾಲಕರು ಬೀದರ್, ಶ್ರೀ ಎ.ಮಾನಯ್ಯ ರಾಜ್ಯ ಸಂಘಟನಾ ಸಂಚಾಲಕರು ಬಳ್ಳಾರಿ, ಶ್ರೀ ಡಿ.ಸಿ ವಾಲಿ. ರಾಜ್ಯ ಖಜಾಂಚಿ ಕಲಬುರ್ಗಿ, ಶ್ರೀ ಶ್ರೀಮಂತ ನಡುವಿನಕೇರಿ ಧಾರವಾಡ, ಜಿಲ್ಲಾ ಪದಾಧಿಕಾರಿಗಳು:-ಮಲ್ಲೇಶ.ಚುಂಚನಹಳ್ಳಿ ಮೈಸೂರು, ಶ್ರೀ ಕಾಂತ.ತಳವಾರ ಬೆಳಗಾವಿ, ವಾಯ್.ಸಿ ಮಯೂರ ವಿಜಯಪುರ, ಸಿದ್ದು. ರಾಮಣ್ಣನವರ, ವಿಜಯಪುರ, ಸುರೇಶ ಹಾದಿಮನಿ ಕಲಬುರ್ಗಿ, ಉಮೇಶ.ನರೋಣ ಕಲಬುರ್ಗಿ, ಶಿವಪುತ್ರ. ಜವಳಿ. ಯಾದಗಿರಿ, ರಂಗಪ್ಪ.ಹೆಗಡೆ ರಾಯಚೂರು, ಮರಿಯಪ್ಪ. ಕುಂಟೋಜಿ ಕೊಪ್ಪಳ, ಗಂಗಪ್ಪ.ಸಿರಗುಪ್ಪಾ ಬಳ್ಳಾರಿ, ರಮೇಶ್.ಬಾಳಮ್ಮನವರ್ ಗದಗ, ಅರುಣ ಪಟೇಲ್ ಬೀದರ್, ಎಂ.ವಿ ಕೃಷ್ಣಾ. ಮಂಡ್ಯ, ಎಂ.ಶಿವಣ್ಣ ಚಲವಾದಿ ಚಾಮರಾಜನಗರ, ಕ್ಯಾಲಸನಹಳ್ಳಿ ಶ್ರೀ ನಿವಾಸ ಬೆಂಗಳೂರು, ನಿಖಿಲ್ ರಾಮನಗರ, ಪರಶುರಾಮ ಕಾಂಬಳೆ ಬಾಗಲಕೋಟೆ, ಪುಂಡಲೀಕ.ಚಲವಾದಿ ಧಾರವಾಡ, ಬಾಲಕೃಷ್ಣ ಚಿಕ್ಕಮಗಳೂರು, ಮರಿಸ್ವಾಮಿ.ಕೊಟ್ಟೂರು ವಿಜಯನಗರ, ಶಿವಾಜಿ.ಬನವಾಸಿ ಕಾರವಾರ, ಕೃಷ್ಣಪ್ಪ. ಕರಣಿಕ ಕಲಬುರ್ಗಿ.
ಪ್ರಮುಖ ಬೇಡಿಕೆಗಳು:-
ವಿಶ್ವವಿದ್ಯಾಲಯ ಅನುದಾನ ಆಯೋಗ SC/ST ಮತ್ತು OBC ವಿದ್ಯಾರ್ಥಿಗಳಿಗೆ ಸಮಾನತೆ ಪ್ರೋತ್ಸಾಹಿಸಲು ತಂದಿರುವ ನಿಯಮಾವಳಿ (2026) ಗಳಿಗೆ ಸುಪ್ರೀಂಕೋರ್ಟ್ ನೀಡಿರುವ ತಡೆ ಆಜ್ಞೆಯನ್ನು ತೆರವು ಗೊಳಿಸಬೇಕು.
1) ‘ರೋಹಿತ್ ವೇಮುಲ ಕಾಯಿದೆ’ಯನ್ನು ಕರ್ನಾಟಕ ಸರ್ಕಾರ ಜಾರಿ ಗೊಳಿಸಲೇ ಬೇಕು
2) SC/ST ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಜಾತಿ, ಧರ್ಮ, ಇನ್ನಿತರ ತಾರತಮ್ಯ ಆಗುತ್ತಿರುವುದನ್ನು ತಡೆ ಗಟ್ಟಲು ಮಾಡಿರುವ UGC ನಿಯಮಾವಳಿಗಳನ್ನು
ಕೇಂದ್ರ ಸರ್ಕಾರ ಕೂಡಲೇ ಜಾರಿಗೆ ತರಲು ಒತ್ತಾಯಿಸಿ
ರಾಜ್ಯದಾದ್ಯಂತ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ
ಪ್ರತಿಭಟನೆ ಮೆರವಣಿಗೆ ಧರಣಿ ಜರುಗುವುದು.
ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC)
ಅಧಿಸೂಚನೆ ನವದೆಹಲಿ, 13 ಜನೇವರಿ, 2026
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ) ನಿಯಮಗಳು,
2026.1) ಸಂಕ್ಷೇಪ್ತ ಹೆಸರು, ಅನ್ವಯ ಮತ್ತು ಪ್ರಾರಂಭ

# ಈ ನಿಯಮಗಳನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ) ನಿಯಮಗಳು, 2026′ ಎಂದು ಕರೆಯಲಾಗುವುದು.
# ಇವು ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (HEI) ಅನ್ವಯಿಸುತ್ತವೆ.
# ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಇವು ಜಾರಿಗೆ ಬರುತ್ತವೆ.
2. ಉದ್ದೇಶ:-
# ಧರ್ಮ, ಜನಾಂಗ, ಲಿಂಗ, ಹುಟ್ಟಿದ ಸ್ಥಳ, ಜಾತಿ ಅಥವಾ ಅಂಗ ವೈಕಲ್ಯದ ಆಧಾರದ ಮೇಲೆ ನಡೆಯುವ ತಾರತಮ್ಯವನ್ನು ತೊಡೆದು ಹಾಕುವುದು, ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಿತ ರಕ್ಷಣೆ ಮಾಡುವುದು ಮತ್ತು ಉನ್ನತ ಶಿಕ್ಷಣದಲ್ಲಿ ಸಮಾನತೆಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
8. ಪ್ರಮುಖ ವ್ಯಾಖ್ಯಾನಗಳು:-
# ತಾರತಮ್ಯ (Discrimination)- ಧರ್ಮ, ಜಾತಿ, ಲಿಂಗ ಅಥವಾ ಅಂಗ ವೈಕಲ್ಯದ ಆಧಾರದ ಮೇಲೆ ಯಾವುದೇ ವ್ಯಕ್ತಿಯ ವಿರುದ್ಧ ತೋರುವ ಅನ್ಯಾಯದ ಅಥವಾ ಪಕ್ಷಪಾತದ ವರ್ತನೆ.
# ಸಮಾನತೆ (Equity)- ಎಲ್ಲಾ ಪಾಲುದಾರರಿಗೆ ಅವರ ಹಕ್ಕುಗಳನ್ನು ಅನುಭವಿಸಲು ಸಮಾನ ಅವಕಾಶಗಳನ್ನು ಒದಗಿಸುವುದು.
# ನೊಂದ ವ್ಯಕ್ತಿ (Aggrieved Person ) –
ಈ ನಿಯಮಗಳ ಅಡಿಯಲ್ಲಿ ಯಾವುದೇ ದೂರ ಅಥವಾ ಅಸಮಾಧಾನ ಹೊಂದಿರುವ ವ್ಯಕ್ತಿ.
4. ಸಮಾನತೆಯನ್ನು ಉತ್ತೇಜಿಸುವ ಕರ್ತವ್ಯ:-
ಮಾಡುವ ಮತ್ತು ಎಲ್ಲಾ ಪಾಲುದಾರರಲ್ಲಿ ಸಮಾನತೆಯನ್ನು ಉತ್ತೇಜಿಸುವ ಕರ್ತವ್ಯವನ್ನು ಹೊಂದಿರುತ್ತದೆ. ಯಾವುದೇ ರೀತಿಯ ತಾರತಮ್ಯವನ್ನು ಸಂಸ್ಥೆಯು ಸಹಿಸಬಾರದು. ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ತಾರತಮ್ಯವನ್ನು ನಿರ್ಮೂಲನೆ5.
(ಸಮಾನ ಅವಕಾಶ ಕೇಂದ್ರ-EOC):-
ಪ್ರತಿಯೊಂದು ಸಂಸ್ಥೆಯು ಹಿಂದುಳಿದ ಗುಂಪುಗಳಿಗಾಗಿ ಕಾರ್ಯಕ್ರಮಗಳನ್ನು ಜಾರಿ ಗೊಳಿಸಲು ‘ಸಮಾನ ಅವಕಾಶ ಕೇಂದ್ರವನ್ನು ಸ್ಥಾಪಿಸ ಬೇಕು.
# ಕನಿಷ್ಠ ಐದು ಅಧ್ಯಾಪಕರಿಲ್ಲದ ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ಸಂಬಂಧಿತ ವಿಶ್ವವಿದ್ಯಾಲಯದ ಕೇಂದ್ರವು ನಿರ್ವಹಿಸುತ್ತದೆ.
# ಸಮಾನತೆ ಸಮಿತಿ (Equity Committee) – ಸಂಸ್ಥೆಯ ಮುಖ್ಯಸ್ಥರು ಇದರ ಅಧ್ಯಕ್ಷರಾಗಿರುತ್ತಾರೆ ಮತ್ತು ಇದರಲ್ಲಿ ಅಧ್ಯಾಪಕರು, ಸಿಬ್ಬಂದಿ, ನಾಗರೀಕ ಸಮಾಜದ ಪ್ರತಿ ನಿಧಿಗಳು ಮತ್ತು ವಿದ್ಯಾರ್ಥಿಗಳು ಸದಸ್ಯರಾಗಿರುತ್ತಾರೆ.

6. ಸಮಾನತೆ ಸಹಾಯವಾಣಿ (Equity Helpline):-
ಪ್ರತಿಯೊಂದು ಸಂಸ್ಥೆಯು ತಾರತಮ್ಯಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ದೂರು ನೀಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ಹೊಂದಿರ ಬೇಕು.
7. ಸಮಾನತೆ ಉತ್ತೇಜನಕ್ಕಾಗಿ ಕ್ರಮಗಳು:-
ಪ್ರವೇಶಾತಿಯ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಿಂದ ‘ತಾರತಮ್ಯ ಮಾಡುವುದಿಲ್ಲ’ ಎಂದು ಮುಚ್ಚಳಿಕೆ ಪತ್ರವನ್ನು ಪಡೆಯ ಬೇಕು.
ಕ್ಯಾಂಪಸ್‌ನಲ್ಲಿ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು ಪೋಸ್ಟರ್‌ಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸ ಬೇಕು.
ವೃತ್ತಿಪರ ಆಪ್ತ ಸಮಾಲೋಚಕರ (Counselors) ಸಹಾಯವನ್ನು ಪಡೆಯ ಬೇಕು.
8. ದೂರು ನೀಡುವ ವಿಧಾನ:-
# ನೊಂದ ವ್ಯಕ್ತಿಯು ಆನ್‌ಲೈನ್ ಪೋರ್ಟಲ್,
ಇ-ಮೇಲ್ ಅಥವಾ ಲಿಖಿತ ರೂಪದಲ್ಲಿ ಸಮಾನ ಅವಕಾಶ ಕೇಂದ್ರದ ಸಂಯೋಜಕರಿಗೆ ದೂರು ನೀಡಬಹುದು.
ದೂರು ನೀಡಿದವರ ಗುರುತನ್ನು ಗೌಪ್ಯ ವಾಗಿಡಲಾಗುವುದು.
# ಸಮಾನತೆಯ ಸಮಿತಿಯು ದೂರು ಬಂದ 24 ಗಂಟೆಗಳ ಒಳಗೆ ಸಭೆ ಸೇರಿ ಕ್ರಮ ಕೈಗೊಳ್ಳ ಬೇಕು ಮತ್ತು ಕೆಲಸದ ದಿನಗಳೊಳಗೆ ವರದಿ ಸಲ್ಲಿಸ ಬೇಕು.
9. (ಮೇಲ್ಮನವಿ):-
ಸಮಿತಿಯ ವರದಿಯಿಂದ ಅತೃಪ್ತರಾದವರು 30 ದಿನಗಳೊಳಗೆ ‘ಒಂಬುಡ್ಸ್ ಮನ್ (Ombudsperson)ಗೆ ಮೇಲ್ಮನವಿ ಸಲ್ಲಿಸಬಹುದು.
10. ಮೇಲ್ವಿಚಾರಣೆ ಮತ್ತು ವರದಿ:-
UGC ರಾಷ್ಟ್ರೀಯ ಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು ರಚಿಸುತ್ತದೆ.
# ಪ್ರತಿ ವರ್ಷ ಜನವರಿ ಅಂತ್ಯದೊಳಗೆ ಸಂಸ್ಥೆಗಳು ತಮ್ಮ ವಾರ್ಷಿಕ ವರದಿಯನ್ನು ಗಿಉಅ ಮತ್ತು ಸಂಬಂಧಿತ ಇಲಾಖೆಗಳಿಗೆ ಸಲ್ಲಿಸ ಬೇಕು.
11. ನಿಯಮ ಉಲ್ಲಂಘನೆಯ ಪರಿಣಾಮಗಳು:-
ಸಂಸ್ಥೆಯು ಈ ನಿಯಮಗಳನ್ನು ಪಾಲಿಸದಿದ್ದರೆ, UGC ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು.
# UGC ಯೋಜನೆಗಳಿಂದ ವಂಚಿತ ಗೊಳಿಸುವುದು.
ಪದವಿ ಕಾರ್ಯಕ್ರಮಗಳನ್ನು ನಡೆಸದಂತೆ ತಡೆಯುವುದು.
“ಆನ್‌ಲೈನ್ ಅಥವಾ ದೂರದ ಶಿಕ್ಷಣ ನೀಡದಂತೆ ನಿರ್ಬಂಧಿಸುವುದು.

UGC ಕಾಯಿದೆಯ ಪಟ್ಟಿಯಿಂದ ಸಂಸ್ಥೆಯನ್ನು ತೆಗೆದು ಹಾಕುವುದು.
ಎಸ್.ಸಿ. ಮತ್ತು ಎಸ್.ಟಿ. ವಿದ್ಯಾರ್ಥಿಗಳ ಮೇಲೆ ವಿಶ್ವವಿದ್ಯಾಲಯಗಳಲ್ಲಿ ಧರ್ಮ-ಜಾತಿ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳ ದೌರ್ಜನ್ಯಗಳನ್ನು ತಡೆ ಗಟ್ಟಲು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ ತಂದಿರುವ ನಿಯಮಗಳನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ. ಎಸ್/ಸಿ ಮತ್ತು ಎಸ್/ಟಿ. ವಿದ್ಯಾರ್ಥಿಗಳಿಗೆ ಮಾತ್ರ ಪತ್ಯೇಕ ನಿಯಮ ರೂಪಿಸ ಬೇಕೆಂದು ಸಮಿತಿಯು ಒತ್ತಾಯಿಸುತ್ತದೆ. UGC ತಂದಿರುವ ನಿಯಮಗಳಿಗೆ ಸುಪ್ರೀಂಕೋರ್ಟ್ ನೀಡಿರುವ ತಡೆ ಆಜ್ಞೆಯನ್ನು ತೆರವು ಗೊಳಿಸಲು ಕೇಂದ್ರ ಸರ್ಕಾರ ಕೂಡಲೇ ಮುಂದಾಗಬೇಕು ಮತ್ತು ಕೂಡಲೇ UGC ತಂದಿರುವ ನಿಯಮ SC/ST ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹೊರಡಿಸ ಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಂತ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ದಿನಾಂಕ:09-02-2026 ರಂದು ಬೆಳಿಗ್ಗೆ 11:30 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಗಡೆ ಪ್ರತಿಭಟನೆ ಮರೆವಣಿಗೆ – ಧರಣಿ ಹಮ್ಮಿಕೊಳ್ಳಲಾಗಿದೆ. ನಂತರ ಮಾನ್ಯ ಪ್ರಧಾನ ಮಂತ್ರಿಗಳಿಗೆ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರುಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗುವುದು. ಹಾಗಾಗಿ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ಮಿತ್ರರು, ಪ್ರಗತಿಪರರು ಬಂದು ಭಾಗವಹಿಸ ಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವಿನಂತಿಸಿ ಕೊಳ್ಳುತ್ತಾ ತಮ್ಮಲ್ಲಿ ಕೋರಿದೆ.

