ಅತಿ ಶೀಘ್ರದಲ್ಲೇ ಬೆಳ್ಳಿ – ತೆರೆಗೆ “ರುದ್ರಾಭಿಷೇಕಂ”.

ಬೆಂಗಳೂರು ಫೆ.10

ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರ ಅವರ ಪ್ರಥಮ ಕಾಣಿಕೆ ಚಿನ್ನಾರಿ ಮುತ್ತ ನಟ ವಿಜಯ ರಾಘವೇಂದ್ರ ವೀರಗಾಸೆ ಕಲಾವಿದನಾಗಿ ಕಾಣಿಸಿ ಕೊಳ್ಳುತ್ತಿರುವ ‘ರುದ್ರಾಭಿಷೇಕಂ’ ಚಲನ ಚಿತ್ರಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳು ಮುಕ್ತಾಯ ಹಂತದಲ್ಲಿದ್ದು ಶೀಘ್ರದಲ್ಲೇ ಬೆಳ್ಳಿ ತೆರೆಗೆ ಬರಲಿದೆ ಎಂದು ನಿರ್ದೇಶಕ ಕೆ.ವಸಂತಕುಮಾರ ತಿಳಿಸಿದ್ದಾರೆ.

ಸದ್ಯದಲ್ಲೇ ಹಾಡಿನ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಏಪ್ರಿಲ್ ತಿಂಗಳಲ್ಲಿ ಚಿತ್ರ ಬೆಳ್ಳಿತೆರೆಗೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ವಸಂತಕುಮಾರ ತಿಳಿಸಿದರು.

ಚಿತ್ರದಲ್ಲಿ ನಾಯಕರಾಗಿ ವಿಜಯ ರಾಘವೇಂದ್ರ, ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ, ಬಲರಾಜ್ ವಾಡಿ, ಶಂಕರ ನಾರಾಯಣ್, ಮೈಸೂರು ಬಸವರಾಜ್, ಬ್ಯಾಂಕ್ ಪ್ರಸಾದ, ಮನು, ಬುಲೆಟ್ ವಿನು, ವಿನಯ್, ಸನತ್, ಸಂದೀಪ್, ಮಹಾಲಿಂಗ್ ಹೂಗಾರ್, ಸೌಂದರ್ಯ, ನವನೀತ, ಮಮತಾ, ಮಂಜುಳಾ, ಧನಲಕ್ಷ್ಮಿ, ಸ್ವಾತಿ, ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಮುತ್ತುರಾಜ್, ವಿ. ಮನೋಹರ್ ಸಂಗೀತ ಚಿತ್ರಕ್ಕಿದ್ದು ಐದು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.

ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಥ್ರಿಲ್ಲರ್‌ ಮಂಜು ಸಾಹಸ, ಬಾಬುಖಾನ್ ಕಲಾ ನಿರ್ದೇಶನ, ನೊಣವಿನಕೆರೆ ಕುಮಾರ ಪ್ರಸಾಧನ, ಪಶುಪತಿ ವಸ್ತ್ರಾಲಂಕಾರ, ಮುತ್ತುರಾಜ್.ಟಿ ಸಂಕಲನ, ನಾಗೇಂದ್ರ, ಡಾ, ಪ್ರಭು.ಗಂಜಿಹಾಳ, ಡಾ, ವೀರೇಶ್ ಹಂಡಿಗಿ ಪಿ.ಆರ್.ಓ, ಸಹ ನಿರ್ದೇಶನ ಮನು ಮತ್ತು ಧೀರಜ್ ಅವರದಿದ್ದು, ಕೆ ವಸಂತ್ ಕುಮಾರ್ ಅವರ ನಿರ್ದೇಶನ ಜೊತೆಗೆ ಚಿತ್ರಕ್ಕೆ ಅವರೇ ಐದು ಹಾಡುಗಳನ್ನು ಬರೆದಿದ್ದು ವಿಶೇಷವಾಗಿದೆ. ಜಯರಾಮ್, ಕೆ.ಎಚ್ ಮಂಜುನಾಥ್, ವಿ. ವೆಂಕಟೇಶ್, ಚಿದಾನಂದ ಮೂರ್ತಿ, ಡಾ. ಶಿವಕುಮಾರ್, ಬಾಬು, ರಾಮಚಂದ್ರಪ್ಪ, ಅಶ್ವಥಪ್ಪ, ಕುಸುಮಾ ವಸಂತಕುಮಾರ ನಿರ್ಮಾಪಕರಾಗಿದ್ದಾರೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button