ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ತಾಲೂಕಿನ ಮಹಿಳೆಯರು ಸೈನಿಕರಾಗಿ ಸೇವೆಗೆ ಆಯ್ಕೆಯಾದ – ಪ್ರಯುಕ್ತ ವಿಶೇಷ ಸನ್ಮಾನ ಕಾರ್ಯಕ್ರಮ ಜರಗಿತು.

ಹುಲ್ಲೂರು ಫೆ.09

ಇಂದು ಹುಲ್ಲೂರಿನ S.ND NATIONAL PUBLIC ಶಾಲೆಯಲ್ಲಿ ತಾಲೂಕಿನ ಮಹಿಳೆಯರು ಸೈನಿಕರಾಗಿ ಸೇವೆಗೆ ಆಯ್ಕೆಯಾದ ಪ್ರಯುಕ್ತ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಿವಾನಂದ ಎಸ್ ಮಾದರ CRPF ಯೋದರು ಆಯುಷಾ ವಾಲಿಕಾರ BSF ಕಾಶಿಬಾಯಿ ವಾಲಿಕಾರ BSFಈ ಮೂವರನ್ನು ಕರೆಯಿಸಿ ಸನ್ಮಾನಿಸಿ ಇವರಿಂದ ಶಾಲೆಯ ಮಕ್ಕಳಿಗೆ ಸ್ಪೂರ್ತಿ ದಾಯಕ ಮಾತುಗಳನ್ನು ಹೇಳಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷರಾದ ಶ್ರೀ ಎಮ್.ಎಸ್ ಕೊಪ್ಪ ಅವರು ತಾವುಗಳು ತಂದೆ ತಾಯಿ ಬಂದು ಬಾಂಧವರು ಅಂತಾ ಮನೆಯಲ್ಲಿ ಇರದೆ ಹೊರ ರಾಜ್ಯದ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಲು ಅಯ್ಕೆ ಮಾಡಿಕೊಂಡು ಅಯ್ಕೆ ಆಗಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು.

ಹಾಗೇ ತಾವುಗಳು ತಂದೆ ತಾಯಿಯ ಹೆಸರು ಮಾತ್ರವಲ್ಲದೆ ತಾಲೂಕಿನ ಜಿಲ್ಲೆಯ ಹೆಸರುನ್ನು ದೇಶದಲ್ಲಿ ತರುವಂತವ ರಾಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಬಸಮ್ಮ ಹೋಲ್ಡರ್ ಹಿರಿಯ ಶಿಕ್ಷಕರು ಹಾಜರಿದ್ದರು. ಎಚ್.ಆರ್ ಭಾಗಲಕೋಟ ನಿರೂಪಿಸಿದರು.ಧಶರತ ಶಿಕ್ಷಕರು ಸ್ವಾಗತಿಸಿದರು ಬಿರಾದಾರ ಶಿಕ್ಷಕರು ವಂದಿಸಿದರು ಜೈಹಿಂದ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button