ಅದ್ಭುತವಾಗಿ ಪ್ರದರ್ಶನ ಗೊಂಡ – ವಿವೇಕ ಸ್ಪೂರ್ತಿ ನಾಟಕ.
ಚಳ್ಳಕೆರೆ ಫೆ.08

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಸ್ವಾಮಿ ವಿವೇಕಾನಂದರ 164 ನೇ. ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಯುವ ಸಂಘದವರಿಂದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಪಾಲಿಸಿ ಕೊಂಡು ಬಂದಂತಹ ವ್ಯಕ್ತಿಗಳ ಕಥಾ ವಸ್ತುವನ್ನು ಒಳಗೊಂಡ “ವಿವೇಕ ಸ್ಪೂರ್ತಿ” ನಾಟಕವು ಸಂತೋಷ್ ಕುಮಾರ್ ಅಗಸ್ತ್ಯ ಅವರ ನೇತೃತ್ವದಲ್ಲಿ ಅತ್ಯಂತ ಅದ್ಭುತವಾಗಿ ಪ್ರದರ್ಶನ ಕಂಡಿತು.

ನಾಟಕ ಅಭಿನಯದಲ್ಲಿ ಯತೀಶ್ ಎಂ ಸಿದ್ದಾಪುರ, ಡಾ.ಭೂಮಿಕಾ, ಮೌರ್ಯ, ಸಂಜನಾ, ಮಾನ್ಯ, ಹೃತಿಕ್, ಸುಧಾಮಣಿ ಇದ್ದರೆ ಕಾರ್ಯಕ್ರಮದಲ್ಲಿ ಪೂಜ್ಯ ಮಾತಾಜೀ ತ್ಯಾಗಮಯೀ, ಡಾ, ಸಿ.ಟಿ ಬಸವರಾಜಪ್ಪ, ಲಕ್ಷ್ಮೀ, ಪುಷ್ಪಲತಾ, ಚೇತನ್, ಎಂ.ಗೀತಾ ನಾಗರಾಜ್ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

