ಕನ್ನಡ ಜಾನಪದ ಪರಿಷತ್ ಲಾಂಛನ – ಬಿಡುಗಡೆ ಸಮಾರಂಭ.

ಬಂಥನಾಳ ಫೆ.07

ಇಂಡಿ ಸಮಿಪದ ಸುಕ್ಷೇತ್ರ ಬಂಥನಾಳದಲ್ಲಿ ದಿನಾಂಕ 7-2-2026 ಮುಂ 10.30 ಘಂಟೆಗೆ ಕನ್ನಡ ಜಾನಪದ ಪರಿಷತ್ ಇಂಡಿ ತಾಲ್ಲೂಕಿನ ಎರಡನೆ ಜಾನಪದ ಸಮ್ಮೇಳನ ಲಾಂಛನ ಬಿಡುಗಡೆ ಸಮಾರಂಭ ಕಾರ್ಯಕ್ರಮ ಜರುಗಿತು.

ಈ ಸಮಾರಂಭದಲ್ಲಿ ಪರಮ ಪೂಜ್ಯ ಮ.ನಿ ಪ್ರ ಡಾ, ವೃಷಭಲಿಂಗ ಶಿವಯೋಗಿಗಳು ಫೆಬ್ರವರಿ 17 ರಂದು ನಡೆಯಲಿರುವ ಸಮ್ಮೇಳನದ ಲಾಂಛನ ಬಿಡುಗಡೆ ಗೊಳಿಸಿ ಕಾರ್ಯಕ್ರಮ ನಾಡಿನ ಎಲ್ಲಾ ಜಾನಪದ ಕಲಾವಿದರು ಒಡಗೂಡಿ ಒಂದಾಗಿ ಚಂದಾಗಿ ಕಾರ್ಯಕ್ರಮ ನಡೆಸುವುದರ ಜೊತೆಗೆ ಸಮ್ಮೇಳನದ ಸರ್ವಾಧ್ಯಕ್ಷರಾದ ಚಿದಾನಂದ ವಿ ಗೌಡಗಾ ವಿ ಅಪ್ಪಟ ಜಾನಪದ ಕಲಾವಿದರನ್ನು ಗುರುತಿಸಿದ್ದು ಹೆಮ್ಮೆಯ ವಿಷಯ ಎಂದರು.

ಹಾಗೆಯೇ ಅಂದು ಸಂಗೊಳ್ಳಿ ರಾಯಣ್ಣ ಸರ್ಕಲ್ ದಿಂದ ಮಠದ ವೇದಿಕೆ ವರೆಗೆ ಸ್ಥಬ್ದ ಚಿತ್ರಗಳು ಜೊತೆಗೆ 35 ಕಲಾ ತಂಡಗಳ ಜೊತೆಗೆ ಆದ್ದರಿಯಾದ ಮೆರವಣಿಗೆ ಹಾಗೂ ಗೊಡ್ ಗೋಷ್ಠಿಗಳು ಮಹಿಳಾ ಗೋಷ್ಠಿ ವಿವಿಧ ಜಾನಪದ ಸಾಧಕರ ಸನ್ಮಾನ ಅನೇಕ ಕಲಾ ತಂಡಗಳ ಪ್ರದರ್ಶನ ನಡೆಯುವದರಿಂದ ಊರಿನ ಜನ ಸಹಾಕಾರ ನೀಡುವುದರ ಜೊತೆಗೆ, ಕಾರ್ಯಕ್ರಮವನ್ನು ಯಶಸ್ವೀ ಗೊಳಿಸಿ ಬೇಕೆಂದು ಮಾತನಾಡಿದರು.

ತಾಲೂಕಾ ಜಾನಪದ ಪರಿಷತ್ ಅಧ್ಯಕ್ಷ ಪಂಡಿತ ಅವಜಿ ಕಾರ್ಯದರ್ಶಿ ಜಟ್ಟೆಪ್ಪ ಮಾದರ ಸಂಘಟನಾ ಕಾರ್ಯದರ್ಶಿ ಸರದಾರ ಮುಲ್ಲಾ ಊರಿನ ಅನೇಕ ಜನ ಭಾಗವಹಿಸಿದ್ದರೂ ನಂತರ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಯಿತ ಕಾರ್ಯದರ್ಶಿ ಜಟ್ಟಪ್ಪ ಸರ್ ನಿರೂಪಿಸಿದರು ಸರದಾರ ಮುಲ್ಲಾ ಸ್ವಾಗತಿಸಿ ವಂದಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ.ಬಿ ಹರಿಜನ ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button